ಸಂಪ್ಯ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲದ ಫೋಟೋ ಗ್ಯಾಲರಿ

ಪುತ್ತೂರು: ಸಂಪ್ಯ ಉದಯಗಿರಿಯಲ್ಲಿ ಅನಾದಿ ಕಾಲದಿಂದ ನಡೆಸಿಕೊಂಡು ಬರುತ್ತಿರುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ವಿಜ್ರಂಭಣೆಯಿಂದ ನಡೆಯಿತು.
ಚಿತ್ರ ಕೃಪೆ: ಪೃಥ್ವಿ ಚಡಗ

ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರ ತೆಗೆದು ಬಳಿಕ ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ರಂಗ ಪೂಜೆ ನಡೆಯಿತು.


ನಂತರ ಉದಯಗಿರಿಗೆ ಆಗಮಿಸಿ ಮೇಲೇರಿಗೆ ಅಗ್ನಿ ಸ್ಪರ್ಶ ಮಾಡಲಾಯಿತು.


ರಾತ್ರಿ ಕುಳ್ಚಟ್ಟು ಸೇವೆ ನಡೆಯಿತು.

ಕುಳ್ಚಟ್ಟು ಸೇವೆ ಬಳಿಕ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.










ಬೆಳಗಿನ ಜಾವ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, ಮಾರಿಕಳ ಮತ್ತು ಪ್ರಸಾದ ವಿತರಣೆ ಹಾಗೂ ಗುಳಿಗನ ಕೋಲ ನಡೆಯಿತು.

ಕಾರ್ಯಕ್ರಮದಲ್ಲಿ ರಾತ್ರಿಯಿಂದ ಬೆಳಗಿನ ತನಕ ಸಾವಿರಾರು ಮಂದಿ ಭಾಗಹಿಸಿ ಶ್ರೀ ದೈವದ ಗಂಧ ಪ್ರಸಾದ ಸ್ವೀಕರಿಸಿದರು.
