ಕೌಕ್ರಾಡಿ ಪಟ್ಲಡ್ಕದ ಕೊರಗಜ್ಜ ಬ್ರಹ್ಮ ಮೊಗೇರ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವ – ನೇಮೋತ್ಸವ | ಫೆ.13 ರಿಂದ ಫೆ. 15
ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಪಟ್ಲಡ್ಕದ ಕೊರಗಜ್ಜ ಬ್ರಹ್ಮ ಮೊಗೇರ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ ನೇಮೋತ್ಸವವು ಫೆ.13 ರಿಂದ ಫೆ. 15 ರ ತನಕನೆರವೇರಲಿದೆ. ಎಂದು ಪ್ರತಿಷ್ಠಾ ಮಹೋತ್ಸವದ ಅಧ್ಯಕ್ಷರಾದ ತುಕ್ರಪ್ಪ ಶೆಟ್ಟಿ ನೂಜೆ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಅತ್ಯಂತ ಪುರಾತನ ಕಾಲದಿಂದಲೂ ಭಕ್ತಾದಿಗಳಿಂದ ಆರಾಧಿಸಲ್ಪಟ್ಟ ದೈವಗಳು ಅಪಾರಕಾರ್ಣಿಕವನ್ನು ಹೊಂದಿದೆ. ಈ ಕ್ಷೇತ್ರದಲ್ಲಿ ಭಕ್ತಾದಿಗಳು ಸಂತಾನ ಪ್ರಾಪ್ತಿ, ಕಲ್ಯಾಣ ಭಾಗ್ಯವನ್ನು ಪ್ರಾರ್ಥಿಸಿ, ಉದ್ಯೋಗ ಪ್ರಾಪ್ತಿಗಾಗಿ, ರೋಗ ನಿವಾರಣೆಗಾಗಿ, ಗೋ ಸಂಪತ್ತು ವೃದ್ಧಿಗಾಗಿ ಕಳವಾದವಸ್ತುಗಳು ಮರಳಿ ಸಿಗುವಂತೆ ಮತ್ತು ನ್ಯಾಯ ದೊರೆಯುವಂತೆ ಕ್ಷೇತ್ರದಲ್ಲಿ ಕೊರಗಜ್ಜ ಮತ್ತುಪರಿವಾರ ದೈವಗಳಿಗೆ ಶರಣಾಗಿ ಹರಕೆ ಸಲ್ಲಿಸುವ ಮೂಲಕ ತಮ್ಮ ಇಷ್ಟಾರ್ಥಗಳನ್ನುಸಾಧಿಸಿಕೊಳ್ಳುತ್ತಿದ್ದಾರೆ. ಈ ಕ್ಷೇತ್ರದ ಕಾರ್ಣಿಕದ ಬಗ್ಗೆ ಈ ಗ್ರಾಮದ ಸುತ್ತಮುತ್ತಲ ಗ್ರಾಮಗಳಲ್ಲಿಜನಜನಿತವಾಗಿದ್ದು, ಜಿಲ್ಲೆಯಾದ್ಯಂತ ಭಕ್ತಾದಿಗಳನ್ನು ಈ ಕ್ಷೇತ್ರವು ಹೊಂದಿರುತ್ತದೆ.
ಶ್ರೀ ದೈವಗಳ ಈಕ್ಷೇತ್ರವು ಕೇವಲ ಒಂದು ಜಾತಿಗೆ ಸೀಮಿತವಾಗಿರದೆ ಹಿಂದು, ಮುಸ್ಲಿಂ, ಕ್ರೈಸ್ತರ ಭಾವೈಕ್ಯತೆಯ ಪುಣ್ಯಕ್ಷೇತ್ರವಾಗಿದ್ದು ಎಲ್ಲ ಧರ್ಮಿಯರೂ ಶ್ರೀ ಕೊರಗಜ್ಜ ದೈವವನ್ನು ಪ್ರಾರ್ಥಿಸುತ್ತಿದ್ದಾರೆ.ಸ್ಥಳ ಪ್ರಶ್ನೆ ನಡೆದು ದೈವಗಳನ್ನು ಬಾಲಾಲಯದಲ್ಲಿ ಇಟ್ಟು ಕೆಲಸ ಆರಂಭಿಸಿ ಕೇವಲ 58ದಿನಗಳಲ್ಲಿ ಜೀರ್ಣೋದ್ದಾರಗೊಂಡು ಪುನರ್ ಪ್ರತಿಷ್ಠಾ ಕಾರ್ಯವು ನಡೆಯುತ್ತಿದೆ. ಬ್ರಹ್ಮ ಮೊಗೇರತಾಣ, ಬಿಮ್ಮೆರ್, ಕೊರಗಜ್ಜನ ಗುಂಡಗಳು, ಗುಳಿಗ ಚಾಮುಂಡಿ ದೈವಗಳ ಕಟ್ಟೆ ಮತ್ತು ಬೆಟ್ಟದಲ್ಲಿರುವಈ ಪರಿಸರಕ್ಕೆ ಆವರಣ ಗೋಡೆಗಳ ಕಾಮಗಾರಿಯು ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ನಡೆದುಪುನರ್ ಪ್ರತಿಷ್ಠಾ ಹಾಗೂ ನೇಮೋತ್ಸವವು ಧಾರ್ಮಿಕ ವಿಧಿವಿಧಾನಗಳ ಜೊತೆಗೆ ಅನ್ನ ಸಂತರ್ಪಣೆ,ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸಂಪನ್ನವಾಗಲಿದ್ದು ಸುಮಾರು 10 ಲಕ್ಷ ವೆಚ್ಚ ತಗಲಲಿದ್ದು ಪ್ರತಿಷ್ಠಾ ಕಾರ್ಯಕ್ರಮದ ಧಾರ್ಮಿಕ ವಿಧಿವಿಧಾನಗಳು ಬ್ರಹ್ಮ ಶ್ರೀ ಸುಬ್ರಹ್ಮಣ್ಯಬಳ್ಳುಕ್ಕುರಾಯರ ನೇತೃತ್ವದಲ್ಲಿ ನಡೆಯಲಿದೆ.
