Day: February 10, 2020

ಯುವ ಬಂಟರ‌ ದಿನಾಚರಣೆ: ಆಮಂತ್ರಣ ಬಿಡುಗಡೆ

ಪುತ್ತೂರು: ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಫೆ.22 ರಂದು ನಡೆಯಲಿರುವ ಯುವ ಬಂಟ ದಿನಾಚರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯಿತು. ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಎ.ಹೇಮನಾಥ ಶೆಟ್ಟಿ ಕಾವು, ತಾಲೂಕು ಸಂಚಾಲಕ ದಯಾನಂದ ರೈ ಮನವಳಿಕೆ, ಸಹ ಸಂಚಾಲಕ ಅಜಯ್ ಆಳ್ವ ಬಳ್ಳಮಜಲು, ತಾಲೂಕು ಬಂಟರ ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ರಾಖೇಶ್ ರೈ ಕೆಡೆಂಜಿ, ಖಜಾಂಜಿ ಮೀರಾ …

ಯುವ ಬಂಟರ‌ ದಿನಾಚರಣೆ: ಆಮಂತ್ರಣ ಬಿಡುಗಡೆ Read More »

ಜಾಲ್ಸೂರು ಗ್ರಾ.ಪಂ,ಬೊಳುಬೈಲು ಯುವಕ‌ ಮಂಡಲದಿಂದ ಸ್ವಚ್ಚತಾ ಆಂದೋಲನ

ಸುಳ್ಯ: ಗ್ರಾಮಪಂಚಾಯತ್ ಜಾಲ್ಸೂರು ಇದರ ಸಹಕಾರದೊಂದಿಗೆ ನವಚೇತನ ಯುವಕಮಂಡಲ(ರಿ)ಬೊಳುಬೈಲು ಇದರ ವತಿಯಿಂದ ಜಾಲ್ಸೂರು ಗ್ರಾಮದ ಬೈತಡ್ಕ ತಿರುವಿನಲ್ಲಿ ಸ್ವಚ್ಚತಾ ಅಂದೋಲನ ನಡೆಸಲಾಯಿತು . ಹಲವಾರು ತಿಂಗಳಿನಿಂದ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಗೊಳ್ಳುತ್ತಿರುವುದನ್ನು ಮನಗಂಡು ನವಚೇತನ ಯುವಕಮಂಡಲ ಗ್ರಾಮ ಸಭೆಯಲ್ಲಿ ಸ್ವಚ್ಚತೆ ಮಾಡುವುದಾಗಿ ಘೋಷಿಸಿತ್ತು, ಈ ಪ್ರದೇಶದಲ್ಲಿ ಸುಳ್ಯ ಪೇಟೆಯ ಕೋಳಿ ತಾಜ್ಯ, ಹೆದ್ದಾರಿ ಬದಿ ತಲೆ ಎತ್ತಿರುವ ಅನಧಿಕೃತ ಹೆಲ್ಮೆಟ್ ಆಂಗಡಿಗಳ ಕಸಗಳನ್ನು ಮೂಟೆಯಲ್ಲಿ ತಂದು ಎಸೆದಿರುವುದು ಹಾಗೂ ಮದುವೆ ಮನೆಯಲ್ಲಿ‌ ಉಪಯೋಗಿಸಿದ ಪ್ಲಾಸ್ಟಿಕ್ ಪ್ಲೇಟ್,ನೀರಿನ ಬಾಟಲ್ …

ಜಾಲ್ಸೂರು ಗ್ರಾ.ಪಂ,ಬೊಳುಬೈಲು ಯುವಕ‌ ಮಂಡಲದಿಂದ ಸ್ವಚ್ಚತಾ ಆಂದೋಲನ Read More »

