ಮಾ.14 ರೊಳಗೆ ಆಶ್ರಯ ಮನೆ ಕಾಮಗಾರಿ ಆರಂಬಿಸದಿದ್ದರೆ ಫಲಾನುಭವಿ ಕಪ್ಪು ಪಟ್ಟಿಗೆ!

ಬೆಂಗಳೂರು: ಆಶ್ರಯ ಮನೆ ಯೋಜನೆಯಡಿ ಹಿಂದಿನ ಸರಕಾರದ ಅವಧಿಯಲ್ಲಿ ನಿಗದಿತ ಸಮಯದಲ್ಲಿ ನಿರ್ಮಾಣ ಮಾಡಿಕೊಳ್ಳಲಾಗದೆ ತಡೆಹಿಡಿಯಲ್ಪಟ್ಟ ಮನೆಗಳನ್ನು ಮರು ನಿರ್ಮಿಸಿಕೊಳ್ಳಲು “ಇನ್ನೊಂದು ಬಾರಿ’ಯ ಅವಕಾಶ ಕಲ್ಪಿಸಲು ಸರಕಾರ ನಿರ್ಧರಿಸಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಪ್ರತಿ ವರ್ಷ ಮೂರು ಲಕ್ಷದಂತೆ 15 ಲಕ್ಷ ಮನೆ ನಿರ್ಮಾಣದ ಗುರಿ ಹಾಕಿಕೊಳ್ಳಲಾಗಿತ್ತು. ಅವರ ಅವಧಿಯಲ್ಲಿ ಸುಮಾರು 13 ಲಕ್ಷ ಮನೆಗಳನ್ನು ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು. ಆಗ ಆಯ್ಕೆಯಾದ 2.63 ಲಕ್ಷ ಮಂದಿ ಫ‌ಲಾನುಭವಿಗಳು ಸರ ಕಾರದ ನಿಯಮದ ಪ್ರಕಾರ ನಿಗದಿತ ಸಮಯದಲ್ಲಿ ಮನೆ ನಿರ್ಮಿಸಿ ಕೊಳ್ಳದಿರುವುದರಿಂದ ಅವುಗಳನ್ನು ತಡೆಹಿಡಿಯಲಾಗಿತ್ತು.

ಮಾ. 14ರೊಳಗೆ ಜಿಪಿಎಸ್‌ಗೆ ಸೂಚನೆ ಫ‌ಲಾನುಭವಿಗಳಾಗಿದ್ದೂ ಅವಕಾಶ ವಂಚಿತ ಬಡ ಕುಟುಂಬ ಗಳಿಗೆ ಒಂದು ಬಾರಿ ಮನೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲು ವಸತಿ ಇಲಾಖೆಯ ಸಂಪುಟ ಉಪ ಸಮಿತಿ ನಿರ್ಧರಿಸಿದೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಫ‌ಲಾನುಭವಿಗಳಾಗಿ ಆಯ್ಕೆಯಾಗಿದ್ದು, ವಿವಿಧ ಕಾರಣದಿಂದ ಮನೆ ಕಟ್ಟಿಕೊಳ್ಳಲಾಗದೆ ತಡೆ ಹಿಡಿಯಲ್ಪಟ್ಟ ಮನೆಗಳನ್ನು ನಿರ್ಮಿಸಿ ಕೊಳ್ಳಲು ಒಂದು ಬಾರಿ ಅವಕಾಶ ಕಲ್ಪಿಸಲಾಗಿದೆ. ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಸಿಇಒಗಳಿಗೆ ಇದರ ಜಿಪಿಎಸ್‌ ಮಾಡಲು ನಿರ್ದೇಶನ ನೀಡಿದ್ದಾರೆ.

ಮನೆ ಬ್ಲಾಕ್‌ ಆಗಿರುವ ಫ‌ಲಾನುಭವಿ ಗಳನ್ನು ಪತ್ತೆ ಹಚ್ಚಿ ಇದೇ ಮಾ. 14ರೊಳಗೆ ತಳಪಾಯ ರಚಿಸಿ, ನಿಗಮದ ಇಂದಿರಾ ಆ್ಯಪ್‌ ಮೂಲಕ ಫ‌ಲಾನುಭವಿಗಳ ಸಹಿತ ಫೋಟೊ ತೆಗೆದು ನಿಗಮಕ್ಕೆ ಅಪ್‌ಲೋಡ್‌ ಮಾಡಬೇಕು. ಆಗ ಅವರನ್ನು ಅರ್ಹ ಫ‌ಲಾನುಭವಿಗಳು ಎಂದು ಪರಿಗಣಿಸಿ, ಮೊದಲ ಕಂತಿನ ಹಣವನ್ನು ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಲಾಗುವುದು.

ಕಪ್ಪು ಪಟ್ಟಿಗೆ ಸೇರ್ಪಡೆ ಈಗ ನೀಡಿರುವ ನಿರ್ದೇಶನದಂತೆ 2020ರ ಮಾ.14ರೊಳಗೆ ಮನೆ ನಿರ್ಮಿಸಿಕೊಳ್ಳದಿದ್ದರೆ, ಅಂತಹವರನ್ನು ಶಾಶ್ವತವಾಗಿ ಸರಕಾರದ ಯಾವುದೇ ಯೋಜನೆಯಡಿ ಮನೆ ನೀಡದಂತೆ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಸೂಚಿಸಲಾಗಿದೆ

Leave A Reply

Your email address will not be published.