ಕಾವು: ಲಾರಿ ಆಕ್ಸಿಲ್ ಕಟ್ ಆಗಿ ಭೀಕರ ಅಪಘಾತ

ಪುತ್ತೂರು : ಮಾಣಿ-ಮೈಸೂರು ಹೆದ್ದಾರಿಯ ಕಾವು ಪೇಟೆಯಲ್ಲಿ ಚಲಿಸುತಿದ್ದ ಲಾರಿಯ ಆಕ್ಸಿಲ್ ತುಂಡಾಗಿ ಭೀಕರ ಅಪಘಾತ ನಡೆದಿದೆ.

ಅಪಘಾತದಲ್ಲಿ ಎರಡು ಕಾರುಗಳು ನಜ್ಜುಗುಜ್ಜಗಿದೆ. ಬ್ರೀಜಾ ಕಾರಿನಲ್ಲಿದ್ದ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ . ಲೋಡ್ ತುಂಬಿದ್ದ ಲಾರಿ ಸುಳ್ಯ ಕಡೆಗೆ ಸಂಚರಿಸುತಿತ್ತು.

ಕಾವು ಕ್ಯಾಂಪ್ಕೋ ನೂತನ ಬಿಲ್ಡಿಂಗ್ ಸಮೀಪ ತಿರುವಿನಲ್ಲಿ ಲಾರಿ ಆಕ್ಸಿಲ್ ತುಂಡಾಗಿದೆ. ಲಾರಿಯ ಸಂಪೂರ್ಣ ಬಾಡಿ ರಸ್ತೆಯಲ್ಲಿ ಎಳೆದುಕೊಂಡು ಹೋಗಿದೆ.
ಅಪಘಾತದಲ್ಲಿ ಬ್ರೀಜಾ ಮತ್ತು ಎರ್ಟಿಗಾ ಕಾರುಗಳು ಜಖಂಗೊಂಡಿದೆ.