ಗುರುವಾಯನಕೆರೆ ಮರ್ಡರ್ । ಅಡ್ಡಾದಿಡ್ಡಿ ಮಚ್ಚು ಝಳಪಿಸಿದ ರೌಡಿ ಶೀಟರ್ ನಿಂದ ರಮೇಶ್ ಹತ್ಯೆ !

Share the Article

ಬೆಳ್ತಂಗಡಿ : ಗುರುವಾಯನಕೆರೆಯ ಒಂದು ಕಾಲದ ರೌಡಿ ಶೀಟರ್ ಆಗಿರುವ ಅಣ್ಣು ಎಂಬಾತನಿಂದ ಗರ್ಡಾಡಿಯ ಸುಮಾರು ನಲ್ವತ್ತು ವರ್ಷ ಪ್ರಾಯದ ನಾರಾಯಣ ಯಾನೆ ರಮೇಶ್ ಎಂಬವರ ಕೊಲೆ ನಡೆದಿದೆ.

ಇಂದು ಸಂಜೆ 9.30 ಕ್ಕೆ ಈ ಘಟನೆ ಗುರುವಾಯನಕೆರೆಯ ಪೊಟ್ಟು ಕೆರೆ ಸಮೀಪ ನಡೆದಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ಆರೋಪಿಯು ಶುಕ್ರವಾರ ರಾತ್ರಿ ಮಾರಾಕಾಸ್ತ್ರದಿಂದ ಅಡ್ಡಾದಿಡ್ಡಿ ಮಚ್ಚು ಬೀಸಿದ್ದು, ರಮೇಶ್ ನು ತಪ್ಪಿಸಿಕೊಳ್ಳಲಾಗದೆ ನೆಲಕ್ಕೆ ಬಿದ್ದು ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ.

ಆರೋಪಿಯಾಗಿರುವ ಅನ್ನು ಈ ಹಿಂದೆಯೂ ಹಲವು ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದನು. ಹಿಂದೆ ಒಂದು ಪ್ರಕರಣದಲ್ಲಿ ಆತನನ್ನು ಬೆಳ್ತಂಗಡಿ ತಾಲೂಕಿನಿಂದ ಗಡೀಪಾರು ಕೂಡ ಮಾಡಲಾಗಿತ್ತು. ಈಗ ಮತ್ತೆ ತಾಲೂಕಿಗೆ ಬಂದಿದ್ದು ಈ ಕೊಲೆಯನ್ನು ಮಾಡಿದ್ದನೆನ್ನಲಾಗಿದೆ.

ಹಲವು ಪ್ರಕರಣಗಳಲ್ಲಿ ಶಿಕ್ಷೆಯಾಗಿ, ಇನ್ನು ಅನೇಕ ಪ್ರಕರಣಗಳಲ್ಲಿ ಪೋಲೀಸರ ಅತಿಥಿಯಾಗಿದ್ದ ಅಣ್ಣು ತನ್ನ ಪಾತಕ ಜೀವನವನ್ನು ಮತ್ತೆ ಮುಂದುವರಿಸಿದ್ದಾನೆ.
ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಇದೀಗ ಪಾತಕಿಯನ್ನುಬಂಧಿಸಿದ್ದಾರೆ.

ಕೊಲೆಗೆ ಪೂರ್ವ ವೈಷಮ್ಯವೇ ಕಾರಣ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಪೋಲೀಸರ ತನಿಖೆಯ ನಂತರ ಪೂರ್ತಿ ವಿವರ ದೊರೆಯಲಿದೆ.

ಮೃತನು ರಕ್ತದ ಮಡುವಿನಲ್ಲಿ ಬಿದ್ದಿದ್ದು ಘಟನೆಯು ಹೃದಯ ವಿದ್ರಾವಕವಾಗಿದೆ. ಒಂದು ಕಡೆ ರಕ್ತದ ಕೋಡಿಯೇ ಹರಿದು ಹೋಗಿದೆ.

ಮೃತ ರಮೇಶ್ ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.

ಕಾಂಡೋಮ್ ಗಾಗಿ ಆಕೆಯ ಕೊಲೆ । ಕೊಲೆಗಾರ ಮುಕುಂದೆ ತಿಕೊಂದೆ !!

Leave A Reply

Your email address will not be published.