ಕಂಬಳವನ್ನು ಪ್ರವಾಸೋದ್ಯಮವಾಗಿ ಬೆಳೆಸಲು ಒತ್ತಾಯ: ಅಶೋಕ್ ರೈ ಕೋಡಿಂಬಾಡಿ

ಅಶೋಕ್ ರೈ ಕೋಡಿಂಬಾಡಿ

ವಿಜಯ-ವಿಕ್ರಮ ಜೋಡುಕರೆ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆ

 

ಉಪ್ಪಿನಂಗಡಿ: 35ನೇ ವರ್ಷದ ವಿಜಯ- ವಿಕ್ರಮ ಜೋಡುಕರೆ ಕಂಬಳವು ಫೆ.29ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಹಳೆಗೇಟುವಿನ ಬಳಿ ನೇತ್ರಾವತಿ ನದಿ ಕಿನಾರೆಯಲ್ಲಿರುವ ಕಂಬಳ ಕರೆಯ ಬಳಿ ಬಿಡುಗಡೆಗೊಳಿಸಲಾಯಿತು.

ಆಮಂತ್ರಣ ಬಿಡುಗಡೆ

ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ತುಳುನಾಡಿನ ಜನಪದ ಕಲೆ ಕಂಬಳವನ್ನು ಪ್ರವಾಸೋದ್ಯಮವಾಗಿ ಬೆಳೆಸಲು ಸರಕಾರಕ್ಕೆ ಒತ್ತಾಯಿಸಲು ವಿಜಯ- ವಿಕ್ರಮ ಕಂಬಳ ಸಮಿತಿ ನಿರ್ಧರಿಸಿದ್ದು,ಈ ಬಾರಿಯ ಕಂಬಳವನ್ನು ಹಿಂದೆಂದಿಗಿಂತಲೂ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದ್ದು, ಮುಖ್ಯಮಂತ್ರಿಗಳು, ಸಚಿವರಾದಿಯಾಗಿ ಎಲ್ಲಾ ಜನಪ್ರತಿನಿಧಿಗಳನ್ನುಆಹ್ವಾನಿಸಲಾಗಿದೆ. ಶಾಲಾ ವಿದ್ಯಾರ್ಥಿಗಳಿಗಾಗಿ ಕಂಬಳ ವೀಕ್ಷಿಸಲು ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಬೆಳಗ್ಗೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವಠಾರದಿಂದ ಕಂಬಳ ಕರೆಗೆ ಕಂಬಳ ಕೋಣಗಳ ಮೆರವಣಿಗೆ ನಡೆಯಲಿದ್ದು, ಗೊಂಬೆ ಕುಣಿತ, ತಟ್ಟಿರಾಯ, ಕೀಲು ಕುದುರೆ, ಚೆಂಡೆ, ನಾಸಿಕ್ ಬ್ಯಾಂಡ್ ಮೆರವಣಿಗೆಗೆ ಹೊಸ ಮೆರುಗು ನೀಡಲಿವೆ ಎಂದರು.

ಈ ಸಂದರ್ಭ ಕಂಬಳ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ ಎನ್., ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ನೆಕ್ಕರೆ, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಉಪಾಧ್ಯಕ್ಷರಾದ ರಾಮಚಂದ್ರ ಮಣಿಯಾಣಿ, ವಿಠಲ ಶೆಟ್ಟಿ ಕೊಲ್ಯೊಟ್ಟು, ಕಾರ್ಯದರ್ಶಿ ಚಂದ್ರಶೇಖರ ಮಡಿವಾಳ, ಸಂಘಟನಾ ಕಾರ್ಯದರ್ಶಿ ಯೋಗೀಶ್ ಸಾಮಾನಿ ಸಂಪಿಗೆದಡಿ, ಪದಾಧಿಕಾರಿಗಳಾದ ಕೇಶವ ರಂಗಾಜೆ, ಜಯಾನಂದ ಪಿಲಿಗುಂಡ, ಆದರ್ಶ ಶೆಟ್ಟಿ ಕಜೆಕ್ಕಾರು, ದಿಲೀಪ್ ಕರಾಯ, ಜಯಪ್ರಕಾಶ್ ಬದಿನಾರು, ಶಿವಪ್ರಸಾದ್ ರೈ ಮಠಂತಬೆಟ್ಟು, ಜಗದೀಶ ಪುಳಿತ್ತಡಿ ಉಪಸ್ಥಿತರಿದ್ದರು.

Leave A Reply

Your email address will not be published.