ಅಡಿಕೆ ರಾಶಿ,ರಬ್ಬರ್ ಶೀಟ್‌ಗೆ ಬೆಂಕಿ | ಸುಟ್ಟು ಹೋದ ಮನೆ

ಸುಳ್ಯ : ಅನ್ನ ಬೇಯಿಸಲು ಒಲೆಗೆ ಮಾಡಿದ್ದ ಬೆಂಕಿಯಿಂದ ಮನೆಯ ಮೇಲಿದ್ದ ರಬ್ಬರ್ ಶೀಟ್ ಮತ್ತು ಅಡಿಕೆ ಗೋಣಿಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ, ಬೆಂಕಿ ಮನೆ ಇಡೀ ವ್ಯಾಪಿಸಿದೆ.

 

ಮನೆ ಹಾಗೂ ಅದರೊಳಗಿದ್ದ ಸಮಸ್ತ ವಸ್ತಗಳೂ ಸುಟ್ಟು ಕರಕಲಾದ ಘಟನೆ ಅರಂತೋಡು ಗ್ರಾಮದ ಅಡ್ತಲೆ ಬಳಿಯ ಪಿಂಡಿಮನೆಯಲ್ಲಿ ಫೆ.18 ರಂದು ನಡೆದಿದೆ.

ಪಿಂಡಿಮನೆ ವಾಸುದೇವ ಗೌಡರ ಮನೆಯಲ್ಲಿ ಈ ಘಟನೆ ನಡೆದಿದ್ದು ಒಟ್ಟು 12 ಲಕ್ಷ ರೂ ನಷ್ಟ ಸಂಭವಿಸಿರುವುದಾಗಿ ವರದಿಯಾಗಿದೆ.

ಕರಕಲಾದ ಮನೆ

ಮನೆಯಲ್ಲೇ ರಬ್ಬರ್ ಶೀಟು ಒಟ್ಟಿ ಇಡುವುದು ಮತ್ತು ಶೀಟು ಬಿಸಿ ಮಾಡಲು ಬೆಂಕಿಹಾಕುವಾಗ ಮೊದಲು ರಬ್ಬರಿಗೆ ಬೆಂಕಿ ಹಿಡಿದು, ಆ ನಂತರ ಬೆಂಕಿ ಇಡೀ ಮನೆಗೆ ವ್ಯಾಪಿಸಿರುವ ಸಾಧ್ಯತೆ ಇದೆ.

ಅದೃಷ್ಟವಶಾತ್ ಮನೆಯವರಿಗೆ ಯಾವುದೇ ಗಾಯಗಳಾಗಿಲ್ಲ.

KSRTC ಯಲ್ಲಿ 3745 ಖಾಲಿ ಹುದ್ದೆ ಭರ್ತಿ ಪ್ರಕ್ರಿಯೆ | ನಿಮ್ಮೂರ ಹುಡುಗ-ಹುಡುಗಿಯರಿಗೆ ವಿಷಯ ತಲುಪಿಸಿ

Leave A Reply

Your email address will not be published.