ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಜಾತ್ರೆ: ಬ್ರಹ್ಮರಥೋತ್ಸವ



ಕಡಬ: ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ದರ್ಶನಬಲಿ, ಬಟ್ಟಲು ಕಾಣಿಕೆ ನಡೆಯಿತು. ಬೆಳಿಗ್ಗೆ ನಂದಾದೀಪೋತ್ಸವ, ಬಳಿಕ ಉತ್ಸವ ಆರಂಭಗೊಂಡು ಮಧ್ಯಾಹ್ನ ದರ್ಶನ ಬಲಿ, ಬಟ್ಟಲುಕಾಣಿಕೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಸಂಜೆ ದೇವರ ಬಲಿ ಹೊರಟು ದಂಡತೀರ್ಥದಲ್ಲಿ ಕೆರೆ ಉತ್ಸವ, ದೇವರ ಗುಡ್ಡೆ, ತಾವೂರು ದಾರಿಯ ಕಟ್ಟೆಗಳಲ್ಲಿ ಕಟ್ಟೆಪೂಜೆ ಬಳಿಕ ಶ್ರೀರಾಮ ಸಂದರ್ಶನೋತ್ಸವ ನಡೆದು, ಶಾಲಾ ಕಾಲೇಜು ಬಳಿಯ ಕಟ್ಟೆಪೂಜೆಗಳು, ದೈವಗಳ ಭಂಡಾರ ಹಿಡಿಯುವುದು, ವಸಂತ ಕಟ್ಟೆ ಉತ್ಸವ ನಡೆಯಿತು. ಬಳಿಕ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಆದಿತ್ಯವಾರ ಬೆಳಿಗ್ಗೆಬಲಿಹೊರಟು ಉತ್ಸವ, ಗಣಪತಿ ಹೋಮ,,ಮಹಾಪೂಜೆ ನಡೆಯಿತು. ರಾತ್ರಿ ದೇವರ ಬಲಿ ಹೊರಟು ಉತ್ಸವ,, ನಂತರ ಬ್ರಹ್ಮರಥೋತ್ಸವ,ಶಯನೋತ್ಸವ ನಡೆಯಿತು.