ಖಾರದ ಪುಡಿ ಎರಚಿ ವ್ಯಕ್ತಿಯ ಇರಿದು ಕೊಲೆ

ಟೈಲ್ಸ್ ನಾಗ

ಕಣ್ಣಿಗೆ ಖಾರದ ಪುಡಿ ಎರಚಿ, ಮಾರಾಕಾಸ್ತ್ರಗಳಿಂದ ಇರಿದು ವ್ಯಕ್ತಿಯೋರ್ವರನ್ನು ಕೊಲೆಗೈದ ಘಟನೆ ಶಿವಮೊಗ್ಗ ಕುವೆಂಪು ಬಡಾವಣೆಯಲ್ಲಿ ನಡೆದಿದೆ.

 

ರವಿವಾರ ರಾತ್ರಿ ಈ ಘಟನೆ ನಡೆದಿದ್ದು, ಶಿವಮೊಗ್ಗದ ಟೈಲ್ಸ್ ನಾಗ (45) ಕೊಲೆಯಾದ ವ್ಯಕ್ತಿ. ದುಷ್ಕರ್ಮಿಗಳು ಹಳೆ ವೈಷಮ್ಯದ ಹಿನ್ನಲೆ ಈ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.

ಟೈಲ್ಸ್ ನಾಗ ಅವರ ಕಣ್ಣಿಗೆ ಖಾರದ ಪುಡಿ ಎರಚಿ, ಬಳಿಕ ಹಲ್ಲೆ ಮಾಡಿ ದುಷ್ಕರ್ಮಿಗಳು ಕೊಲೆಗೈದಿದ್ಧಾರೆ. ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ,ತನಿಖೆ ನಡೆಸುತ್ತಿದ್ದು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Leave A Reply

Your email address will not be published.