ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಕ್ಷೇತ್ರ ಪಾಲಕಿ ದೈವ ಶ್ರೀ ಹೊಸಳಿಗಮ್ಮ ನ ಬಗ್ಗೆ ನಿಮಗೆ ಗೊತ್ತಾ? : ಅಂತಹ ಏಕೈಕ ಸ್ಥಳ ತಡಗಜೆಯಲ್ಲಿ ಮಾ.7-8 ಕ್ಕೆ ನೇಮೋತ್ಸವ
ದಕ್ಷಿಣ ಭಾರತದ ಪ್ರಸಿದ್ದ ನಾಗಕ್ಷೇತ್ರವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಕ್ಷೇತ್ರ ಪಾಲಕಿಯಾಗಿ ನೆಲೆನಿಂತ ಶ್ರೀ ಹೊಸಳಿಗಮ್ಮ ತನ್ನ ಪರಿಚಾರಕರ ಕುಟುಂಬದ ಕಾರಣಿಕದ ಧರ್ಮದೈವವಾಗಿ ನೆಲೆನಿಂತ ಅಪರೂಪದ ಮತ್ತೊಂದು ಏಕೈಕ ಸ್ಥಳ ಬೆಳ್ಳಾರೆ ಸಮೀಪದ ತಡಗಜೆಯ ಮಡಿವಾಳ ಮನೆತನ.
ದ.ಕ. ಜಿಲ್ಲೆಯಲ್ಲಿಯೇ ಕಾಣಬರುವುದು ಇವೆರಡೇಕಡೆ. ದೈವ ದೇವರುಗಳ ಧಾರ್ಮಿಕ ಕಾರ್ಯಕ್ರಮಗಳ ಚಾಕರಿಗೆ ಅತೀ ಮುಖ್ಯವಾಗಿದ್ದ ಮಡಿವಾಳ ಸಮುದಾಯ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಕ್ಷೇತ್ರಪಾಲಕಿಯಾಗಿದ್ದ ಹೊಸಳಿಗಮ್ಮನ ಚಾಕರಿಯಲ್ಲಿ ತೊಡಗಿಕೊಂಡಿತ್ತು. ಮುಂದೆ ಸಮುದಾಯದ ಹಿರಿಯರು ಬೆಳ್ಳಾರೆ ಗ್ರಾಮಕ್ಕೆ ಆರಸಿ ನೆಲೆನಿಲ್ಲತೊಡಗಿದಾಗ ಅವರೊಂದಿಗೆ ಶ್ರೀ ಹೊಸಳಿಗಮ್ಮವೂ ಆಗಮಿಸಿ ಕುಟುಂಭದ ಧರ್ಮದೈವವಾಗಿ ನೆಲೆನಿಂತು ಆರಾಧನೆಗಳು ನಡೆಯುತ್ತಿದ್ದವು. ಕಾಲಾನಂತರ ಕುಟುಂಬದ ಜಾಗ ಅತಿಕ್ರಮಣವೋ, ಕಾಲನ ಹೊಡೆತಕ್ಕೆ ಸಿಲುಕಿಯೋ ದೈವಸ್ಥಾನ ಪಾಳು ಬಿದ್ದಿದ್ದುˌಭೂಮಿಯನ್ನು ತನ್ನ ವಶದಲ್ಲಿಟ್ಟುಕೊಂಡ ಕುಟುಂಬವೊಂದು ದೈವದ ಸೊತ್ತುಗಳನ್ನು ನದಿಯಲ್ಲಿ ವಿಸರ್ಜನೆಗೊಳಿಸಿತ್ತು.
ಕಾರ್ಯಕ್ರಮದ ವಿವರಗಳು ?
ಅದೃಷ್ಟಾವಶಾತ್ ಮುಂದೆ ಇವು 3ನೇ ತಲೆಮಾರಿನ ಹಿರಿಯರಾದ ಕೊರಗ ಮಡಿವಾಳರಿಗೆ ಬೆಳ್ಳಾರೆ ಸಮೀಪದ ನದಿ ದಂಡೆಯಲ್ಲಿ ದೊರೆತು ಅದನ್ನು ತಂದು ತಡಗಜೆಯ ಮನೆಯ ಹಲಸಿನ ಮರದಲ್ಲಿಟ್ಟು ಆರಾಧಿಸಿಕೊಂಡು ಬರುವ ಮೂಲಕ ಕ್ರಮೇಣ ಪುನರಪಿ ನಡಾವಳಿ ಸಹಿತ ಪರ್ವಾದಿಗಳು ಆರಂಭಗೊಂಡವು. ಕೊರಗ ಮಡಿವಾಳರ ಸಮಯದಲ್ಲಿ ನೇಮೊತ್ಸವ ಜರಗಿ ಬಳಿಕ ತಂಬಿಲಾದಿ ಸೇವೆಗಳು ಮುಂದುವರಿಯುತ್ತಿತ್ತು. ಕ್ರಮೇಣ ಮುಂದೆ ಅಜೀರ್ಣಾವಸ್ತೆಗೆ ತಲುಪಿತ್ತು.
ನಂತರ 2004 ಮೇ 17ರಂದು ಬ್ರ|ವೇ|ಮೂ|ಶ್ರೀ ಕುಂಟಾರು ಸುಬ್ರಾಯ ತಂತ್ರಿ ಹಾಗೂ ಬ್ರ|ವೇ|ಮೂ| ಶ್ರೀ ರವೀಶ್ ತಂತ್ರಿಯವರ ನೇತ್ರತ್ವದಲ್ಲಿ ಪ್ರತಿಷ್ಠಾಧಿ ಕಾರ್ಯವು ನಡೆದಿದ್ದು 12 ವರ್ಷಗಳ ಬಳಿಕ ಅಷ್ಟಮಂಗಲ ಚಿಂತನೆ ನಡೆಸಿದಂತೆ ಈಗ ನೂತನ ನಾಗನ ಕಟ್ಟೆˌ ಗುಳಿಗನ ಕಟ್ಟೆಯ ಪ್ರತಿಷ್ಠೆˌ ಶ್ರೀ ಧರ್ಮದೈವ ಹೊಸಳಿಗಮ್ಮ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಶೇಕ ನಡೆಯುತ್ತಿದೆ.
ತಡಗಜೆˌ ಬಾಳಿಲ ˌಪನ್ನೆˌದೇರಂಪಾಲುˌ ಪರ್ಲಡ್ಕˌ ಡೆಮ್ಮಲೆ 6 ವಿಭಾಗಗಳ ಕುಟುಂಬಗಳನ್ನೊಳಗೊಂಡ ತಡೆಗಜೆ ತರವಾಡಿಗೆ ಶ್ರೀ ಹೊಸಳಿಗಮ್ಮ ಆಭೀಷ್ಠೆಗಳನ್ನು ನೆರವೇರಿಸುವ ಕಾರಣಿಕದ ಧರ್ಮದೇವತೆಯಾಗಿ ನೆಲೆ ನಿಂತಿದ್ದಾರೆ.