ಬಂಗಾಡಿ ಕೊಲ್ಲಿಯ ಜೋಡುಕರೆ ಸೂರ್ಯ ಚಂದ್ರ ಕಂಬಳಕ್ಕೆವಿದ್ಯುಕ್ತ ಚಾಲನೆ

ಬಂಗಾಡಿಯ ಜೋಡುಕರೆ ಸೂರ್ಯ ಚಂದ್ರ ಕಂಬಳಕ್ಕೆವಿದ್ಯುಕ್ತ ಚಾಲನೆ ದೊರೆತಿದೆ. ಬಂಗಾಡಿ ಕೊಲ್ಲಿಯ ನೇತ್ರಾವತಿ ನದಿ ಕಿನಾರೆಯಲ್ಲಿ ಇಂದು, ಮಾ. 7 ರ ಮುಂಜಾನೆ ಉಜಿರೆ ಶ್ರೀ ಸ್ವಾಮಿ ದೇವಸ್ಥಾನದ ಶರತ್ ಕೃಷ್ಣ ಪದ್ವೆತ್ನಾಯ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಕಂಬಳದ ಕೋಣಗಳನ್ನು ಮಧ್ಯಾಹ್ನ 12 ಗಂಟೆಗೆ ಕಂಬಳ ಕರೆಗೆ ಇಳಿಸಲು ಪ್ರಾರಂಭವಾಗಿದ್ದು ಒಟ್ಟು ಐದು ವಿಭಾಗಗಳಲ್ಲಿ ಕೋಣಗಳು ಸ್ಪರ್ಧೆಗೆ ಇಳಿಯಲಿವೆ. ಸೂರ್ಯ ಚಂದ್ರ ಜೋಡುಕರೆ ಕಂಬಳವು ಕಳೆದ 23 ವರ್ಷಗಳಿಂದ ಸತತವಾಗಿ ಇಲ್ಲಿ ನಡೆದುಕೊಂಡು ಬರುತ್ತಿದೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಉದ್ಘಾಟನಾ ಸಮಯದಲ್ಲಿ ಕಂಬಲಾಧ್ಯಕ್ಷ ರಂಜಾನ್ ಜಿ. ಗೌಡ, ಭರತ್ ಕುಮಾರ್, ಧಾರ್ಮಿಕ ದತ್ತಿ ಇಲಾಖೆಯ ಸದಸ್ಯರಾದ ಮುಕುಂದ ಸುವರ್ಣ, ಕೃಷ್ಣಪ್ಪ ಪೂಜಾರಿ, ಕಾಜೂರ್ ದರ್ಗಾ ಷರೀಫ್ ಅಧ್ಯಕ್ಷರಾದ ಕೆ ಯು ,ಇಬ್ರಾಹಿಂ, ಕಂಬಳದ ಕಾರ್ಯದರ್ಶಿ ಆನಂದ ಗೌಡ, ಕಿಶೋರ್ ವಳಂಬ್ರ, ತುಂಗಪ್ಪ ಪೂಜಾರಿ, ಹಾರ್ತಕಜೆ ಸೀತಾರಾಮ ಗೌಡ, ಹಲವು ಊರವರು ಮತ್ತು ಕಂಬಳಾಭಿಮಾನಿಗಳಿದ್ದರು.

Leave A Reply

Your email address will not be published.