ವಿದ್ಯುತ್ ಶಾಕ್‌ನಿಂದ ಗಂಭೀರಗಾಯ ಗೊಂಡ ಯುವಕ‌ ದೀಕ್ಷಿತ್ ಮೃತ್ಯು

ಪುತ್ತೂರು: ಇಲ್ಲಿನ ಪ್ರಗತಿ ಆಸ್ಪತ್ರೆಗೆ ಬಣ್ಣ ಬಳಿಯುತ್ತಿದ್ದ ಸಂದರ್ಭ ಕಟ್ಟಡದ ಪಕ್ಕದಲ್ಲೇ ಇದ್ದ ವಿದ್ಯುತ್ ಟಿ.ಸಿ.ಗೆ ಪೈಂಟ್ ಚೆಲ್ಲಿ ಅದರಿಂದ ಹೊಮ್ಮಿದ ಬೆಂಕಿಯ ಜ್ವಾಲೆಗೆ ಹಾಗೂ ವಿದ್ಯುತ್ ಶಾಕಿಗೆ ತುತ್ತಾಗಿದ್ದ ದೀಕ್ಷಿತ್ ಫೆ.10 ರಂದು ಮೃತಪಟ್ಟಿದ್ದಾರೆ. ಯುವಕ ದೀಕ್ಷಿತ್ ಮೃತ ದೇಹವನ್ನು ಆಸ್ಪತ್ರೆಯ ಬಿಲ್ ಪಾವತಿಸದೆ ನೀಡುವುದಿಲ್ಲ ಎಂದಿದ್ದ ಮಂಗಳೂರಿನ ಆಸ್ಪತ್ರೆಯವರು ಆ ಬಳಿಕ ಡಿಸಿ ಅವರ ಸೂಚನೆಯಂತೆ ಆಸ್ಪತ್ರೆಯವರು ಹಸ್ತಾಂತರಿಸಿದ್ದಾರೆ.2 ಲಕ್ಷದ 90 ಸಾವಿರ ಕೊಡಬೇಕೆಂಬ ಆಸ್ಪತ್ರೆಯ ಸಿಬಂದಿಗಳು ಬಳಿಕ 50 ಸಾವಿರ ನೀಡಿದ ಬಳಿಕ …

ವಿದ್ಯುತ್ ಶಾಕ್‌ನಿಂದ ಗಂಭೀರಗಾಯ ಗೊಂಡ ಯುವಕ‌ ದೀಕ್ಷಿತ್ ಮೃತ್ಯು Read More »

ಸುಳ್ಯ: ಅಲೆಟ್ಟಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಗೆ ಬೆಂಕಿ

ಸುಳ್ಯ: ತಾಲೂಕಿನ ಆಲೆಟ್ಟಿ ಗ್ರಾಮದ ಗುಂಡ್ಯ ಎಂಬಲ್ಲಿ ಕೃಷ್ಣ ಎಂಬವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಒಡೆದು ಮನೆ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಫೆ.10 ರಂದು ನಡೆದಿದೆ. ಫೆ.10 ರಂದು ಸಂಜೆ ಇವರ ಮನೆಯಲ್ಲಿ ಹೊಗೆ ಕಾಣಿಸಿಕೊಂಡಿದ್ದು ಸ್ವಲ್ಪ ಹೊತ್ತಿನಲ್ಲಿ ಭಾರಿ ಸದ್ದು ಕೇಳಿಸಿತು. ಮನೆಯ ಒಳಗೆ ಗ್ಯಾಸ್ ಸಿಲಿಂಡರ್ ಒಡೆದ ರಭಸಕ್ಕೆ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿದೆ. ಮನೆಯ ಎದುರಲ್ಲಿದ್ದ ತೆಂಗಿನ ಮರದ ಮೇಲೆ ಬೆಂಕಿಯ ಉಂಡೆ ಹಾರಿ ತೆಂಗಿನ ಮರಕ್ಕೆ ಬೆಂಕಿ ಹತ್ತಿಕೊಂಡಿತು. ಮನೆಯಲ್ಲಿ ಕೃಷ್ಣ …

ಸುಳ್ಯ: ಅಲೆಟ್ಟಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಗೆ ಬೆಂಕಿ Read More »

