ಧರ್ಮಸ್ಥಳದ ವಸಂತ ಮಹಲ್ ಸಭಾಭವನದಲ್ಲಿ ರಾಷ್ಟ್ರ ಮಟ್ಟದ ಪ್ರಬಂಧ ಮಂಡನೆ | ಫೆ.28 – ಫೆ.29 ರಂದು
ಭಾರತೀಯ ಪುರಾಭಿಲೇಖ ಸಂಸ್ಥೆ ಹಾಗೂ ಭಾರತೀಯ ಸ್ಥಳನಾಮ ಸಂಸ್ಥೆ ಇವುಗಳ ಸಹಯೋಗದಲ್ಲಿ, ಶ್ರೀ.ಧ.ಮ ಕಾಲೇಜಿನ ಇತಿಹಾಸ ವಿಭಾಗದ ಸಹಭಾಗಿತ್ವದಲ್ಲಿ ಫೆ.28 ಮತ್ತು ಫೆ.29ರಂದು ಧರ್ಮಸ್ಥಳದ ವಸಂತ ಮಹಲ್ ಸಭಾಭವನದಲ್ಲಿ ರಾಷ್ಟ್ರ ಮಟ್ಟದ ಪ್ರಬಂಧ ಮಂಡನೆ ಜರುಗಲಿದೆ.
ಭಾರತೀಯ ಪುರಾಭಿಲೇಖ ಸಂಸ್ಥೆಯ 45ನೇ ವಾರ್ಷಿಕೋತ್ಸವದ ಅಂಗವಾಗಿ ಹಾಗೂ ಭಾರತೀಯ ಸ್ಥಳನಾಮ ಸಂಸ್ಥೆಯ ವಾರ್ಷಿಕ ಅಧಿವೇಶನದ ಪ್ರಯುಕ್ತ ಕಾರ್ಯಕ್ರಮ ಜರುಗಲಿದ್ದು ರಾಷ್ಟ್ರದ 120 ಕ್ಕೂ ಅಧಿಕ ವಿದ್ವಾಂಸರು ಭಾಗವಹಿಸುತ್ತಿದ್ದು ಎರಡು ದಿನಗಳ ಕಾಲ ವಿವಿಧ ಶಾಸನಗಳ ಬಗ್ಗೆ ಪ್ರಬಂಧ ಮಂಡನೆ, ಚರ್ಚೆ ನಡೆಯಲಿದೆ.
ಫೆ.28ರಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಕ್ರಿಸ್ತಪೂರ್ವ ಮೂರನೇ ಶತಮಾನದಿಂದ ವಿಜಯನಗರದ ಕಾಲದವರೆಗೆ ಪ್ರಮುಖ ಶಾಸನಗಳ ಬಿಂಬಗಳ ಪ್ರದರ್ಶನವೂ ಈ ಸಂದರ್ಭದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.