ಜಾಲ್ಸೂರು ಗ್ರಾ.ಪಂ,ಬೊಳುಬೈಲು ಯುವಕ‌ ಮಂಡಲದಿಂದ ಸ್ವಚ್ಚತಾ ಆಂದೋಲನ

ಸುಳ್ಯ: ಗ್ರಾಮಪಂಚಾಯತ್ ಜಾಲ್ಸೂರು ಇದರ ಸಹಕಾರದೊಂದಿಗೆ ನವಚೇತನ ಯುವಕಮಂಡಲ(ರಿ)ಬೊಳುಬೈಲು ಇದರ ವತಿಯಿಂದ ಜಾಲ್ಸೂರು ಗ್ರಾಮದ ಬೈತಡ್ಕ ತಿರುವಿನಲ್ಲಿ ಸ್ವಚ್ಚತಾ ಅಂದೋಲನ ನಡೆಸಲಾಯಿತು .

 

ಹಲವಾರು ತಿಂಗಳಿನಿಂದ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಗೊಳ್ಳುತ್ತಿರುವುದನ್ನು ಮನಗಂಡು ನವಚೇತನ ಯುವಕಮಂಡಲ ಗ್ರಾಮ ಸಭೆಯಲ್ಲಿ ಸ್ವಚ್ಚತೆ ಮಾಡುವುದಾಗಿ ಘೋಷಿಸಿತ್ತು, ಈ ಪ್ರದೇಶದಲ್ಲಿ ಸುಳ್ಯ ಪೇಟೆಯ ಕೋಳಿ ತಾಜ್ಯ, ಹೆದ್ದಾರಿ ಬದಿ ತಲೆ ಎತ್ತಿರುವ ಅನಧಿಕೃತ ಹೆಲ್ಮೆಟ್ ಆಂಗಡಿಗಳ ಕಸಗಳನ್ನು ಮೂಟೆಯಲ್ಲಿ ತಂದು ಎಸೆದಿರುವುದು ಹಾಗೂ ಮದುವೆ ಮನೆಯಲ್ಲಿ‌ ಉಪಯೋಗಿಸಿದ ಪ್ಲಾಸ್ಟಿಕ್ ಪ್ಲೇಟ್,ನೀರಿನ ಬಾಟಲ್ ಗಳು ದೊರಕಿದ್ದು ,ಉಪಯೊಗಿಸಿದ ಬಟ್ಟೆಬರೆಗಳು ಕೂಡ ತಂದು ಎಸೆದಿರುತ್ತಾರೆ.

500 ಮೀ ದೂರ ವ್ಯಾಪ್ತಿಯಲ್ಲಿ ಪಿಕಪ್ ನಲ್ಲಿ 3ಲೋಡ್ ನಷ್ಟು ಕಸ ದೊರೆತ್ತಿದ್ದು ಅದನ್ನು ಸದ್ಯಕ್ಕೆ ಗ್ರಾಮ ಪಂಚಾಯತಿ ಕಾರ್ಯಾಲಯದ ಪಕ್ಕದಲ್ಲಿರುವ ಮೈದಾನದಲ್ಲಿ ರಾಶಿ ಹಾಕಲಾಗಿದೆ. ಅಲ್ಲಿ ಕಸವನ್ನು ವಿಲೇವಾರಿ ಕೆಲಸವನ್ನು ಪಂಚಾಯತ್ ವತಿಯಿಂದ ಮಾಡಲಾಗುವುದೆಂದ ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಚ್ಚತಾ ಕಾರ್ಯವನ್ನು ಮೆಚ್ಚಿ ಮೈಸೂರಿನ ಪ್ರಸಿದ್ದ ಕಾಲೇಜಿನ ಪ್ರೋಪೆಸರ್ ಮೈಕಲ್ ಅವರು ಉಪಹಾರದ ಮೊತ್ತವನ್ನು ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ ಬಿ ಒಕ್ಕೂಟದ ಜಾಲ್ಸೂರು ಇದರ ಮೇಲ್ವಿಚಾರಕ ಪ್ರಶಾಂತ್ ಇವರು ಐಸ್ ಕ್ರೀಂ ನೀಡಿದರು.

ಕುಡಿಯುವ ನೀರಿನ ವ್ಯವಸ್ಥೆಯನ್ನು ಅದಿತ್ಯ ಎಂಟರ್ ಪ್ರೈಸಸ್ ನ ಮಾಲಕರಾದ ಬೊಜಪ್ಪನವರು ನೀಡಿದರು. ಮಜ್ಜಿಗೆ ಯನ್ನು ಪುರುಷೋತ್ತಮ ಆಡ್ಕಾರು ವಿತರಿಸಿದರು,ಸ್ವಚ್ಚತಾ ಸ್ಥಳಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಾಕಾರ್ಯವಾಹ ನ.ಸೀತಾರಾಮ,ಅಡ್ಕಾರು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಗುರುರಾಜ್ ಭಟ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಧಾಕರ ಕಾಮತ್, ಕನಕಮಜಲು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಸಾಮಾಜಿಕ ಕಾರ್ಯಕರ್ತ ವಿನೋದ್ ಲಸ್ರಾದೋ ,ಪತ್ರಕರ್ತ ಲೊಕೇಶ್ ಗುಡ್ಡೆಮನೆ ಆಗಮಿಸಿ ಶುಭಹಾರೈಸಿದರು.ಹಲವಾರು ಚಾಲಕರು, ಪ್ರಯಾಣಿಕರ ಶುಭಹಾರೈಕೆ ಕಾರ್ಯಕ್ಕೆ ಸ್ಪೂರ್ತಿ ಕೊಡುತ್ತಿತ್ತು.

ಈ ಕಾರ್ಯದಲ್ಲಿ ನಿತಿನ್ ಆರ್ಭಡ್ಕ ,ಜಯಪ್ರಕಾಶ್ ಬೈತಡ್ಕ ,ಲಕ್ಮ್ಷಿನಾರಾಯಣ ಕುಂಬರ್ಚೋಡು,ಭುವನ್ ಬೊಳುಬೈಲು,ಪ್ರಸಾದ್ ಬೊಳುಬೈಲು,ಜನಾರ್ದನ ಬೊಳುಬೈಲು ,ಜಯಂತ ಬೊಳುಬೈಲು, ಪ್ರಸಾದ್ ಕಾಟೂರು ,ಸುದೀಪ್ ಕುಕ್ಕಂದೂರು ,ಸ್ವಸ್ತಿಕ್ ಪನೆಯಾಲ ,ರಂಜಿತ್ ಕಾಟೂರು ,ವಿನಿತ್ ಕಾಟೂರು ,ಪ್ರವೀಣ್ ಕಾಟೂರು ,ಸಾತ್ವಿಕ್ ಪನೆಯಾಲ ಮೊದಲಾದವರು ಉಪಸ್ಥಿತರಿದ್ದರು.

Leave A Reply

Your email address will not be published.