ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ ಆರಂಭ
ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ ಆರಂಭ
ಕಡಬ : ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಳದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಐದು ದಿವಸಗಳ ಉತ್ಸವಾದಿಗಳು ಫೆ-15ರಿಂದ 29ರ ವರೆಗೆ ನಡೆಯಲಿದೆ .
ಫೆ.13ರಂದು ಉತ್ಸವಗಳು ಆರಂಭಗೊಂಡಿದೆ. ಫೆ.14ರಂದು ರಾತ್ರಿ ಶ್ರೀ ನೇಲ್ಯಾರು ನೇಮ, ಉಳ್ಳಾಲ್ತಿ ನೇಮ ನಡೆಯಿತು.
ಫೆ 15ರಂದು ಶ್ರೀ ದೇವರ ದರ್ಶನ ಬಲಿ ಬಟ್ಟಲು ಕಾಣಿಕೆ ನಡೆಯಲಿದೆ.
ಫೆ. 16ರಂದು ರಾತ್ರಿ ಮಹಾರಥೋತ್ಸವ, ಶಿರಾಡಿ ದೈವ, ಉದ್ದಂಪಾಡಿ ದೈವ ನಡೆಯಲಿದೆ.
ಪ್ರಸಾದ ವಿತರಣೆ, ಶ್ರೀ ಭೂತಬಲಿ, ಶ್ರೀ ದೇವರ ಶಯನೋತ್ಸವ ನಡೆಯಲಿದೆ. ಫೆ.17ರಂದು ಕವಾಟೋದ್ಘಾಟನೆ, ಪಂಚಾಮೃತಾಭಿಷೇಕ, ಅಪರಾಹ್ನ ಶ್ರೀ ಎಲ್ಯಾರು ದೈವಗಳ ನೇಮ, ಮಿತ್ತೂರು ನಾಯರ್ ದೈವದ ನೇಮ ನಡೆಯಲಿದೆ. ಶ್ರೀ ದೇವರ ಅವಭೃತ ಸ್ನಾನ, ದ್ವಜಾರೋಹಣ ನಡೆಯಲಿದೆ.
ಫೆ.18ರಂದು ಮಹಾಪೂಜೆ ಮಂತ್ರಾಕ್ಷತೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಫೆ.19ರಂದು ಮರೋಳಿ ಶಿರಾಡಿ ರಾಜನ್ ದೈವದ ಭಂಡಾರ ಬಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿದಿಯಲ್ಲಿ ಪೂಜೆ ನಡೆಯಲಿದೆ.