ಆದರ್ಶ ಮೆರೆದ ಬೆಳಾಲು ಸಹಕಾರಿ ಸಂಘ । ಹೊಸಬರಿಗೆ ಜಾಗ ಬಿಟ್ಟುಕೊಟ್ಟ ಗ್ರಾಮಸ್ಥರು । ಲಕ್ಷದವರೆಗೆ ಉಳಿತಾಯ

ಬೆಳಾಲು : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ತನ್ನ ಎಲ್ಲಾ12 ಸ್ಥಾನಗಳಿಗೆ ನಿರ್ದೇಶಕರನ್ನು ಆಯ್ಕೆ ಮಾಡಿಕೊಂಡಿದೆ. ಆದರೆ, ಈ ಬಾರಿ ಚುನಾವಣೆಯಿಲ್ಲದೆ, ‘ಸಹಕಾರ’ ತತ್ವದಡಿ , ಪರಸ್ಪರ ಮಾತುಕತೆಯ ಮೂಲಕ ಪ್ರತಿನಿಧಿಗಳನ್ನು ಆಯ್ಕೆಮಾಡುವ ಮೂಲಕ ಆದರ್ಶ ಮೆರೆದಿದ್ದಾರೆ.
ಇರುವ ಒಟ್ಟು 12 ಸ್ಥಾನಗಳಿಗೆ ಹಲವು ಜನ ಆಕಾಂಕ್ಷಿಗಳು ಇದ್ದರು. ಆದರೆ ಮಾತುಕತೆಯ ಮೂಲಕ ಹಲವು ಹಾಲಿ ನಿರ್ದೇಶಕರುಗಳು ಸ್ಪರ್ಧೆಯಿಂದ ಹಿಂದೆ ಸರಿದರು ಮತ್ತು ಹೊಸಬರಿಗೆ ಜಾಗ ಮಾಡಿಕೊಟ್ಟರು. ಒಟ್ಟು ಐದು ಜನ ಹೊಸಬರಿಗೆ ಸ್ಪರ್ಧೆಯಿಲ್ಲದೆ ನಿರ್ದೇಶರಾಗುವ ಭಾಗ್ಯ ಸಿಕ್ಕಿದೆ.
ಹೊಸ ನಿರ್ದೇಶಕರುಗಳು
ಹಾಲಿ ಅಧ್ಯಕ್ಷ ಎಚ್ ಪದ್ಮ ಗೌಡ
ಹಾಲಿ ಉಪಾಧ್ಯಕ್ಷ ದಿನೇಶ್ ಕೋಟ್ಯಾನ್
ವಿಜಯ ಗೌಡ ಸುರುಳಿ
ಸುರೇಂದ್ರ ಗೌಡ ಸುರುಳಿ
ಸುಲೈಮಾನ್ ಭೀಮಂಡೆ
ಸೀತಮ್ಮ ಕಾಡಂಡ
ಎಲ್ಯಣ್ಣ ನಾಯ್ಕ
ದಾಮೋದರ ಸುರುಳಿ – ಹೊಸ ನಿರ್ದೇಶಕ
ಮಾನಿಗ ಕೊಜನೊಟ್ಟು- ಹೊಸ ನಿರ್ದೇಶಕ
ರಾಜಪ್ಪಗೌಡ ಪುಚ್ಚೆಹಿತ್ಲು- ಹೊಸ ನಿರ್ದೇಶಕ
ರಮೇಶ್ ಗೌಡ ಅಂಗಡಿಬೆಟ್ಟು- ಹೊಸ ನಿರ್ದೇಶಕ
ಸುಜಾತ ಗೋಳಿದಡಿ – ಹೊಸ ನಿರ್ದೇಶಕಿ
ಚುನಾವಣಾ ನಡೆದರೆ, ಬ್ಯಾಲೆಟ್ ಪೇಪರ್, ಚುನಾವಣೆಯ ಮತ್ತಿತರ ಪ್ರಕ್ರಿಯೆಗಳಿಗೆ ಒಟ್ಟು ಸುಮಾರು 75,000 ರೂ. ದಿಂದ 1,00,000 ರೂ. ವರೆಗೆ ಖರ್ಚಾಗುತ್ತಿತ್ತು. ಈಗ ಬೆಳಾಲು ಸಹಕಾರಿ ಬ್ಯಾಂಕ್ ಗೆ ಆ ಹಣ ಉಳಿತಾಯವಾಗಿದೆ.
ಚುನಾವಣಾಧಿಕಾರಿಗಳಾಗಿ ಮುಂಡಾಜೆ ಗ್ರಾಮಪಂಚಾಯತ್ ಕಾರ್ಯದರ್ಶಿ ಸಂಜೀವ ನಾಯ್ಕ ಮತ್ತು ಬೆಳಾಲು ಸೇವಾ ಸಹಕಾರ ಸಂಘದ ಮುಖ್ಯ ನಿರ್ವಹಣಾಧಿಕಾರಿ ನಾರಾಯಣ ಗೌಡ ಎಳ್ಳುಗದ್ದೆ ಮತ್ತು ಇತರ ಸಿಬ್ಬಂದಿವರ್ಗದವರು ಸಹಕಾರ ನೀಡಿದರು.