Big breaking : ಮಂಗಳೂರಿನ ಟೈಮ್ ಬಾಂಬರ್ ಆದಿತ್ಯಾರಾವ್ ಬೆಂಗಳೂರಿನಲ್ಲಿ ಬಂಧನ

Share the Article

ನಿನ್ನೆ ನಾವು ಮೊದಲು ಬ್ರೇಕ್ ಮಾಡಿದ್ದ ಸುದ್ದಿ ಈಗ ಖಚಿತವಾಗಿದೆ. ಮಂಗಳೂರಿನ ಟೈಮ್ ಬಾಂಬರ್ ಮಣಿಪಾಲದ ಕೃಷ್ಣಮೂರ್ತಿಯವರ ಮಗ ಆದಿತ್ಯಾರಾವ್ ಬೆಂಗಳೂರಿನಲ್ಲಿಸ್ವತಃ ಡಿ ಜಿ ಕಚೇರಿಗೆ ತೆರಳಿ ಶರಣಾಗಿದ್ದಾನೆ.

ಆತ ಸೇಡಿಗಾಗಿ ಬಾಂಬ್ ತಯಾರಿಸಲು ಉಗ್ರ ಸಂಘಟನೆಗಳನ್ನುಕೂಡ ಸಂಪರ್ಕಿಸಲು ಮುಂದಾಗಿದ್ದ. ಆದರೆ ಧೈರ್ಯ ಸಾಲದೆ ತಾನೇ ಸ್ವತಃ ಯೂ ಟ್ಯೂಬ್ ನೋಡಿ ಬಾಂಬ್ ತಯಾರಿಕೆ ಕಲಿಯಲು ತೊಡಗಿದ್ದ. ಅದಕ್ಕೆ ಬೇಕಾದ ಎಲ್ಲ ಸಲಕರಣೆಗಳನ್ನು ಆತ ಆನ್ ಲೈನ್ ನಲ್ಲಿ ತರಿಸಿಕೊಂಡಿದ್ದ.
ಇದೆಲ್ಲ ಆತ ಮಾಡಿದ್ದು ಕೇವಲ ಏರ್ ಪೋರ್ಟ್ ಪೋಲೀಸರ ಮೇಲಿನ ಸೇಡಿಗಾಗಿ. ಪೊಲೀಸರಿಂದಾಗಿ ಆತ ಒಂದು ವರ್ಷ ಜೈಲು ಸೇರಬೇಕಾಗಿತ್ತು. ಆ ಸೇಡಿಗಾಗಿ ಆತ ಈ ಕೃತ್ಯವನ್ನು ಎಸಗಿದ್ದಾನೆ.

ಈಗ ವಿಕ್ಟೋರಿಯಾ ಆಸ್ಪತ್ರೆಗೆ ಕರಕೊಂಡು ಹೋಗಿ ವೈದ್ಯಕೀಯ ತಪಾಸಣೆ ಮಾಡುವ ನಿಟ್ಟಿನಲ್ಲಿ ಪೊಲೀಸರು ತೊಡಗಿದ್ದಾರೆ

ಈತ ಈ ಹಿಂದೆ ಕೂಡಾ ಬೆಂಗಳೂರಿನಲ್ಲಿ ಹುಸಿ ಬಾಂಬ್ ಕರೆ ಮಾಡಿ ಪೋಲೀಸರ ಅತಿಥಿಯಾಗಿದ್ದನೆಂದು ತಿಳಿದುಬಂದಿದೆ. ಈಗ ಆದಿತ್ಯನ ತಂದೆ ಮತ್ತು ಕುಟುಂಬಸ್ಥರ ವಿಚಾರಣೆಯು ನಡೆಯುತ್ತಿದ್ದು ಆತನ ತಂದೆ ಮತ್ತು ತಮ್ಮನನ್ನು ವಶಕ್ಕೆ ಪಡೆದಿದ್ದರು.

ಆರೋಪಿಯ ಪತ್ತೆಗಾಗಿ ಒಟ್ಟು 3 ಬಲಿಷ್ಠ ತಂಡಗಳನ್ನು ಹೆಣೆಯಲಾಗಿದೆ ಈ ತಂಡಗಳು ತನಿಖೆಯ ಹಲವು ದಿಕ್ಕಿನೆಡೆಗೆ ಚದುರಿಕೊಂಡು ಆರೋಪಿಯ ಶೀಘ್ರ ಪತ್ತೆಗಾಗಿ ಶತಪ್ರಯತ್ನ ನಡೆಸಿದ್ದರು.

Leave A Reply

Your email address will not be published.