ಶ್ರೀ ಹನುಮಾನ್ ಸಾಂತ್ವನ ಮಂದಿರ ಯೋಜನೆ ಮತ್ತು ಹನುಮಾನ್ ಫೌಂಡೇಶನ್ ನಿಂದ ಸಾಮೂಹಿಕ ಹನುಮಯಜ್ಞ, ಕಲ್ಪೋಕ್ತಪೂಜೆ, ಸಾಮೂಹಿಕ ಹನುಮಾನ್ ಚಾಲಿಸಾ ಪಾರಾಯಣ
ಪುತ್ತೂರು : ಧ್ಯಾನಸ್ಥ ಶ್ರೀ ಹನುಮಾನ್ ಸಾಂತ್ವನ ಮಂದಿರ ಯೋಜನೆ ಭರತಪುರ ಮತ್ತು ಹನುಮಾನ್ ಫೌಂಡೆಶನ್ ಮುಂದಾಳತ್ವದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಆಧ್ಯಾತ್ಮಿಕ ಚಿಂತಕರು, ಹನುಮದೋಪಾಸಕರು ಡಾ| ಶ್ರೀಶ್ರೀಶ್ರೀ ರಾಮಚಂದ್ರ ಗುರೂಜಿ ಮತ್ತು ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಕುಕ್ಕಾಜೆಯ ಧರ್ಮದರ್ಶಿ ಶ್ರೀ ಕೃಷ್ಣ ಗುರೂಜಿಯ ಶುಭಾಶಿರ್ವಾದಗಳೋಂದಿಗೆ ಹನುಮ ಜಯಂತಿಯ ಪ್ರಯುಕ್ತ ಲೋಕ ಕಲ್ಯಾಣರ್ಥ, ಸಕಲ ಕಷ್ಟ ಹಾಗೂ ಗ್ರಹಚಾರ ದೋಷ ನಿವಾರಣೆಗಾಗಿ ಶ್ರೀ ಕೃಷ್ಣ ಉಪದ್ಯಾಯರ ಪೌರೋಹಿತ್ಯದಲ್ಲಿ ಸಾಮೂಹಿಕ ಹನುಮಯಜ್ಞ ಮತ್ತು ಹನುಮಾನ್ ಕಲ್ಪೋಕ್ತ ಪೂಜೆ ಹಾಗೂ ಸಾಮೂಹಿಕ ಹನುಮಾನ್ ಚಾಲಿಸಾ ಪಾರಾಯಣ ಎಪ್ರಿಲ್ 8 ರಂದು ಕೆಮ್ಮಾಯಿಯ ಭರತಪುರದಲ್ಲಿ ನಡೆಯಲಿದೆ.
ಈ ವಿಷಯವನ್ನು ಶ್ರೀ ಹನುಮಾನ್ ಸಾಂತ್ವನ ಮಂದಿರ ಯೋಜನೆ ಭರತಪುರದ ಅದ್ಯಕ್ಷ ಶ್ರೀ ಚೇತನ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಎಪ್ರಿಲ್ 8 ರಂದು ಬೇಳಗ್ಗೆ ಸಾಮೂಹಿಕ ಹನುಮ ಯಜ್ಞ ದೋಂದಿಗೆ ಅರಂಭಗೋಂಡು, ಮದ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಹನುಮೋತ್ಸವ 2020 ಎಂಬ ನೃತ್ಯ-ಗಾನ-ವೈಭವ ಕಾರ್ಯಕ್ರಮ, ರಾತ್ರಿ ಶ್ರೀ ವೀರ ಹನುಮ ಎಂಬ ಯಕ್ಷಗಾನ ಬಯಲಾಟದೊಂದಿಗೆ ಮುಕ್ತಯಗೋಳ್ಳಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕರಾದ ಶ್ರೀ ದಿಲಿಪ್ ಕುಮಾರ್, ಕಾರ್ಯದರ್ಶಿ ಶ್ರೀಮತಿ ಲಿಲಾವತಿ, ಸಂಘಟನಾ ಕಾರ್ಯದರ್ಶಿ ಶ್ರೀ ಮೋಹನ ಸಿಂಹವನ, ಕಲಾವಿದ ಶ್ರೀ ಕೃಷ್ಣಪ್ಪ ಶಿವನಗರ ಉಪಸ್ಥಿತರಿದ್ದರು.