ನೆಲ್ಯಾಡಿಯಲ್ಲಿ ಸಮಾನ ಮನಸ್ಕರ ವೇದಿಕೆವತಿಯಿಂದ ಅಂತರ್ ವಿಶ್ವವಿದ್ಯಾನಿಲಯ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟ : ಮಾ.6 ಕ್ಕೆ

ಪುತ್ತೂರು : ಸಮಾನ ಮನಸ್ಕರ ವೇದಿಕೆ ನೆಲ್ಯಾಡಿ ವತಿಯಿಂದ ದಿನಾಂಕ 6-03-2020 ರಂದು ಶುಕ್ರವಾರ ಸಂಜೆ 5.30 ಕ್ಕೆ ಜ್ಞಾನೋದಯ ಬೆಥನಿ ವಿದ್ಯಾಲಯದ ಮೈದಾನದಲ್ಲಿ ಅಂತರ್ ವಿಶ್ವವಿದ್ಯಾನಿಲಯಗಳ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟವನ್ನು ಎರ್ಪಡಿಸಲಾಗಿದೆ ಎಂದು ಸಮಿತಿಯ ಅದ್ಯಕ್ಷರಾದ ರೆ|ಡಾ|ವರ್ಗಿಸ್ ಕೈಪನಡುಕ ಇಂದು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

 

ಸಮಾನ ಮನಸ್ಕರ ವೇದಿಕೆಯನ್ನು ದೃಡಪಡಿಸಲು ಜಾತಿ,ಮತ,ಧರ್ಮ ರಾಜಕೀಯ ಬೇದಭಾವವಿಲ್ಲದೇ ಎಲ್ಲರನ್ನೂ ಒಟ್ಟು ಸೇರಿಸುವ ದೃಷ್ಠಿಯಿಂದ, ಎಲ್ಲರಿಗೂ ಸಮಬಾಳು, ಎಲ್ಲರಿಗೂ ಸಮಪಾಲು ಎನ್ನುವ ಆಶಯದೊಂದಿಗೆ ನಾವೆಲ್ಲರೂ ಒಂದೇ ಎನ್ನುವ ಬಾವನೆಯೊಂದಿಗೆ ನೆಲ್ಯಾಡಿಯ ಸಮಗ್ರ ಅಭಿವೃದ್ದಿಗೆ ಶ್ರಮಿಸುವ ಸಂಸ್ಥೆಯಾಗಿದೆ ಎಂದು ತಿಳಿಸಿದರು.

ವಾಲಿಬಾಲ್ ಪಂದ್ಯಾಟದಲ್ಲಿ ಆಳ್ವಾಸ್, ಕೋಟ್ಟಾಯಂ, ಕ್ಯಾಲಿಕಟ್ ಸಾಯಿ, ಎಸ್.ಡಿ.ಎಂ ಉಜಿರೆ, ಬಸ್ರೂರು, ಹಾಗೂ ಶಾರದಾ ಕಾಲೇಜು ಮಂಗಳೂರು, ಮತ್ತು ಮಹಿಳೆಯರ ಪ್ರದರ್ಶನ ಪಂದ್ಯಾಟದಲ್ಲಿ ತಲಚ್ಚೆರಿ ಸಾಯಿ, ಆಳ್ವಾಸ್ ನ ತಂಡಗಳು ಭಾಗವಹಿಸಲಿವೆ.

ಪತ್ರಿಕಾಗೋಷ್ಠಿಯಲ್ಲಿ ಉಪಾದ್ಯಕ್ಷರಾದ ಕೆ.ಪಿ ಟಿಟ್ಟಿ, ರಪೀಕ್, ಸದಸ್ಯರಾದ ಉದಯ ಕುಮಾರ್, ಮನೋಜ್ ಕೆ.ಜೆ ಉಪಸ್ಥಿತರಿದ್ದರು.

Leave A Reply

Your email address will not be published.