ಕಾಣಿಯೂರಿನ ಹಿರಿಯ ಕಾರು ಚಾಲಕ ಲಿಂಗಪ್ಪ ಗೌಡ ಪೈಕ ನಿಧನ

 

ಕಾಣಿಯೂರು: ಕಾಣಿಯೂರು ಗ್ರಾಮದ ಪುಣ್ಚತ್ತಾರು ಪೈಕ ನಿವಾಸಿ ಲಿಂಗಪ್ಪ ಗೌಡ (62ವ.)ರವರು ನಿಧನಹೊಂದಿದ್ದಾರೆ. ಮೂಲತಃ ಈಶ್ವರಮಂಗಲದ ಕೊಂಬೆಟ್ಟುದವರಾಗಿದ್ದು, ಪ್ರಸ್ತುತ ಲಿಂಗಪ್ಪರವರು ಪುಣ್ಚತ್ತಾರು ಪೈಕ ನಿವಾಸಿಯಾಗಿದ್ದರು. ಎಲ್ಲರೊಂದಿಗೆ ಆತ್ಮಿಯರಾಗಿದ್ದ ಮೃತರು 40 ವರ್ಷಗಳಿಂದ ಕಾಣಿಯೂರು- ಪುತ್ತೂರು ಮಧ್ಯೆ ಕಾರು ಚಾಲಕ ವೃತ್ತಿ ಮಾಡುತ್ತಿದ್ದು, ಹಿರಿಯ ಕಾರು ಚಾಲಕರೆಂದೇ ಚಿರಪರಿಚಿತರಾಗಿದ್ದರು. ಮೃತರು ಪತ್ನಿ ಹರಿಣಾಕ್ಷೀ, ಪುತ್ರರಾದ ಪ್ರಜ್ಞೇಶ್, ಯಜ್ಞೇಶ್, ಸಹೋದರರಾದ ಬಾಬು ಗೌಡ, ಸುಂದರ ಗೌಡ, ಆನಂದ ಗೌಡ, ಸಹೋದರಿ ಅಕ್ಕಯ್ಯ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ವಾಹನ ಸಂಚಾರ ಸ್ಥಗಿತ

ಮೃತರ ಶೋಕಾಚರಣೆಗಾಗಿ ಕಾಣಿಯೂರು- ಪುತ್ತೂರು ಕುಮಾರಧಾರ ಟೂರಿಸ್ಟ್ ವಾಹನ ಚಾಲಕ ಮಾಲಕ ಸಂಘದ ವತಿಯಿಂದ ಒಂದು ದಿನ ಸಂಚಾರ ಸ್ಥಗಿತಗೊಳಿಸಲಾಗಿದೆ. ಹಲವಾರು ಗಣ್ಯರು ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

Leave A Reply

Your email address will not be published.