ಕಾಚಿಲ : ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ
ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಕಲ್ಮಡ್ಕ ಇದರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಒತ್ತೆಕೋಲ ನಡಾವಳಿಯು ಫೆ. 25 ಮತ್ತು26 ರಂದು ನಡೆಯಿತು.
ಫೆ. 25 ರಂದು ಬೆಳಿಗ್ಗೆ 8.30 ಕ್ಕೆ ಗಣಪತಿ ಹವನ, ವೈದಿಕ ಕಾರ್ಯಕ್ರಮಗಳು, 10.30ರಿಂದ ಭಜನಾ ಕಾರ್ಯಕ್ರಮ, 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಂಜೆ 5.30 ಕ್ಕೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಭಂಡಾರ ತೆಗೆದು ಮೇಲೇರಿಗೆ ಅಗ್ನಿ ಸ್ಪರ್ಶ ಮಾಡಲಾಯಿತು.
ರಾತ್ರಿ 10.30 ರಿಂದ ಶ್ರೀ ಮಹಾವಿಷ್ಣುಮೂರ್ತಿ ದೈವದ ಕುಳಿಚಟ್ಟು ,ಫೆ. 26 ರಂದು ಪ್ರಾತಃ ಕಾಲ 5.00 ಕ್ಕೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ ಬಳಿಕ ಮಾರಿಕಳ, ಪ್ರಸಾದ ವಿತರಣೆ ನಡೆದು ನಂತರ ಮುಳ್ಳುಗುಳಿಗನ ನೇಮ ನಡೆಯಿತು.
ಫೆ. 25 ರಂದು ರಾತ್ರಿ ದೈವಸ್ಥಾನದ ಮೊಕ್ತೇಸರರಾದ ರಾಮಚಂದ್ರ ಎಡಪತ್ಯರವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ, ಪುದುಬೆಟ್ಟು ಜೀನಬಸದಿ ಅಧ್ಯಕ್ಷ ಶತ್ರುಂಜಯ ಅರಿಗ ದಾರ್ಮಿಕ ಉಪನ್ಯಾಸ ನೀಡಿದರು.
. ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ. ದಿವಾಕರ ರೈ, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರ್ ಕಲ್ಮಡ್ಕ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಉದಯಕುಮಾರ್ ಬೆಟ್ಟ ಕಲರ್ಸ್ ಕನ್ನಡ ವಾಹಿನಿಯ ನಿರ್ಮಾಪಕ ದೀಪಕ್ ಬೆಂಗಳೂರು ಮತ್ತು ಬೊಳಿಯೂರು ನಲ್ಲೂರಾಯ ದೈನಡೆಯಲನದ ಮೊಕ್ತೇಸರರಾದ ಗಂಗಾಧರ ಗೌಡ ಮರಕ್ಕಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರಾತ್ರಿ 9.00 ಗಂಟೆಯಿಂದ ಸಂಸ್ಕಾರ ಅಂಗನವಾಡಿ ಕೇಂದ್ರ ಕಲ್ಮಡ್ಕ ಇಲ್ಲಿಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 9.30 ರಿಂದ ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೇರ್ಯ ಇದರ ಸದಸ್ಯರಿಂದ ಸಿಂಗಾರಿ ಮೇಳ ಮತ್ತು ರಾತ್ರಿ 12.30 ರಿಂದ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಏಕಾದಶಿ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಿತು.