ಬೆಳ್ತಂಗಡಿಯ ಲಾಯಿಲದಲ್ಲಿ ಚೂರಿಯಿಂದ ಇರಿದು ಕೊಲೆ : ಆರೋಪಿಗಳ ಅರೆಸ್ಟ್

ನಿನ್ನೆ, 09.02.2020 ರಂದು ಬೆಳಿಗ್ಗೆ 11:00 ಗಂಟೆಗೆ ಆರೋಪಿಗಳಾದ ಯೋಗೀಶ ( ಪ್ರಾಯ:51 ವರ್ಷ) ಗಾಂಧಿನಗರ, ಲಾಯಿಲ ಗ್ರಾಮ, ಬೆಳ್ತಂಗಡಿ ಮತ್ತು ಜೀವನ್ (ಪ್ರಾಯ:18 ವರ್ಷ) ತಂದೆ: ಯೋಗೀಶ್ ವಾಸ: ಗಾಂಧಿನಗರ ಮನೆ, ಲಾಯಿಲ ಗ್ರಾಮ, ಬೆಳ್ತಂಗಡಿ ಎಂಬವರು ಮನೆಗೆ ಹೋಗುವ ದಾರಿಯ ವಿಚಾರದಲ್ಲಿ ಬೆಳ್ತಂಗಡಿ ಲಾಯಿಲ ಗ್ರಾಮದ ನಿವಾಸಿ ಉಮೇಶ್ ಎಂಬವರಿಗೆ ರಾಡ್ ನಿಂದ ಹೊಡೆದು, ಚೂರಿಯಿಂದ ಇರಿದು ಹಲ್ಲೆ ಮಾಡಿದ್ದರು.

 

l

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಉಮೇಶ್ ಎಂಬವರನ್ನು ಉಜಿರೆಯ ಎಸ್.ಡಿ.ಎಂ ಆಸ್ಪತ್ರೆಗೆ ಮೊದಲು ದಾಖಲಿಸಲಾಗಿತ್ತು.

I

ಆನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಉಮೇಶ್ ಅವರು ಇಂದು ಮುಂಜಾನೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾದರು.

ಮೃತ ಉಮೇಶ್ ಅವರು ಮುಂಬೈಯಲ್ಲಿ ಉದ್ಯೋಗದಲ್ಲಿದ್ದು ತೀರ ಇತ್ತೀಚೆಗೆ ಊರಿಗೆ ಆಗಮಿಸಿದ್ದರು.

ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣಾ ಅಕ್ರ:13/2020 ಕಲಂ: 302 504 R/W 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

Leave A Reply

Your email address will not be published.