ಟೀಮ್ ಯಡಿಯೂರಪ್ಪ ನವರ ಖಾತೆ ಹಂಚಿಕೆ ಕೊನೆಗೂ ಕಂಪ್ಲೀಟ್, ಇಲ್ಲಿದೆ ಖಾತೆ ವಿವರ

ಕರ್ನಾಟಕದಲ್ಲಿ ಉಪ ಚುನಾವಣೆಗಳು ನಡೆದು ಎರಡು ತಿಂಗಳು ಕಳೆದು ಹೋದ ಮೇಲೆ ಕೊನೆಗೂ ಬಸವ ಕಾದಂತೆ ಹತ್ತು ಮಂದಿ ಸಚಿವರುಗಳು ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಅವರಿಗಿನ್ನೂ ಖಾತೆ ಹಂಚಿಕೆ ನಡೆದಿರಲಿಲ್ಲ. ಆದರೆ ಇವತ್ತು ಖಾತೆ ಹಂಚಿಕೆ ಪ್ರಕ್ರಿಯೆ ಕೂಡ ಮುಗಿದಿದ್ದು, ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮೇಶ ಜಾರಕಿಹೊಳಿ ಅವರಿಗೆ ತಾನು ಇಷ್ಟಪಟ್ಟ ಜಲಸಂಪನ್ಮೂಲ ಖಾತೆಯೇ ದೊರೆತಿದೆ. ದೊರೆತಿದೆ ಎನ್ನುವುದಕ್ಕಿಂತ ಅವರು ಫೈಟ್ ಮಾಡಿ ಪಡೆದುಕೊಂಡಿದ್ದಾರೆ ಅನ್ನುವುದೇ ಹೆಚ್ಚು ಸೂಕ್ತವೆನಿಸುತ್ತದೆ. ಮಂತ್ರಿಗಳಿಗೆ ಹಂಚಿಕೆಯಾದ ಖಾತೆಗಳ …

ಟೀಮ್ ಯಡಿಯೂರಪ್ಪ ನವರ ಖಾತೆ ಹಂಚಿಕೆ ಕೊನೆಗೂ ಕಂಪ್ಲೀಟ್, ಇಲ್ಲಿದೆ ಖಾತೆ ವಿವರ Read More »

ಬೆಳ್ತಂಗಡಿಯ ಲಾಯಿಲದಲ್ಲಿ ಚೂರಿಯಿಂದ ಇರಿದು ಕೊಲೆ : ಆರೋಪಿಗಳ ಅರೆಸ್ಟ್

ನಿನ್ನೆ, 09.02.2020 ರಂದು ಬೆಳಿಗ್ಗೆ 11:00 ಗಂಟೆಗೆ ಆರೋಪಿಗಳಾದ ಯೋಗೀಶ ( ಪ್ರಾಯ:51 ವರ್ಷ) ಗಾಂಧಿನಗರ, ಲಾಯಿಲ ಗ್ರಾಮ, ಬೆಳ್ತಂಗಡಿ ಮತ್ತು ಜೀವನ್ (ಪ್ರಾಯ:18 ವರ್ಷ) ತಂದೆ: ಯೋಗೀಶ್ ವಾಸ: ಗಾಂಧಿನಗರ ಮನೆ, ಲಾಯಿಲ ಗ್ರಾಮ, ಬೆಳ್ತಂಗಡಿ ಎಂಬವರು ಮನೆಗೆ ಹೋಗುವ ದಾರಿಯ ವಿಚಾರದಲ್ಲಿ ಬೆಳ್ತಂಗಡಿ ಲಾಯಿಲ ಗ್ರಾಮದ ನಿವಾಸಿ ಉಮೇಶ್ ಎಂಬವರಿಗೆ ರಾಡ್ ನಿಂದ ಹೊಡೆದು, ಚೂರಿಯಿಂದ ಇರಿದು ಹಲ್ಲೆ ಮಾಡಿದ್ದರು. l ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಉಮೇಶ್ ಎಂಬವರನ್ನು ಉಜಿರೆಯ ಎಸ್.ಡಿ.ಎಂ ಆಸ್ಪತ್ರೆಗೆ ಮೊದಲು …

ಬೆಳ್ತಂಗಡಿಯ ಲಾಯಿಲದಲ್ಲಿ ಚೂರಿಯಿಂದ ಇರಿದು ಕೊಲೆ : ಆರೋಪಿಗಳ ಅರೆಸ್ಟ್ Read More »

ಇತಿಹಾಸಕ್ಕೆ ಮುನ್ನುಡಿ ಬರೆದ ಮುರುಳ್ಯ ಪ್ರೋ ಕಬಡ್ಡಿ ಪಂದ್ಯಾಟ.

