ಕರ್ನಾಟಕ ಪೊಲೀಸ್ ಇಲಾಖೆಯಲ್ಲಿನ 4592 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ : ಇಂದಿನಿಂದಲೇ ಶುರುಮಾಡಿ ದೈಹಿಕ ಕಸರತ್ತು

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 4592 ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ತುಂಬಿಕೊಳ್ಳಲು ಸರಕಾರ ನಿರ್ಧರಿಸಿದೆ. ಈ ಬಗ್ಗೆ ನೋಟಿಫಿಕೇಶನ್ ಹೊರಡಿಸಲು ಎಲ್ಲ ತಯಾರಿ ನಡೆದಿದೆ.

ಈ ನೇಮಕಾತಿಯು ಪೊಲೀಸ್ ಸಬ್ ಇನ್ಸ್ಪೆಕ್ಟರ್, ಆರ್ ಎಸ್ ಐ ಮತ್ತು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಾಗಿದ್ದು ವಿವರಗಳು ಈ ಕೆಳಗಿನಂತಿವೆ.

2020-21ನೇ ಸಾಲಿನಲ್ಲಿ ನೇರ ನೇಮಕಾತಿ :

ಪೊಲೀಸ್‌ ಸಬ್‌-ಇನ್ಸ್‌ಪೆಕ್ಟರ್ : 512  ಹುದ್ದೆಗಳು

  • ಮೀಸಲು ಸಬ್‌-ಇನ್ಸ್‌ಪೆಕ್ಟರ್  : 80 ಹುದ್ದೆಗಳು
  • ಪೊಲೀಸ್ ಕಾನ್ಸ್‌ಟೇಬಲ್‌(ಸಿವಿಲ್) : 2000 ಹುದ್ದೆಗಳು
  • ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ : ಹುದ್ದೆಗಳು
  • ಕೆ.ಎಸ್‌.ಆರ್.ಪಿ : 1000 ಹುದ್ದೆಗಳು
  • ಈ ಮೇಲ್ಕಂಡ ವಿವಿಧ ಹುದ್ದೆಗಳನ್ನು ವಿವಿಧ ಜಿಲ್ಲಾ ವಾರು ವಿಭಾಗಗಳಲ್ಲಿ ನೇಮಕಾತಿ ಮಾಡಲಾಗುತ್ತದೆ.

ವಿದ್ಯಾರ್ಹತೆ :

  • ಪಿಎಸ್‌ಐ : ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು.
  • ಪೊಲೀಸ್‌ ಕಾನ್ಸ್‌ಟೇಬಲ್‌ :  ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದವರು 

ವಯಸ್ಸು :

  • ಕನಿಷ್ಠ 21 ವರ್ಷ ಗರಿಷ್ಠ 35 ವರ್ಷ
  • Sc-St ಅವರಿಗೆ ಐದು ವರ್ಷದ ರಿಯಾಯಿತಿ ಇದೆ
  • 2ಎ 2ಬಿ 3ಎ 3ಬಿ ಯವರಿಗೆ ಗರಿಷ್ಠ ಮೂರು ವರ್ಷದ ರಿಯಾಯಿತಿ

ಹುದ್ದೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ  ಎರಡೂ ಇರಲಿದ್ದು, ಪೊಲೀಸ್‌ ಇಲಾಖೆಯ ಹುದ್ದೆಗಳ ಆಕಾಂಕ್ಷಿಗಳು ಈ ಹುದ್ದೆಗಳಿಗೆ ಅಗತ್ಯವಿರುವ ಶಾರೀರಿಕ ಕಸರತ್ತು , ಓಟದ ಪ್ರಾಕ್ಟೀಸ್ ಈಗಿನಿಂದಲೇ ಪ್ರಾರಂಭಿಸಿದಲ್ಲಿ ಪೊಲೀಸ್ ಕೆಲಸಕ್ಕೆ ಬೇಕಾಗುವ ಅಗತ್ಯ ದೈಹಿಕ ಧಾರ್ಡ್ಯ ವನ್ನು ಸಾಧಿಸಬಹುದು. ಯುದ್ಧಕಾಲೇ ಮಾಡುವ ಯಾವುದೇ work-out ಸರಿಯಾಗಿ ವರ್ಕ್ ಔಟ್ ಆಗುವುದಿಲ್ಲ !

ಸರಕಾರ ಇನ್ನೂ ನೋಟಿಫಿಕೇಶನ್ ಹೊರಡಿಸಿಲ್ಲ. ಈ ಕೆಳಗಿನ ವೆಬ್ ಸೈಟ್ ನಲ್ಲಿ ಶೀಘ್ರದಲ್ಲಿ ನೋಟಿಫಿಕೇಶನ್ ಹೊರಬೀಳಲಿದೆ.

ವೆಬ್ ಸೈಟ್ : http://rec19.ksp-online.in/

Leave A Reply

Your email address will not be published.