ಗಯಾಪದ ಕ್ಷೇತ್ರ ಉಬಾರ್ ಒಂದನೇ ಮಖೆ ಜಾತ್ರೆ ಸಂಪನ್ನ
ಗಯಾಪದ ಕ್ಷೇತ್ರ ಉಬಾರ್ ಒಂದನೇ ಮಖೆ ಜಾತ್ರೆ ಸಂಪನ್ನ
ಉಪ್ಪಿನಂಗಡಿ: ಗಯಾಪದ ಕ್ಷೇತ್ರ, ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ ಇದರ ಕಾಲಾವಧಿ ಜಾತ್ರೆ, ಮಖೆ ಜಾತ್ರೆ ಮತ್ತು ಉತ್ಸವಾದಿಗಳು ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪವಿತ್ರಪಾಣಿ ಕರಾಯ ವಿಷ್ಣುಮೂರ್ತಿ ಕುದ್ದಣ್ಣಾಯ ಅವರ ಉಪಸ್ಥಿತಿಯಲ್ಲಿ ಫೆ. 15ರಿಂದ ಆರಂಭಗೊಂಡು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಫೆ. 15ರಂದು 1ನೇ ಅಷ್ಟಮಿ ಮಖೆ ಕೂಟದ ಅಂಗವಾಗಿ ರಾತ್ರಿ ಬಲಿ ಹೊರಟು ಉತ್ಸವ-ರಥೋತ್ಸವ, ಬಲಿ, ಮಹಾಪೂಜೆ ನಡೆಯಿತು.ರಾತ್ರಿ ನಾಟಕ ನಡೆಯಿತು. ಫೆ. 16ರಂದು ಪ್ರಾತ:ಕಾಲ ತೀರ್ಥಸ್ನಾನ, ಬೆಳಿಗ್ಗೆ ಬಲಿ ಹೊರಟು ಉತ್ಸವ, ದರ್ಶನಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.
ಫೆ. 19ರಂದು ಕಲ್ಕುಡ ದೈವದ ಪುನ: ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಕಲ್ಕುಡ ದೈವಸ್ಥಾನದಲ್ಲಿ ಗಣಪತಿ ಹೋಮ, ಸಾನಿಧ್ಯ ಕಲಶ, ತಂಬಿಲ ಸೇವೆ, ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಫೆ. 21ರಂದು 2ನೇ ಮಹಾ ಶಿವರಾತ್ರಿ ಮಖೆ ಕೂಟ ನಡೆಯಲಿದೆ. ಫೆ. 25ರಂದು ಶ್ರೀ ದೇವರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಗಣಪತಿ ಹೋಮ, ಶತರುದ್ರಾಭಿಷೇಕ, ಸೀಯಾಳಾಭಿಷೇಕ, ಚಂಡಿಕಾ ಹೋಮ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಮಾ. 8ರಂದು 3ನೇ ಹುಣ್ಣಿಮೆ ಮಖೆ ಕೂಟ ಜರಗಲಿದೆ, ಮಾ. 17ರಂದು ಮಹಾಕಾಳಿ ಮೆಚ್ಚಿ ಹಾಗೂ ಮಾ. 22ರಂದು ದೊಂಪದ ಬಲಿ ನೇಮೋತ್ಸವ ನಡೆಯಲಿದೆ.