ಸ್ಪೋಟಕ ಸಿಡಿದು ದವಡೆ ಛಿದ್ರಗೊಂಡು ಗಂಭೀರ ಗಾಯಗೊಂಡ ಹಸು

Share the Article

ಕಡಬ ತಾಲೂಕಿನ ದೇರಾಜೆ ಸಂಪಡ್ಕದಲ್ಲಿ ಮೂಕ ಪ್ರಾಣಿಯೊಂದರ ಆಕ್ರಂದನ ಮುಗಿಲುಮುಟ್ಟಿದೆ.

ಆಹಾರ ಹುಡುಕುತ್ತಾ ಬಂದ ಹಸುವೊಂದು ಯಾರೋ ಕಿಡಿಗೇಡಿಗಳು ಅಕ್ರಮವಾಗಿ ಇಟ್ಟು ಹೋಗಿದ್ದ ತೋಟೆಗೆ ಬಾಯಿಹಾಕಿದೆ.

ಸ್ಫೋಟದ ತೀವ್ರತೆಗೆ ಹಸುವಿನ ಮುಖ ಛಿದ್ರ ವಾಗಿದೆ. ಅಷ್ಟು ದೊಡ್ಡ ಪ್ರಮಾಣದ ಸ್ಫೋಟ ಆಗಿ ಕೆಳದವಡೆ ನೇತಾಡುತ್ತಿದೆ.

ಆದರೂ ಹಸು ಸತ್ತಿಲ್ಲ. ಹಸು, ತಾನು ಮಾಡದ ತಪ್ಪಿಗೆ ಎಲ್ಲಾ ನೋವು ತಿಂದುಕೊಂಡು ಕಣ್ಣೀರು ಕೆಡವಿಕೊಂಡ ನಿಂತಿದೆ.

ದೇರಾಜೆ ಸಂಪಡ್ಕ ನಿವಾಸಿ ಬಾಲಚಂದ್ರ ಅವರಿಗೆ ಸೇರಿದ ಹಸು ಇದಾಗಿದೆ.

ಕಡಬ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.





Leave A Reply