ಮಂಗಳೂರು: ಅಪ್ರಾಪ್ತ ಬಾಲಕಿಯ ಅಪಹರಣ : ಪ್ರಕರಣ ದಾಖಲು

ಮಂಗಳೂರು : ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜತ್ತಬೈಲಿನ ಜಪ್ಪಿನಗುತ್ತು ನಿವಾಸಿ, ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಅಪಹರಿ ಸಿದ ಬಗ್ಗೆ ಪ್ರಕರಣ ದಾಖಲಾಗಿದೆ.

 

ಫೆ.14ರಂದು ಸಂಜೆ 16 ವರ್ಷದ ಬಾಲಕಿ ಶಾಲೆಯಿಂದ ಮನೆಗೆ ಬಂದ ಬಳಿಕ ಆಕೆಯನ್ನು ಪರಶುರಾಮ (26) ಎಂಬಾತ ಕರೆದುಕೊಂಡು ಹೋಗಿದ್ದಾನೆ ಎಂದು ಆರೋಪಿಸಲಾಗಿದೆ. ಬಾಲಕಿಯನ್ನು ಕರೆದೊಯುತ್ತಿದ್ದಾಗ ಆಸು ಪಾಸಿನ ಜನರು ಗಮನಿಸಿದ್ದಾರೆ. ಹುಡುಕಾಡಿದರೂ ಪತ್ತೆಯಾಗದ ಕಾರಣ ರವಿವಾರ ಬಾಲಕಿಯ ತಂದೆ ಕಾವೂರು ಪೊಲೀಸ್‌ ಠಾಣೆಯಲ್ಲಿ ಪುತ್ರಿ ನಾಪತ್ತೆಯಾಗಿದ್ದಾಳೆ ಹಾಗೂ ಆಕೆಯನ್ನು ಅಪಹರಿಸಲಾಗಿದೆ ಎಂದು ದೂರು ನೀಡಿದ್ದಾರೆ.

ಅಪಹೃತ ಬಾಲಕಿಯ ಕುಟುಂಬ ದವರು ಮತ್ತು ಅಪಹರಣ ಪ್ರಕರಣದ ಆರೋಪಿ ಪರಶುರಾಮ ಯಾನೆ ಪರಶು ಉತ್ತರ ಕರ್ನಾಟಕ ಮೂಲದವರಾಗಿದ್ದು, ಮಂಗಳೂರಿಗೆ ಕೂಲಿ ಕೆಲಸಕ್ಕಾಗಿ ಬಂದವರಾಗಿದ್ದಾರೆ.

Leave A Reply

Your email address will not be published.