ಯುನೆಸ್ಕೋ ಅಂತರಾಷ್ಟ್ರೀಯ ಕಾರ್ಯಾಗಾರಕ್ಕೆ ಶುೃತಿ ಅಮೀನ್ ನಾಳ ಅವರ ಸಂಶೋಧನಾ ಬರಹ ಆಯ್ಕೆ

ಬೆಳ್ತಂಗಡಿ : ಯುನೆಸ್ಕೋ ಹಾಗೂ ಅಂತರಾಷ್ಟ್ರೀಯ ಪ್ರದೇಶಿಕ ಮತ್ತು ಪರಿಸರ ಭಾಷಾ ಅಧ್ಯಯನ ಸಂಸ್ಥೆಯ ಜಂಟಿ ಸಹಯೋಗದಲ್ಲಿ ಮುಂದಿನ ಜೂನ್ ತಿಂಗಳಲ್ಲಿ ಜರ್ಮನಿಯ ಸಾರ್ಲ್ಯಾಂಡ್‌ನಲ್ಲಿ ನಡೆಯಲಿರುವ ಯುನೆಸ್ಕೋ- ಜಾಗತಿಕ ಜೀವ ವೈವಿದ್ಯ ಅಧ್ಯಯನ ಹಾಗೂ ಸಂಶೋಧನಾ ಕಾರ್ಯಾಗಾರಕ್ಕೆ ಮಂಗಳೂರು ಸಂತ ಎಲೋಶಿಯಸ್ ಕಾಲೇಜಿನ ಕನ್ನಡ ಉಪನ್ಯಾಸಕಿ ಶುೃತಿ ಅಮೀನ್ ಕೆ ಅವರ ಪಶ್ಚಿಮಘಟ್ಟದ ಜೀವ ವೈವಿದ್ಯ ವಿನ್ಯಾಸ ಹಾಗೂ ಅವನತಿಯ ಹಾದಿ ಎಂಬ ಸಂಶೋಧನಾ ಬರಹ ಆಯ್ಕೆಯಾಗಿದೆ.

 

ಯುನೆಸ್ಕೋ ಹಾಗೂ ಜರ್ಮನಿ ಸರ್ಕಾರದ ಸಹಕಾರದಲ್ಲಿ ನಡೆಯುವ ಈ ಅಂತರಾಷ್ಟ್ರೀಯ ಕಾರ್ಯಾಗಾರಕ್ಕೆ ಭಾರತದಿಂದ ಆಯ್ಕೆಯಾದ ಏಕೈಕ ಸಂಶೋಧನಾ ಬರಹ ಇದಾಗಿದ್ದು, ಪಶ್ಚಿಮಘಟ್ಟದ ಜೀವ ವೈವಿದ್ಯಗಳ ಮೇಲೆ ಇವರು ಬರೆದ ಹಲವಾರು ಸಂಶೋಧನಾ ಬರಹ ಇದರಲ್ಲಿ ದಾಖಲಿಸಲಾಗಿದೆ.

ಕಳೆದ 30 ವರ್ಷಗಳಿಂದ ಪಶ್ಚಿಮಘಟ್ಟದಲ್ಲಿ ನಡೆಯುವ ದುರಂತ, ಜೀವವೈವಿದ್ಯಗಳ ಸಂತತಿಯಲ್ಲಿ ಏರಿಳಿತ, ಪಶ್ಚಿಮಘಟ್ಟದ ಪರಿಸರ, ಭೂರಚನೆ ಹಾನಿಯಿಂದ ನಡೆಯುವ ಜಾಗತಿಕ ಪರಿಣಾಮಗಳ ಬಗೆಗಿನ ದಾಖಲೆಗಳನ್ನು ಕ್ರೋಡಿಕರಿಸಿ ಸಂಶೋಧಿಸಿದ ಬರಹಗಳ ಸಂಗ್ರಹಗಳನ್ನು ಯುನೆಸ್ಕೋ ದಾಖಲಿಸಿಕೊಂಡಿದ್ದು, ಜರ್ಮನಿಯ ಸಾರ್ಲ್ಯಾಂಡ್‌ನಲ್ಲಿ ನಡೆಯುವ ಜಾಗತಿಕ ಸಂಶೋಧನಾ ಕಾರ್ಯಾಗಾರದಲ್ಲಿ ಈಬಗ್ಗೆ ಚರ್ಚೆ ನಡೆಯಲಿದೆ.

ಮಂಗಳೂರು ವಿಶ್ವವಿದ್ಯಾಲಯದ ಡಾ. ಧನಂಜಯ ಕುಂಬ್ಲೆ ಮಾರ್ಗದರ್ಶನದ ತುಳು ಸಂಶೋಧನಾ ಅಭ್ಯಾರ್ಥಿಯಾಗಿರುವ ಇವರು ಮಂಗಳೂರು ಸಂತ ಎಲೋಶಿಯಸ್ ಕಾಲೇಜು ಹಾಗೂ ವಿಭಾಗದ ಮುಖ್ಯಸ್ಥೆ ಡಾ. ಸರಸ್ವತಿ ಕುಮಾರಿ ಅವರು ಶುೃತಿ ಅಮೀನ್ ಅವರಿಗೆ ಮಾರ್ಗದರ್ಶನ ನೀಡಿದ್ದಾರೆ.

ಇವರು ಬೆಳ್ತಂಗಡಿ ತಾಲೂಕು ನಾಳ ಗ್ರಾಮಕ್ಕೆ ಸೇರಿದವರಾಗಿದ್ದಾರೆ.

Leave A Reply

Your email address will not be published.