ನಳೀಲು ಶ್ರೀ ಸುಬ್ರಹ್ಮಣ್ಯ ದೇವಳದ ಜಾತ್ರೋತ್ಸವ ಸಂಪನ್ನ

ಸವಣೂರು  : ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ಏಕೈಕ ಕ್ಷೇತ್ರ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಳದ ವರ್ಷಾವಽ ಮಹೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಬ್ರಹ್ಮ ಶ್ರೀ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ  ಫೆ.23 ಹಾಗೂ 24ರಂದು ನಡೆಯಿತು.

ಫೆ.23ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶ ಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು.

ರಾತ್ರಿ ದೈವಗಳ ಭಂಡಾರ ತೆಗೆದ ಬಳಿಕ ವಲ್ಮೀಕ ರೂಪಿ ಸುಬ್ರಹ್ಮಣ್ಯ ದೇವರಿಗೆ ರಂಗಪೂಜೆ ನಡೆಯಿತು.ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ,ದರ್ಶನ ಬಲಿ,ಬಟ್ಟಲು ಕಾಣಿಕೆ,ವೈಽಕ ಮಂತ್ರಾಕ್ಷತೆ ನಡೆಯಿತು.

ಫೆ.24ರಂದು ವ್ಯಾಘ್ರ ಚಾಮುಂಡಿಯ ನೇಮೋತ್ಸವ, ರುದ್ರ ಚಾಮುಂಡಿಯ ನೇಮೋತ್ಸವ ಗುಳಿಗ ದೈವಕ್ಕೆ ತಂಬಿಲ ಸೇವೆ ನಡೆಯಿತು.

ಈ ಸಂಧರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ಹಾಗೂ ಅಭಿವೃದ್ದಿ ಸಮಿತಿ ಅಧ್ಯಕ್ಷ ನವೀನ್ ಚಂದ್ರ ರೈ ,ಮೊಕ್ತೇಸರರಾದ ಮೋಹನ್‌ದಾಸ್ ರೈ,ಡಾ.ಸುಚೇತಾ ಜೆ.ಶೆಟ್ಟಿ,ನಾರಾಯಣ ರೈ ಮೊದೆಲ್ಕಾಡಿ,ಎನ್ ಚಂದ್ರಶೇಖರ್ ರೈ,ಕಿಶೋರ್ ಕುಮಾರ್ ,ಅರುಣ್ ಕುಮಾರ್,ಸತೀಶ್ ರೈ,ಪ್ರವೀಣ್ ಕುಮಾರ್,ಅರ್ಚಕ ಶ್ರೀನಿವಾಸ್ ಹೆಬ್ಬಾರ್,ಹರಿನಾರಾಯಣ ಮನೋಳಿತ್ತಾಯ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

Leave A Reply

Your email address will not be published.