ರಿಕ್ಷಾ ಪಲ್ಟಿ ಅಪಘಾತ ದಲ್ಲಿ ಗಾಯಗೊಂಡಿದ್ದ 7 ತಿಂಗಳ ಗರ್ಭಿಣಿ, ಮಗು ಸಾವು
ಬೆಳ್ತಂಗಡಿ : ಇಂದಬೆಟ್ಟು ಗ್ರಾಪಂ ವ್ಯಾಪ್ತಿಯ ಪಡಂಬಿಲ ಪಾಲೆದಬೊಟ್ಟು ಎಂಬಲ್ಲಿ ಅಪೆ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ 25 ಅಡಿ ಆಳಕ್ಕೆ ಉರುಳಿಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಮೃತಪಟ್ಟಿದ್ದ ಬೆನ್ನಿಗೇ ಇದೇ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ 7 ತಿಂಗಳ ಗರ್ಭಿಣಿಯ ಮಗು ನಿನ್ನೆ ಮೃತಪಟ್ಟಿದ್ದಾರೆ .
ಸದ್ರಿ ಬಾಣಂತಿ ಮಹಿಳೆ ಇಂದು ಮೃತಪಡುವ ಮೂಲಕ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 4 ಕ್ಕೇರಿದೆ. ಫೆ.17 ರಂದು ನಡೆದಿದ್ದ ಘಟನೆಯಲ್ಲಿ ನಡ ಗ್ರಾಮದ ಕೊಲ್ಲೊಟ್ಟು ನಿವಾಸಿ ದಾವೂದ್ ಸಾಹೇಬ್ ಅವರ ಪತ್ನಿ ಹಾಜರಾಬಿ (58ವ.) ಮತ್ತು ದರ್ಖಾಸು ಮನೆ ನಿವಾಸಿ ಅಬ್ದುಲ್ ರಶೀದವರ ಪತ್ನಿ ಸಾಜಿದಾಬಿ (58.ವ) ಅಪಘಾತ ದಿನದಂದೇ ಮೃತಪಟ್ಟಿದ್ದರು.
ರಿಕ್ಷಾ ಚಾಲಕ ಅಬ್ದುಲ್ ನವೀದ್ ಪತ್ನಿ ಶೈನಾಝ್ ಬಾನು (29 ವ.) ಮತ್ತು ಮಂಜೊಟ್ಟಿ ನಿವಾಸಿ ನಾಸಿರ್ ಅವರ ಪತ್ನಿ, ಗಂರ್ಭಿಣಿ ಮಮ್ತಾಝ್ ಬಾನು (30 ವ.) ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು.
ಈ ಪೈಕಿ ಗರ್ಭಿಣಿ ಮಮ್ತಾಝ್ ಅವರ ಹೊಟ್ಟೆಯಲ್ಲಿದ್ದ ಮಗುವಿನ ಸ್ಥಿತಿ ವಿಷಮ ಸ್ಥಿತಿಗೆ ತಲುಪಿ ಸಾವನ್ನಪ್ಪಿದ್ದರಿಂದ ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆಯಲಾಗಿತ್ತು. ಇದೀಗ ಮರುದಿನ ಬಾಣಂತಿ ಮಹಿಳೆ ಹಲವು ದಿನಗಳು ನೋವನ್ನು ಅನುಭವಿಸಿ ಈಗ ಮೃತಪಟ್ಟಿದ್ದಾರೆ.
ಪರಸ್ಪರ ಸಂಬಂಧಿಗಳಾಗಿರುವ ಇವರೆಲ್ಲರೂ ಬಂಗಾಡಿ ಸನಿಹ ನಡೆದ ಔತಣಕೂಟಕ್ಕೆ ರಿಕ್ಷಾದಲ್ಲಿ ಹೋಗಿ ಮರಳುತ್ತಿದ್ದಾಗ ಘಟನೆ ನಡೆದಿತ್ತು.