ಸವಣೂರು ವಿದ್ಯಾರಶ್ಮಿ| ಕೊರೊನಾ ವೈರಸ್ ಕುರಿತು ಮಾಹಿತಿ
ಪುತ್ತೂರು : ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಸಕಾಲಿಕ ಅಗತ್ಯವಾದ ಕೊರೊನಾ ವೈರಸ್ ಕುರಿತು ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮ ನಡೆಯಿತು. ಪಾಲ್ತಾಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರಾದ ಡಾ. ದೀಪಕ್ ರೈಯವರು ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಕೊರೊನಾ ಕುರಿತು ಭಯ ಬೇಡ, ಬದಲಿಗೆ ವೈಯಕ್ತಿಕ ಸ್ವಚ್ಛತೆ ಮತ್ತು ಸರಿಯಾಗಿ ಬೇಯಿಸಿದ ಆಹಾರ ಹಾಗೂ ಶುದ್ಧ ಕುಡಿಯುವ ನೀರಿನ ಸೇವನೆಯಿಂದ ಕೊರೊನಾ ಕಾಯಿಲೆ ಬರದಂತೆ ಗರಿಷ್ಠ ಪ್ರಯತ್ನ ಮಾಡಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಸೀತಾರಾಮ ಕೇವಳ ಮಾತನಾಡಿ ನಾವು ತಿಳಿದುಕೊಂಡ ಮಾಹಿತಿಗಳನ್ನು ಇತರರಿಗೂ ಸಮರ್ಪಕವಾಗಿ ಹಂಚೋಣ ಎಂದರು. ಪೋಷಕರಾದ ಅನಿತಾ ಮತ್ತು ಸರಸ್ವತಿ ಹಾಗೂ ಇತರರು ಭಾಗವಹಿಸಿದ್ದರು.