ಫೆ.12 : ಬಾಲವನದಲ್ಲಿ ಕವಿಗೋಷ್ಠಿ, ಕಾರಂತರ ಸಾಹಿತ್ಯ ಲೋಕ ಪರಿಚಯ

ಫೆ.12: ಬಾಲವನದಲ್ಲಿ ಕವಿಗೋಷ್ಠಿ, ಕಾರಂತರ ಸಾಹಿತ್ಯ ಲೋಕ ಪರಿಚಯ

ಪುತ್ತೂರು: ಡಾ.ಶಿವರಾಮ ಕಾರಂತ ಬಾಲವನ ಅಭಿವೃದ್ಧಿ ಸಮಿತಿ, ಸಹಾಯಕ ಆಯುಕ್ತರ ಕಚೇರಿ, ಪುತ್ತೂರು ಉಪವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ `ಸೃಜನಾತ್ಮಕ ಬರವಣಿಗೆ, ಕವಿಗೋಷ್ಠಿ ಹಾಗೂ ಕಾರಂತರ ಸಾಹಿತ್ಯ ಲೋಕ ಪರಿಚಯ’ ಕಾರ್ಯಕ್ರಮ ಫೆ.12ರಂದು ಪರ್ಲಡ್ಕ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ನಡೆಯಲಿದೆ.
ತಾ.ಪಂ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ಸಾಹಿತಿ, ಕವಿ ಸುಬ್ರಾಯ ಚೊಕ್ಕಾಡಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಶಿವರಾಮ ಕಾರಂತರ ಸಾಹಿತ್ಯ ಲೋಕದ ಬಗ್ಗೆ ಸಾಹಿತಿ, ಅಂಕಣಗಾರ ಪ್ರೊ. ವಿ.ಬಿ. ಅರ್ತಿಕಜೆ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪುತ್ತೂರು ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಝೇವಿಯರ್ ಡಿಸೋಜ ಭಾಗವಹಿಸಲಿದ್ದಾರೆ.
ಕವಿಗೋಷ್ಠಿಯಲ್ಲಿ ವಿವಿಧ ಕವಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಕವನ ವಾಚನ ಮಾಡಲಿದ್ದಾರೆ. ವಿಶೇಷವಾಗಿ `ರಂಗಮಡಿಲು’ ತಂಡದಿಂದ ಗೀತಾ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಎ.ಸಿ.ಡಾ. ಯತೀಶ್ ಉಳ್ಳಾಲ್, ಕಾರ್ಯಕ್ರಮ ಸಂಯೋಜಕ ಕೃಷ್ಣಪ್ಪ ಬಂಬಿಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.