ಪುತ್ತೂರು ನಗರಸಭೆಯ ರೂ.46.11 ಕೋಟಿಯ ಮುಂಗಡಪತ್ರ ಮಂಡನೆ : ರೂ.67.55 ಲಕ್ಷ ಮಿಗತೆ ನಿರೀಕ್ಷೆ
ಪುತ್ತೂರು; ನಗರಸಭೆಯ ಆಡಳಿತಾಧಿಕಾರಿ ಅವರ ಅನುಮೋದನೆಯೊಂದಿಗೆ ಪುತ್ತೂರು ನಗರಸಭಾ ಪೌರಾಯುಕ್ತೆ ರೂಪಾ ಟಿ.ಶೆಟ್ಟಿ 2020-21 ಸಾಲಿನ ನಗರಸಭೆಯ ರೂ.46.11 ಕೋಟಿಯ ಮುಂಗಡಪತ್ರವನ್ನು ಬುಧವಾರ ನಗರಸಭಾ ಸಭಾಂಗಣದಲ್ಲಿ ಮಂಡಿಸಿದರು. ಮುಂಗಡ ಪತ್ರದಲ್ಲಿ ರೂ.67.55 ಲಕ್ಷ ಮಿಗತೆಯನ್ನು ನಿರೀಕ್ಷಿಸಲಾಗಿದೆ.
2020-21 ಸಾಲಿನಲ್ಲಿ ನಿರೀಕ್ಷಿತ ಸಂಪನ್ಮೂಲಗಳು ಈ ರೀತಿ ಇವೆ. ಆರಂಭಿಕ ಶಿಲ್ಕು ರೂ.7.47 ಕೋಟಿ, ಸ್ವಂತ ಆದಾಯ ರೂ.12.46 ಕೋಟಿ, ವೇತನ ಅನುದಾನ ಮತ್ತು ವಿದ್ಯುತ್ ಅನುದಾನ ರಾಜ್ಯ ಹಣಕಾಸು ಮುಕ್ತ ನಿಧಿ ಅನುದಾನ ಹಾಗೂ ಇತರ ಅನುದಾನಗಳು ರೂ. 11.09 ಕೋಟಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ಅನುದಾನ ರೂ.7.35 ಕೋಟಿ, ಇತರ ಹೊಂದಾಣಿಕೆ ಮೊತ್ತ ರೂ. 4.65 ಕೋಟಿ. ಒಟ್ಟು ರೂ.46.78 ಕೋಟಿ.
ನಿರೀಕ್ಷಿತ ಆದಾಯ
ಪುತ್ತೂರು ನಗರಸಭೆಗೆ 2020-21 ಸಾಲಿನಲ್ಲಿ ನಿರೀಕ್ಷಿಸಲಾದ ಒಟ್ಟು ಸ್ವಂತ ಆದಾಯಗಳಲ್ಲಿ ಕೆಲವೊಂದು ಪ್ರಮುಖ ಆದಾಯಗಳ ವಿವರ ಈ ರೀತಿ ಇದೆ. ಆಸ್ತಿ ತೆರಿಗೆ ರೂ.4.72 ಕೋಟಿ, ನೀರಿನ ಶುಲ್ಕ ರೂ.3.25 ಕೋಟಿ, ನೀರಿನ ಸಂಪರ್ಕ ಶುಲ್ಕ ರೂ 15 ಲಕ್ಷ, ಕಟ್ಟಡ ಪರವಾನಿಗೆ ಶುಲ್ಕ ರೂ.40 ಲಕ್ಷ, ಅಭಿವೃದ್ಧಿ ಶುಲ್ಕ ರೂ.40 ಲಕ್ಷ, ಉದ್ಯಮ ಪರವಾನಿಗೆ ಶುಲ್ಕ ರೂ.40 ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆ ಶುಲ್ಕ ರೂ.85 ಲಕ್ಷ, ವಾಣಿಜ್ಯ ಸಂಕೀರ್ಣದ ಬಾಡಿಗೆ ರೂ.40 ಲಕ್ಷ, ಮಾರುಕಟ್ಟೆ ಮತ್ತು ನೆಲ ಬಾಡಿಗೆಯಿಂದ ರೂ. 36.50 ಲಕ್ಷ, ಪರಿಕರ ಸಂಗ್ರಹಣೆ ಶುಲ್ಕದಿಂದ ರೂ.10 ಲಕ್ಷ, ಖಾತೆ ಬದಲಾವಣೆ, ಇತರ ಬಾಬ್ತುಗಳಿಂದ ರೂ.25 ಲಕ್ಷ , ದಂಡಗಳಿಂದ ರೂ.60 ಲಕ್ಷ , ಪುರಭವನ ಬಾಡಿಗೆಯಿಂದ ರೂ. 5 ಲಕ್ಷ, ಜಾಹೀರಾತು ಶುಲ್ಕಗಳಿಂದ ರೂ.6 ಲಕ್ಷ ಆದಾಯವನ್ನು ನಿರೀಕ್ಷಿಸಲಾಗಿದೆ.
