ಬಸ್‌ನಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯ ಅಸಭ್ಯ ವರ್ತನೆ : ಪೊಲೀಸರ ವಶಕ್ಕೆ

ಮನೆಯಲ್ಲಿ ನೈತಿಕ ಶಿಕ್ಷಣ ನೀಡದ ಪರಿಣಾಮ !!

 

ಪುತ್ತೂರು: ಬೆಳ್ಳಾರೆ ಯಿಂದ ಮಾಡಾವು ಮೂಲಕ ಪುತ್ತೂರಿಗೆ ಹೋಗುವ ಬಸ್‌ನಲ್ಲಿ ಅನ್ಯಕೋಮಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯೊಬ್ಬರು ಅಸಭ್ಯವಾಗಿ ವರ್ತಿಸುತ್ತಿದ್ದಾರೆಂದು ಆರೋಪಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ವಿದ್ಯಾರ್ಥಿಗಳಿಬ್ಬರನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮಾ.4ರಂದು ಬೆಳಿಗ್ಗೆ ನಡೆದ ಬಗ್ಗೆ ವರದಿಯಾಗಿದೆ.

ಇವರು ಬಸ್‌ನಲ್ಲಿ ಕೆಳದಿನಗಳಿಂದ ಅತಿರೇಕದ ವರ್ತನೆಗಳು ನಡೆಯುತ್ತಿದ್ದು,ಈ ವಿಚಾರವನ್ನು ಇತರ ವಿದ್ಯಾರ್ಥಿಗಳು ಹಿಂದು ಸಂಘಟನೆಗಳ ಮುಖಂಡರ ಗಮನಕ್ಕೆ ತಂದಿದ್ದರು.

ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಖಾಸಗಿ ಕಾಲೇಜೊಂದರ ವಿದ್ಯಾರ್ಥಿ ಪಾಲ್ತಾಡಿ ಗ್ರಾಮದ ಚೆನ್ನಾವರ ದ ಮುನಾಝ್ ಮತ್ತು ಫ್ಯಾಶನ್ ಡಿಸೈನಿಂಗ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಪಾಲ್ತಾಡಿ ಗ್ರಾಮದ ಅಂಕತ್ತಡ್ಕದ ನಿವಾಸಿ ಬಸ್‌ನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದವರು.

ಹಿಂದೂ ಸಂಘಟನೆ ಕಾರ್ಯಕರ್ತರು ಪುತ್ತೂರು ಬಸ್ ನಿಲ್ದಾಣದಲ್ಲಿ ಅವರಿಬ್ಬರನ್ನು ಪ್ರಶ್ನಿಸಿ ಬಳಿಕ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪೊಲೀಸರು ವಿದ್ಯಾರ್ಥಿಗಳಿಬ್ಬರನ್ನು ಠಾಣೆಗೆ ಕರೆದೊಯ್ದಿದ್ದಾರೆ. ಠಾಣೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಂಘಟನೆ ಮತ್ತು ಸಾರ್ವಜನಿಕರು ಜಮಾಯಿಸಿದ್ದರು.

Leave A Reply

Your email address will not be published.