ಈ ಕ್ಷೇತ್ರದ ಜೀರ್ಣೋದ್ದಾರ ಮತ್ತು ಆಡಳಿತ ನಿರ್ವಹಣೆಗಾಗಿ ಟ್ರಸ್ಟ್ನ್ನು ರಚಿಸಲಾಗಿದ್ದುತುಕ್ರಪ್ಪ ಶೆಟ್ಟಿ ನೂಜೆ ಅಧ್ಯಕ್ಷರಾಗಿ, ಮಹೇಶ್ ಪಟ್ಲಡ್ಕ ಕಾರ್ಯದರ್ಶಿಯಾಗಿ ಶ್ರಮಿಸುತ್ತಿರುವ ಸ್ವಾಮಿಕೊರಗಜ್ಜ ಸೇವಾ ಟ್ರಸ್ಟ್ನ ಗೌರವಧ್ಯಕ್ಷರಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಎಸ್.ಅಂಗಾರರವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪುನರ್ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಮೂರು ಹೊತ್ತು ದಾಸೋಹವನ್ನು ನಡೆಸಲಿದ್ದು ಸುಮಾರು ಹದಿನೈದು ಸಾವಿರ ಭಕ್ತಾದಿಗಳು ಭಾಗವಹಿಸುವನಿರೀಕ್ಷೆಯಿದೆ. ಫೆ.13 ರಂದು ಧಾರ್ಮಿಕ ವಿಧಿವಿಧಾನಗಳ ಜೊತೆಗೆ ಸಂಜೆ 5 ಗಂಟೆಗೆ ಸ್ಥಳೀಯಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 6 ಗಂಟೆಗೆ ಧಾರ್ಮಿಕ ಸಭೆ, 8 ಗಂಟೆಗೆ ಶ್ರೀ ದಯಾನಂದಕತ್ತಲ್ಸಾರ್ರವರ ನೇತೃತ್ವದಲ್ಲಿ ತುಳುನಾಡ ವೈಭವ ನಡೆಯಲಿದೆ ಮತ್ತು ಅದೇ ದಿನ ಬೆಳಿಗ್ಗೆ ಬೇರೆಬೇರೆ ಗ್ರಾಮಸ್ಥರಿಂದ ಹೊರೆಕಾಣಿಕೆ ಹರಿದುಬರಲಿದೆ.
ಫೆಬ್ರವರಿ 14 ರಂದು ಬೆಳಗ್ಗೆ 8 ಗಂಟೆಗೆ ಶ್ರೀದೈವಗಳ ಪ್ರತಿಷ್ಠಾ ಕಾರ್ಯವು ನಡೆಯಲಿದ್ದು, ಸಂಜೆ 5 ಗಂಟೆಗೆ ಹಲವು ತಂಡಗಳಿಂದ ಕಮ್ಮಟ ಭಜನೆನಡೆಯಲಿದೆ ಬಳಿಕ ಧಾರ್ಮಿಕ ಸಭೆ ನಡೆದು ನಂತರ ಶ್ರೀ ದೈವಗಳಿಗೆ ನೇಮೋತ್ಸವವು ನೆರವೇರಲಿದೆ.- ಮೊದಲ ದಿನದ ಸಭಾ ಕಾರ್ಯಕ್ರಮದಲ್ಲಿ ಒಡಿಯೂರಿನ ಶ್ರೀಗಳು ಆಶೀರ್ವಚನ ಮಾಡಲಿದ್ದು ವಿಧಾನ ಪರಿಷತ್ತು ಸದಸ್ಯರಾಗಿರುವ ಹರೀಶ್ ಕುಮಾರ್, ಕುಶಾಲಪ್ಪ ಗೌಡ ಪೂವಾಜೆ, ಸುಬ್ರಹ್ಮಣ್ಯಕುಮಾರ್ ಅಗರ್ತ, ವಿಶ್ವನಾಥ ರೈ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
ಫೆಬ್ರವರಿ 14 ರ ಧಾರ್ಮಿಕಸಭೆಯಲ್ಲಿ ಮಾಣಿಲ ಶ್ರೀಗಳು ಆಶೀರ್ವಚನ ಮಾಡಲಿದ್ದು ಸುಳ್ಯ ಶಾಸಕರಾದ ಎಸ್ ಅಂಗಾರ, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ, ಪುತ್ತೂರು ಶಾಸಕರಾದ ಸಂಜೀವ ಮಠಂದೂರು, ಜಿ.ಪಂ.ಅಧ್ಯಕ್ಷರಾಗಿರುವ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ಜಿ.ಪಂ. ಸದಸ್ಯರಾದ ಸರ್ವೋತ್ತಮ ಗೌಡಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಆರ್ಥಿಕ ಸಮಿತಿಯ ರವಿಪ್ರಸಾದ್ ಶೆಟ್ಟಿ, ಪ್ರಚಾರ ಸಮಿತಿಯ ಸಂಚಾಲಕ ಸುದೀರ್ ಕುಮಾರ್, ಕಾರ್ಯದರ್ಶಿ ಮಹೇಶ್ ಪಟ್ಲಡ್ಕ ಉಪಸ್ಥಿತರಿದ್ದರು.