ಬೆಳ್ತಂಗಡಿಯ ಇಂದಬೆಟ್ಟು : ಆಳವಾದ ಕಮರಿಗೆ ರಿಕ್ಷಾ ಬಿದ್ದು ಇಬ್ಬರು ಮಹಿಳೆಯರ ಸಾವು, ಮೂವರಿಗೆ ಗಾಯ


ಬೆಳ್ತಂಗಡಿ: ಇಲ್ಲಿನ ಇಂದಬೆಟ್ಟು ಪಡಂಬಿಲ ಪಾಲೆದಬೆಟ್ಟು ಎಂಬಲ್ಲಿ ವೇಗವಾಗಿ ಚಲಿಸುತ್ತಿದ್ದ ರಿಕ್ಷಾವೊಂದು ಸ್ಕಿಡ್ ಆಗಿ 25 ಅಡಿ ಆಳವಾದ ಕಮರಿಗೆ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮರಣ ಹೊಂದಿದ್ದಾರೆ.

 

ಮೃತಪಟ್ಟವರು ನಡ ಗ್ರಾಮದ ಕೊಲ್ಲೊಟ್ಟು ನಿವಾಸಿ ಹಾಜಿರಾಬಿ (55) ಮತ್ತು ಅದೇ ಗ್ರಾಮದ ಬೈಲು ದರ್ಕಾಸು ನಿವಾಸಿ ಸಾಜಿದಾಬಿ (56).

ಇವರೆಲ್ಲ ಒಂದೇ ಕುಟುಂಬದ ನಿವಾಸಿಗಳಾಗಿದ್ದು
ಮಮ್ತಾಝ್ (30), ಶೈನಾಝ್ (29) ಎಂಬವರು ಗಂಭೀರ ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಆಸ್ಪತ್ರಗೆ ಹೆಚ್ಚಿನ ಚಿಕಿತ್ಸೆಗಾಗಿ ಸೇರಿಸಲಾಗಿದೆ.

ರಿಕ್ಷಾ ಚಾಲಕ ನವೀದ್(31) ಅವರಿಗೂ ಗಾಯಗಳಾಗಿದ್ದು ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಠಾಣಾ ಪೊಲೀಸರು ಧಾವಿಸಿದ್ದಾರೆ.

ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

Leave A Reply

Your email address will not be published.