ಇತಿಹಾಸಕ್ಕೆ ಮುನ್ನುಡಿ ಬರೆದ ಮುರುಳ್ಯ ಪ್ರೋ ಕಬಡ್ಡಿ ಪಂದ್ಯಾಟ… ಹೌದು.. ಒಂದು ಆಟದಂತೆ ಮತ್ತೊಂದಲ್ಲ..ಬದಲಾಗುವ ಆಟಗಳು ವ್ಯತ್ಯಸ್ಥ ತಂಡಗಳು..ಪಂದ್ಯಾಟದ ಆರಂಭದಲ್ಲಿ ವೇದಿಕೆ ಹತ್ತುವ ಮುಂಚಿತವಾಗಿ ಗಣ್ಯ ಅತಿಥಿಗಳು. ಇದು ಸುಳ್ಯ ತಾಲೂಕಿನ ಎಣ್ಮೂರು ಗ್ರಾಮದ ಮುರಳ್ಯದಲ್ಲಿ ನಡೆದ ಕಾರ್ಯಕ್ರಮ. ತಾಯಿ ಭಾರತಾಂಭೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಈ ಮಣ್ಣು ನಿನ್ನದೇ, ಸಮಯ ಕೂಡ ನಿನ್ನದೆ..ಆಟ ಮಾತ್ರ ನಮ್ಮದು, ಈ ಮಣ್ಣಲ್ಲಿ ನೋಯಿಸಬೇಡ ತಾಯಿ ಎಂಬ ನಿಲುವಿನೊಂದಿಗೆ ಪಂದ್ಯಾಟ ವನ್ನು ಉದ್ಘಾಟಿಸಿದರು. ಪಂದ್ಯಾಟ ದಲ್ಲಿ ಬಲಿಷ್ಠ ಅರು …

ಇತಿಹಾಸಕ್ಕೆ ಮುನ್ನುಡಿ ಬರೆದ ಮುರುಳ್ಯ ಪ್ರೋ ಕಬಡ್ಡಿ ಪಂದ್ಯಾಟ. Read More »

ಕಂಬಳವನ್ನು ಪ್ರವಾಸೋದ್ಯಮವಾಗಿ ಬೆಳೆಸಲು ಒತ್ತಾಯ: ಅಶೋಕ್ ರೈ ಕೋಡಿಂಬಾಡಿ

ವಿಜಯ-ವಿಕ್ರಮ ಜೋಡುಕರೆ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆ ಉಪ್ಪಿನಂಗಡಿ: 35ನೇ ವರ್ಷದ ವಿಜಯ- ವಿಕ್ರಮ ಜೋಡುಕರೆ ಕಂಬಳವು ಫೆ.29ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಹಳೆಗೇಟುವಿನ ಬಳಿ ನೇತ್ರಾವತಿ ನದಿ ಕಿನಾರೆಯಲ್ಲಿರುವ ಕಂಬಳ ಕರೆಯ ಬಳಿ ಬಿಡುಗಡೆಗೊಳಿಸಲಾಯಿತು. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ತುಳುನಾಡಿನ ಜನಪದ ಕಲೆ ಕಂಬಳವನ್ನು ಪ್ರವಾಸೋದ್ಯಮವಾಗಿ ಬೆಳೆಸಲು ಸರಕಾರಕ್ಕೆ ಒತ್ತಾಯಿಸಲು ವಿಜಯ- ವಿಕ್ರಮ ಕಂಬಳ ಸಮಿತಿ ನಿರ್ಧರಿಸಿದ್ದು,ಈ ಬಾರಿಯ ಕಂಬಳವನ್ನು ಹಿಂದೆಂದಿಗಿಂತಲೂ ವಿಜೃಂಭಣೆಯಿಂದ …

