ಬೆಳ್ಳಾರೆ |ಸೇವಾ ಸಹಕಾರಿ ಸಂಘದ ನಿರ್ದೇಶಕರ ಮುಂದುವರಿದ ರಾಜಿನಾಮೆ ಪರ್ವ ! ಸಹಕಾರ ಭಾರತಿಯ 5, ಕಾಂಗ್ರೆಸ್‌ನ 1 ರಾಜಿನಾಮೆ

ಸುಳ್ಯ : ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸ್ಥಾನಕ್ಕೆ ಈವರೆಗೆ 6 ಮಂದಿ ರಾಜಿನಾಮೆ ನೀಡಿದ್ದಾರೆ. ಸಹಕಾರ ಭಾರತಿ ಬೆಂಬಲಿತ ನಿರ್ದೇಶಕರಾದ ರಮಾ ರೈ,ಲಕ್ಷ್ಮಣ ,ರಮೇಶ,ಶ್ರೀರಾಮ ಪಾಟಾಜೆಯವರು ಈಗಾಗಲೇ ರಾಜೀನಾಮೆ ನೀಡಿದ್ದರು.

 

ರಮಾ ರೈ, ಲಕ್ಷ್ಮಣ, ರಮೇಶ್

ಸಹಕಾರ ಭಾರತಿ ನಿರ್ದೇಶಕ ಭಾಸ್ಕರ ಚಾವಡಿಬಾಗಿಲು ರವರು ಫೆ.18 ರಂದು ರಾಜೀನಾಮೆ ನೀಡಿದರು.

ಭಾಸ್ಕರ ಚಾವಡಿಬಾಗಿಲು

ರಾಜೀನಾಮೆ ನೀಡಿದ ಬಗ್ಗೆ ಇವರನ್ನು ವಿಚಾರಿಸಿದಾಗ ಪಕ್ಷದ ನಿರ್ಣಯ ಮತ್ತು ಕಾರ್ಯಕರ್ತರ ಅಭಿಪ್ರಾಯದಂತೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.

ನಿರ್ದೇಶಕ ಸ್ಥಾನಕ್ಕೆ ಕಾಂಗ್ರೆಸ್ ನ ರಾಜೀವಿ ರೈ ರಾಜಿನಾಮೆ

ರಾಜೀವಿ ರೈ ಬೆಳ್ಳಾರೆ

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕಿ ಸ್ಥಾನಕ್ಕೆ ಕಾಂಗ್ರೆಸ್‌ನ ಹಿರಿಯ ನಾಯಕಿ ಶ್ರೀಮತಿ ರಾಜೀವಿ ರೈ ಅವರೂ ರಾಜೀನಾಮೆ ನೀಡಿದ್ದಾರೆ. ರಾಜೀವಿ ರೈ ಅವರು ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್‌ನ ಪ್ರಮುಖರಾಗಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದವರು‌. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನಿಕಟ ಪೂರ್ವ ಸದಸ್ಯರಾಗಿದ್ದರು.

ರಾಜೀನಾಮೆ ಪತ್ರದಲ್ಲಿ ನಾನು ಸ್ವಯಂ ಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದು, ರಾಜೀವಿ ರೈ ಅವರನ್ನು ಸಂಪರ್ಕಿಸಿದಾಗ, ಎರಡೂ ಕಡೆಯವರು ಒಳಗೊಳಗೆ ಮಾತನಾಡಿಕೊಂಡು ತಲಾ 6 ಸ್ಥಾನಗಳನ್ನು ಹಂಚಿಕೊಂಡು ಅವಿರೋಧ ಆಯ್ಕೆ ಮಾಡಿಕೊಂಡಿದ್ದರು. ಬಳಿಕ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯನ್ನು ಕೂಡ ಅವಿರೋಧವಾಗಿಯೆ ಆಯ್ಕೆ ಮಾಡಿದರು. ಚುನಾವಣೆ ನಡೆಯಬೇಕಿತ್ತು. ಅವಿರೋಧ ಆಯ್ಕೆ ಸರಿಯಲ್ಲ. ಸರಿಯಾದ ಜನರನ್ನು ಜನರೇ ಮತದಾನದ ಮೂಲಕ ಆಯ್ಕೆ ಮಾಡಬೇಕಿತ್ತು. ಅವಿರೋಧ ಆಯ್ಕೆ ನಡೆದದ್ದು ನನಗೆ ಸಮಾಧಾನ ಇಲ್ಲ ಎಂದು ತಿಳಿಸಿದ್ದಾರೆ. ಈ ಕಾರಣಕ್ಕಾಗಿ ರಾಜಿನಾಮೆ ಸಲ್ಲಿಸಿದ್ದೇನೆ ಎಂದಿದ್ದಾರೆ.

Leave A Reply

Your email address will not be published.