ಗುತ್ತಿಗಾರು |ಶಾಸಕರ ಸ್ವಾಗತ ಬ್ಯಾನರ್ ಮತ್ತೆ ಹರಿದ ಕಿಡಿಗೇಡಿಗಳು

ಗುತ್ತಿಗಾರು ಗ್ರಾಮದ ಚತ್ರಪಾಡಿ ಎಂಬಲ್ಲಿ ಕಳೆದ ವಾರ ಶಾಸಕರಿಗೆ ಸ್ವಾಗತ ಕೋರುವ ಬ್ಯಾನರ್ ಒಂದನ್ನು ಹಾಕಲಾಗಿದ್ದು ಅದನ್ನು ಕಿಡಿಗೇಡಿಗಳು ಹರಿದಿದ್ದರು.

ಅದಕ್ಕೆ ಪ್ರತಿಕ್ರಿಯಾತ್ಮಕ ವಾಗಿ ಬ್ಯಾನರ್ ಹರಿದ ಕಿಡಿಗೇಡಿಗಳಿಗೆ ಶ್ರದ್ಧಾಂಜಲಿ ಬ್ಯಾನರನ್ನು ಅದೇ ಸ್ಥಳದಲ್ಲಿ ಅಳವಡಿಸಲಾಗಿತ್ತು. ಅದರಲ್ಲಿ ಬ್ಯಾನರ್ ಹರಿದವರ ಪ್ರೇಎತಾತ್ಮ ಕಾನತ್ತೂರು ,ಧರ್ಮಸ್ಥಳ ದಲ್ಲಿ ಲೀನವಾಗಲಿ ಎಂಬ ಎಚ್ಚರಿಕೆ ಕೂಡ ಹಾಕಲಾಗಿತ್ತು.


ಹಾಕಲಾಗಿದ್ದ ಸ್ವಾಗತ ಬ್ಯಾನರ್ ಇದನ್ನೇ ಕಿಡಿಗೇಡಿಗಳು ಹರಿದು ಹಾಕಿದ್ದು

ಆದರೆ ಫೆ.27ರ ರಾತ್ರಿ ಅಲ್ಲೇ ಇದ್ದ ಇನ್ನೊಂದು ಬ್ಯಾನರನ್ನು ಕೂಡ ಹರಿಯಲಾಗಿದ್ದು,ಕಿಡಿಗೇಡಿಗಳ ವಿರುದ್ಧ ಹಾಕಲಾದ ಶ್ರದ್ಧಾಂಜಲಿ ಬ್ಯಾನರ್ ಹಾಗೇ ಬಿಡಲಾಗಿದೆ ಎಂದು ತಿಳಿದು ಬಂದಿದೆ.

Leave A Reply

Your email address will not be published.