ಖರ್ಚು- ವೆಚ್ಚಗಳು
ರಸ್ತೆ ಮತ್ತು ನಿರ್ಮಾಣಕ್ಕಾಗಿ ರೂ.8 ಕೋಟಿ, ಚರಂಡಿ ನಿರ್ಮಾಣ ರೂ.1.50 ಕೋಟಿ, ನೀರು ಸರಬಾರಜು ವ್ಯವಸ್ಥೆಗೆ ರೂ.5.10 ಕೋಟಿ, ಭೂಮಿ ಖರೀದಿಗೆ ರೂ.75 ಲಕ್ಷ, ಸರ್ಕಲ್ ಮತ್ತು ಸ್ಥಿರಾಸ್ತಿಗಳಿಗೆ ರೂ. 70 ಲಕ್ಷ, ಕಚೇರಿ ಸಲಕರಣೆಗಳಿಗಾಗಿ ರೂ.10 ಲಕ್ಷ, ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕಾಗಿ ರೂ.30 ಲಕ್ಷ, ಪೀಠೋಪಕರಣ ಖರೀದಿಗೆ ರೂ.15 ಲಕ್ಷ, ಮೋರಿ ನಿರ್ಮಾಣಕ್ಕಾಗಿ ರೂ.25 ಲಕ್ಷ, ಚರಂಡಿ ನಿರ್ಮಾಣಕ್ಕಾಗಿ ರೂ.50 ಲಕ್ಷ, ಉದ್ಯಾನವನ ನಿರ್ಮಾಣಕ್ಕಾಗಿ ರೂ.60 ಲಕ್ಷ, ನಗರಸಭೆಯ ಹೊಸ ಕಟ್ಟಡ ನಿರ್ಮಾಣಕ್ಕಾಗಿ ರೂ.2 ಕೋಟಿ, ಘನತ್ಯಾಜ್ ಘಟಕ ನಿರ್ಮಾಣಕ್ಕಾಗಿ ರೂ.2 ಕೋಟಿ, ಹೊಸ ವಾಹನ ಖರೀದಿಗಾಗಿ ರೂ.1.40 ಕೋಟಿ, ಪರಿಶಿಷ್ಠ ಜಾತಿ – ಪಂಗಡಗಳಿಗಾಗಿ ರೂ.93.96 ಲಕ್ಷ, ಬಿ.ಪಿ.ಎಲ್ ಕುಟುಂಬಗಳಿಗಾಗಿ ರೂ.28.26 ಲಕ್ಷ, ಭಿನ್ನ ಸಾಮಾಥ್ರ್ಯದ ಫಲಾನುಭವಿಗಳಿಗಾಗಿ ರೂ.89.49 ಲಕ್ಷ, ಗಣಕಯಂತ್ರ ಮತ್ತು ಇತರ ಯಂತ್ರಗಳ ಖರೀದಿಗೆ ರೂ.15 ಲಕ್ಷ , ದಾರಿ ದೀಪ ವ್ಯವಸ್ಥೆಗೆ ರೂ.90 ಲಕ್ಷ, ನೀರು ಸರಬರಾಜು ಹೊರಗುತ್ತಿಗೆಗೆ ರೂ.60 ಲಕ್ಷ, ಸಿಬ್ಬಂದಿ ವೇತನಕ್ಕಾಗಿ ರೂ.2.58 ಕೋಟಿ.
ಇದು ಸೌಕರ್ಯ
ನಗರಸಭೆಗೆ 2019-20 ನೇ ಸಾಲಿನಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿಗಾಗಿ ರೂ.4 ಕೋಟಿ ಇಕೆಯಾಗಿದೆ. ರೂ.2 ಕೋಟಿ ವೆಚ್ಚದಲ್ಲಿ ಮತ್ತು ರೂ.2 ಕೋಟಿಯನ್ನು ನಗರಸಭೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಕಾದಿರಿಸಲಾಗಿದೆ. ನಗರೋತ್ಥಾನ ಯೋಜನೆಯಲ್ಲಿ ರೂ.25 ಕೋಟಿ ಹಂಚಿಕೆಯಾಗಿದ್ದು, ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಹಾಗೂ ನಗರಸಭೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ರೂ. 1 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಸಂಪೂರ್ಣ ಸ್ವಚ್ಛತೆಯ ಯೋಜನೆಗಾಗಿ ಪೌರಕಾರ್ಮಿಕರ ನೇಮಕªಗಿದ್ದು, 10 ಬೊಲೆರೊ ವಾಹನಗಳು ಹಾಗೂ 2 ಟಿಪ್ಪರ್ ವಾಹನಗಳನ್ನು ಖರೀದಿಸಲಾಗುವುದು.
ಈ ಸಂದರ್ಭ ಮುಖ್ಯ ಲೆಕ್ಕಾಧಿಕಾರಿ ಸಿ.ಆರ್.ದೇವಾಡಿಗ, ಕಂದಾಯ ಅಧಿಕಾರಿ ರಾಮಯ್ಯ ಗೌಡ, ಪರಿಸರ ಎಂಜಿನಿಯರ್ ಗುರುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.