ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾಗಿ ಚತುರ ಸಂಘಟಕ ಮುರಳೀಕೃಷ್ಣ ಹಸಂತಡ್ಕ
ಪುತ್ತೂರು: ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯರಾಗಿ ಧಾರ್ಮಿಕ ಮುಂದಾಳು ,ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಮರಳೀಕೃಷ್ಣ ಹಸಂತಡ್ಕ ಅವರನ್ನು ಸರಕಾರ ಆಯ್ಕೆ ಮಾಡಿದೆ.
ಉಳಿದಂತೆ ಪರಂಗಿಪೇಟೆಯ ಪೊಳಲಿ ಗಿರೀಶ್ ತಂತ್ರಿ, ಕಿನ್ನಿಗೋಳಿಯ ಭುವನಾಭಿರಾಮ ಉಡುಪ, ಕಂಕನಾಡಿಯ ಸಂಜೀವ್ ಸೂಪರ್ ಪೇಟೆ, ಮಂಗಳೂರಿನ ಶಶಿಕಲಾ ಬೊಂಡಂತಿಲ, ಗೋಪಾಲ ಕುತ್ತಾರು, ರಘುನಾಥ ರೈ ಕಟ್ಟಬೀಡು ಎಣ್ಮೂರು ಸುಳ್ಯ , ಬೆಳ್ತಂಗಡಿಯ ದೇವೇಂದ್ರ ಹೆಗ್ಡೆ ಆಯ್ಕೆಯಾಗಿದ್ದಾರೆ.
ಚತುರ ಸಂಘಟಕ ಮುರಳೀಕೃಷ್ಣ ಹಸಂತ್ತಡ್ಕ
ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ, ಹಿಂದೂ ಮುಂದಾಳು, ಸಂಘಟನಾ ಚತುರ ಮುರಳೀಕೃಷ್ಣ ಹಸಂತ್ತಡ್ಕ ಅವರು ಮೂಲತಃ ಬಲ್ನಾಡ್ ಗ್ರಾಮದ ಹಸಂತ್ತಡ್ಕ ಇವರ ಮನೆ.
ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾದ ಇವರು ಬಜರಂಗದಳ ಪುತ್ತೂರು ನಗರ ಸಂಚಾಲಕರಾಗಿ,ಪುತ್ತೂರು ಜಿಲ್ಲಾ ಸಂಚಾಲಕ್, ಮಂಗಳೂರು ವಿಭಾಗ ಸಹ ಸಂಯೋಜಕ್, ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಗೋರಕ್ಷಾ ಪ್ರಮುಖ್,ಕರ್ನಾಟಕ ದಕ್ಷಿಣ ಪ್ರಾಂತ ಸುರಕ್ಷಾ ಪ್ರಮುಖ್ ಅಗಿ ರಾಜ್ಯದಾದ್ಯಂತ ಬಜರಂಗದಳವನ್ನು ಬಲಿಷ್ಠಗೊಳಿಸಿದರು.
ಪ್ರಸ್ತುತ ಬಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಧಾರ್ಮಿಕ ಪರಿಷತ್ ನ ಕಾರ್ಯಗಳು
ದೇವಾಲಯಗಳ ನಿರ್ವಹಣೆಯ ಮೇಲುಸ್ತುವಾರಿ ವಹಿಸುವ ನಿಟ್ಟಿನಲ್ಲಿ ಈ ಪರಿಷತ್ತು ಮಹತ್ವದ ಕೆಲಸ ಮಾಡುತ್ತದೆ. ಅಲ್ಲದೆ ಜಿಲ್ಲಾ ಮಟ್ಟದಲ್ಲಿ ದೇವಾಲಯಗಳ ವಿಷಯದಲ್ಲಿ ಕೆಲ ಧಾರ್ಮಿಕ, ಆರ್ಥಿಕ ಅಧಿಕಾರಗಳನ್ನು ಹೊಂದಿದೆ.
ಜತೆಗೆ ಕೆಲ ವಿವಾದಗಳನ್ನು ಬಗೆಹರಿಸುವ ಅಧಿಕಾರ ಕಾರ್ಯಗಳನ್ನು ಪರಿಷತ್ತು ಹೊಂದಿರುತ್ತದೆ. ಜಿಲ್ಲೆಯಲ್ಲಿ ಒಂದು ಲಕ್ಷದಿಂದ 10 ಲಕ್ಷ ರೂಪಾಯಿ ವರೆಗೆ ವಾರ್ಷಿಕ ಆದಾಯ ಹೊಂದಿರುವ ಅಧಿಸೂಚಿತ ಸಂಸ್ಥೆಗಳಿಗೆ ವ್ಯವಸ್ಥಾಪಕ ಸಮಿತಿ ರಚಿಸುವ ಹಾಗೂ ಅಂತಹ ಸಮಿತಿಯನ್ನು ವಿಸರ್ಜಿಸುವ ಮಹತ್ವದ ಅಧಿಕಾರವನ್ನು ಈ ಪರಿಷತ್ತು ಹೊಂದಿದೆ.
ಅಲ್ಲದೆ ಜಿಲ್ಲಾ ಧಾರ್ಮಿಕ ಪರಿಷತ್ತಿನ ಅಧಿಕಾರ ವ್ಯಾಪ್ತಿಯೊಳಗೆ ಬರುವ ವಿವಾದಗಳನ್ನು, ಪರಿಷತ್ತಿನ ನ್ಯಾಯಿಕ ಸದಸ್ಯರು ಹಾಗೂ ಕಾರ್ಯದರ್ಶಿ ಒಳಗೊಂಡ ನ್ಯಾಯಾಧಿಕರಣವು ತೀರ್ಮಾನಿಸುತ್ತದೆ. ಯಾವುದೇ ಭಿನ್ನಾಭಿಪ್ರಾಯ ಅಥವಾ ವಿವಾದವನ್ನು ಜಿಲ್ಲಾ ಧಾರ್ಮಿಕ ಪರಿಷತ್ತು ನಿರ್ಧರಿಸಬಹುದಾಗಿದೆ.
ಇದರ ಜತೆಗೆ ದೇವಾಲಯದಲ್ಲಿ ನೇಮಕಾತಿ ನಡೆಯುವ ಸಂದರ್ಭದಲ್ಲೂ ಪರಿಷತ್ತು ಪ್ರಮುಖ ಪಾತ್ರ ವಹಿಸುತ್ತದೆ. ದೇವಾಲಯಗಳ ಸಮಿತಿಗಳು ನೀಡುವ ವರದಿಯನ್ನೂ ಕೂಲಂಕಷವಾಗಿ ಪರಿಶೀಲಿಸಿ, ಸೂಕ್ತ ಅಭ್ಯರ್ಥಿಯನ್ನು ನೇಮಕ ಮಾಡಲು ಶಿಫಾರಸು ಮಾಡುವ ಅಧಿಕಾರವನ್ನು ಈ ಪರಿಷತ್ತು ಹೊಂದಿದೆ.