ಕಂಬಳವನ್ನು ಪ್ರವಾಸೋದ್ಯಮವಾಗಿ ಬೆಳೆಸಲು ಒತ್ತಾಯ: ಅಶೋಕ್ ರೈ ಕೋಡಿಂಬಾಡಿ Read More »

ಖಾರದ ಪುಡಿ ಎರಚಿ ವ್ಯಕ್ತಿಯ ಇರಿದು ಕೊಲೆ

ಕಣ್ಣಿಗೆ ಖಾರದ ಪುಡಿ ಎರಚಿ, ಮಾರಾಕಾಸ್ತ್ರಗಳಿಂದ ಇರಿದು ವ್ಯಕ್ತಿಯೋರ್ವರನ್ನು ಕೊಲೆಗೈದ ಘಟನೆ ಶಿವಮೊಗ್ಗ ಕುವೆಂಪು ಬಡಾವಣೆಯಲ್ಲಿ ನಡೆದಿದೆ. ರವಿವಾರ ರಾತ್ರಿ ಈ ಘಟನೆ ನಡೆದಿದ್ದು, ಶಿವಮೊಗ್ಗದ ಟೈಲ್ಸ್ ನಾಗ (45) ಕೊಲೆಯಾದ ವ್ಯಕ್ತಿ. ದುಷ್ಕರ್ಮಿಗಳು ಹಳೆ ವೈಷಮ್ಯದ ಹಿನ್ನಲೆ ಈ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಟೈಲ್ಸ್ ನಾಗ ಅವರ ಕಣ್ಣಿಗೆ ಖಾರದ ಪುಡಿ ಎರಚಿ, ಬಳಿಕ ಹಲ್ಲೆ ಮಾಡಿ ದುಷ್ಕರ್ಮಿಗಳು ಕೊಲೆಗೈದಿದ್ಧಾರೆ. ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ,ತನಿಖೆ ನಡೆಸುತ್ತಿದ್ದು ದುಷ್ಕರ್ಮಿಗಳ ಪತ್ತೆಗೆ …

ಖಾರದ ಪುಡಿ ಎರಚಿ ವ್ಯಕ್ತಿಯ ಇರಿದು ಕೊಲೆ Read More »

ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಜಾತ್ರೆ: ಬ್ರಹ್ಮರಥೋತ್ಸವ

ಕಡಬ: ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ದರ್ಶನಬಲಿ, ಬಟ್ಟಲು ಕಾಣಿಕೆ ನಡೆಯಿತು. ಬೆಳಿಗ್ಗೆ ನಂದಾದೀಪೋತ್ಸವ, ಬಳಿಕ ಉತ್ಸವ ಆರಂಭಗೊಂಡು ಮಧ್ಯಾಹ್ನ ದರ್ಶನ ಬಲಿ, ಬಟ್ಟಲುಕಾಣಿಕೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ದೇವರ ಬಲಿ ಹೊರಟು ದಂಡತೀರ್ಥದಲ್ಲಿ ಕೆರೆ ಉತ್ಸವ, ದೇವರ ಗುಡ್ಡೆ, ತಾವೂರು ದಾರಿಯ ಕಟ್ಟೆಗಳಲ್ಲಿ ಕಟ್ಟೆಪೂಜೆ ಬಳಿಕ ಶ್ರೀರಾಮ ಸಂದರ್ಶನೋತ್ಸವ ನಡೆದು, ಶಾಲಾ ಕಾಲೇಜು ಬಳಿಯ ಕಟ್ಟೆಪೂಜೆಗಳು, ದೈವಗಳ ಭಂಡಾರ ಹಿಡಿಯುವುದು, ವಸಂತ ಕಟ್ಟೆ ಉತ್ಸವ ನಡೆಯಿತು. ಬಳಿಕ …

ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಜಾತ್ರೆ: ಬ್ರಹ್ಮರಥೋತ್ಸವ Read More »

error: Content is protected !!
Scroll to Top