ಟೀಮ್ ಯಡಿಯೂರಪ್ಪ ನವರ ಖಾತೆ ಹಂಚಿಕೆ ಕೊನೆಗೂ ಕಂಪ್ಲೀಟ್, ಇಲ್ಲಿದೆ ಖಾತೆ ವಿವರ
ಕರ್ನಾಟಕದಲ್ಲಿ ಉಪ ಚುನಾವಣೆಗಳು ನಡೆದು ಎರಡು ತಿಂಗಳು ಕಳೆದು ಹೋದ ಮೇಲೆ ಕೊನೆಗೂ ಬಸವ ಕಾದಂತೆ ಹತ್ತು ಮಂದಿ ಸಚಿವರುಗಳು ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಅವರಿಗಿನ್ನೂ ಖಾತೆ ಹಂಚಿಕೆ ನಡೆದಿರಲಿಲ್ಲ.
ಆದರೆ ಇವತ್ತು ಖಾತೆ ಹಂಚಿಕೆ ಪ್ರಕ್ರಿಯೆ ಕೂಡ ಮುಗಿದಿದ್ದು, ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮೇಶ ಜಾರಕಿಹೊಳಿ ಅವರಿಗೆ ತಾನು ಇಷ್ಟಪಟ್ಟ ಜಲಸಂಪನ್ಮೂಲ ಖಾತೆಯೇ ದೊರೆತಿದೆ. ದೊರೆತಿದೆ ಎನ್ನುವುದಕ್ಕಿಂತ ಅವರು ಫೈಟ್ ಮಾಡಿ ಪಡೆದುಕೊಂಡಿದ್ದಾರೆ ಅನ್ನುವುದೇ ಹೆಚ್ಚು ಸೂಕ್ತವೆನಿಸುತ್ತದೆ.
ಮಂತ್ರಿಗಳಿಗೆ ಹಂಚಿಕೆಯಾದ ಖಾತೆಗಳ ವಿವರ ಹೀಗಿದೆ.
ರಮೇಶ್ ಜಾರಕಿಹೊಳಿ : ಜಲಸಂಪನ್ಮೂಲ ಖಾತೆ
ಎಸ್ ಟಿ ಸೋಮಶೇಖರ್ : ಸಹಕಾರ ಖಾತೆ
ಬೈರತಿ ಬಸವರಾಜ್ : ನಗರಾಭಿವೃದ್ಧಿ ಇಲಾಖೆ
ಬಿಸಿ ಪಾಟೀಲ್ : ಸಹಕಾರ ಇಲಾಖೆ
ಕೆ ಗೋಪಾಲಯ್ಯ : ಸಣ್ಣ ಕೈಗಾರಿಕೆ
ಶಿವರಾಮ್ ಹೆಬ್ಬಾರ್ : ಕಾರ್ಮಿಕ ಇಲಾಖೆ
ಡಾಕ್ಟರ್ ಕೆ. ಸುಧಾಕರ್ : ಇಂಧನ ಇಲಾಖೆ
ಶ್ರೀಮಂತ ಪಾಟೀಲ್ : ಜವಳಿ ಖಾತೆ
ನಾರಾಯಣಗೌಡ : ಪೌರಾಡಳಿತ ಮತ್ತು ತೋಟಗಾರಿಕೆ
ಆನಂದ ಸಿಂಗ್ : ಆಹಾರ ಮತ್ತು ನಾಗರಿಕ ಪೂರೈಕೆ
ಬಿಜೆಪಿಯ ರಾಜ್ಯ ಮತ್ತು ಕೇಂದ್ರ ನಾಯಕರುಗಳು ಅಳೆದು ಸುರಿದು, ತಿಣುಕಾಡಿ ಕೊನೆಗೂ ಟೀಮ್ ಸೆಟ್ ಮಾಡಿದ್ದಾರೆ. ಇನ್ನುಳಿದ ಮೂರು ವರ್ಷಗಳಲ್ಲಿ ಈ ಆಟಗಾರರು ಯಾವ ರೀತಿ ಪರ್ಫಾರ್ಮೆನ್ಸ್ ತೋರಿಸುತ್ತಾರೆ ಎಂಬುದು ಕಾದು ನೋಡಬೇಕಷ್ಟೇ.