ನಿರ್ಗಮಿತ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠ೦ದೂರರ ರಿಪೋರ್ಟ್ ಕಾರ್ಡ್

ಹೆಚ್ಚು ವಿವರಣೆಗಳು ಬೇಕಾಗಿಲ್ಲ: ಅಂಕಿ ಅಂಶಗಳು ಮಾತಾಡುತ್ತವೆ !
2016 ರಲ್ಲಿಸಂಜೀವ ಮಠ೦ದೂರರು ಜಿಲ್ಲಾ ಬಿಜೆಪಿಯ ಸಾರಥ್ಯ ವಹಿಸಿಕೊಂಡಾಗ ಜಿಲ್ಲೆಯಲ್ಲಿ ಬಿಜೆಪಿಯ ಪರಿಸ್ಥಿಯು ಪ್ಯಾಥೆಟಿಕ್ ಆಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಟ್ಟು 8 ವಿಧಾನಸಭಾ ಸ್ಥಾನಗಳ ಪೈಕಿ ಆಗ ಬಿಜೆಪಿ ಕೈಯಲ್ಲಿ ಇದ್ದದ್ದು ಕೇವಲ ಒಂದು. ಅದೂ ಸುಳ್ಯದ ಸೋಲನ್ನರಿಯದ ಕ್ಷೇತ್ರದಲ್ಲಿ. ಸುಳ್ಯದಲ್ಲಿ ಕಳೆದ 6 ಬಾರಿ ಎಸ್ ಅಂಗಾರ ಅವರನ್ನು ಆಯ್ಕೆ ಮಾಡುತ್ತಲೇ ಬರುತ್ತಿದೆ ಬಿಜೆಪಿ !

 

ಸುಳ್ಯವನ್ನುಹೊರತುಪಡಿಸಿ, ಜಿಲ್ಲೆಯಲ್ಲಿ ಬೇರೆ ಯಾವುದೇ ಪುರಸಭೆಯಲ್ಲೂ ಬಿಜೆಪಿಯ ಅಧಿಕಾರ ಇರಲಿಲ್ಲ. ಪುತ್ತೂರು, ಬೆಳ್ತಂಗಡಿ, ಮುಲ್ಕಿ, ಬಂಟ್ವಾಳ, ಉಳ್ಳಾಲ ಎಲ್ಲೂ ಬಿಜೆಪಿಯ ಅಧಿಕಾರದ ಸುಳಿವು ಕೂಡ ಇರಲಿಲ್ಲ.

ಮಂಗಳೂರು ಮಹಾನಗರ ಪಾಲಿಕೆಯಲ್ಲಿಯೂ ಬಿಜೆಪಿ ಕೈಚೆಲ್ಲಿ ಕುಳಿತಿತ್ತು. ಅಂತಹ ಸಂದರ್ಭದಲ್ಲಿ ಅಧಿಕಾರ ವಹಿಸಿಕೊಂಡವರು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಸಂಜೀವ ಮಠ೦ದೂರರು !

ಅವರು ಜಿಲ್ಲಾಧ್ಯಕ್ಷರಾಗುವ ಮೊದಲು, ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾಗಿ ಹಲವು ವರ್ಷಗಳಿಂದ ದುಡಿಯುತ್ತಿದ್ದು, ಆಗ ಅವರು ತೋರಿದ ಪಕ್ಷದೆಡೆಗಿನ ನಿಷ್ಠೆ ಮತ್ತು ಸೇವೆಯನ್ನು ಪರಿಗಣಿಸಿ, 2016 ರಲ್ಲಿ ಪಕ್ಷಾಧ್ಯಕ್ಷ ಸ್ಥಾನ ಒದಗಿ ಬಂತು. ಅದನ್ನು ಸಮರ್ಥವಾಗಿ ನಿಭಾಯಿಸಿದ ಮಠ೦ದೂರರು ಜಿಲ್ಲೆಯುದ್ದಕ್ಕೂ ತಿರುಗಾಡಿ, ಸದ್ದುಗದ್ದಲವಿಲ್ಲದೆ ಪಕ್ಷ ಕಟ್ಟುವ ಕಾರ್ಯದಲ್ಲಿ ನಿರತರಾದರು.

ಅವರ ಕಾರ್ಯಾವಧಿಯಲ್ಲೇ, ಮತ್ತೊಮ್ಮೆ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ, ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಅವರನ್ನು 2,74,621 ಮತಗಳ ಬೃಹತ್ ಅಂತರದಿಂದ ಗೆಲ್ಲುವಂತಾಗಿದ್ದು.
ಪುತ್ತೂರು ನಗರಸಭೆಯಲ್ಲಿ 31 ಸೀಟುಗಳಲ್ಲಿ 25 ಸ್ಥಾನ, ಸುಳ್ಯದಲ್ಲಿ 17 ರಲ್ಲಿ 11, ಅಲ್ಲದೆ ಬೆಳ್ತಂಗಡಿ, ಬಂಟ್ವಾಳ, ಮೂಲ್ಕಿ- ಗಳಲ್ಲಿ ಬಿಜೆಪಿ ವಿಜಯಪತಾಕೆ ಹಾರಿಸಿತ್ತು; ಸಹಜವಾಗಿ, ಮುಸ್ಲಿಂ ಡಾಮಿನೇಟೆಡ್ ಉಳ್ಳಾಲವೊಂದನ್ನು ಬಿಟ್ಟು.

ಇಷ್ಟೆಲ್ಲ ಸಕ್ಸಸ್ ಅನ್ನು ಬಗಲಲ್ಲಿಟ್ಟುಕೊಂಡು ಇವತ್ತು ಜಿಲ್ಲಾಧ್ಯಕ್ಷರ ಅಧಿಕಾರವನ್ನು ಹೊಸ ಉತ್ಸಾಹಿ ಯುವಕ ಸುದರ್ಶನ್ ಮೂಡುಬಿದರೆ ಅವರಿಗೆ ಹಸ್ತಾಂತರಿಸಿದ್ದಾರೆ. ನಿರ್ಗಮಿತ ಬಿಜೆಪಿ ಜಿಲ್ಲಾಧ್ಯಕ್ಷರ ಛೋಟಾ ಸಂದರ್ಶನ ಇಲ್ಲಿದೆ.

ಹೊಸಕನ್ನಡ : ನೀವು ಜಿಲ್ಲಾಧ್ಯಕ್ಷರಾಗಿದ್ದಾಗ ನಿಮಗಿದ್ದ ದೊಡ್ಡ ಚಾಲೆಂಜ್ ಏನು, ಅದಕ್ಕೆ ನೀವೇನು ಕಾರ್ಯತಂತ್ರ ಮಾಡಿದಿರಿ ?
ಸಂಜೀವ ಮಠ೦ದೂರು : ನಿಮಗೆ ಗೊತ್ತೇ ಇದೆ, ನಮಗೆ ಸುಳ್ಯದ ಎಂಎಲ್ಎ ಸ್ಥಾನ ಒಂದನ್ನು ಬಿಟ್ಟರೆ, ಬೇರೆಲ್ಲಿಯೂ ನಮ್ಮ ಶಾಸಕರಿರಲಿಲ್ಲ. ಯಾವ ಪುರಸಭೆ, ಪಟ್ಟಣ ಪಂಚಾಯತ್ ಮತ್ತು ಮಂಗಳೂರು ಮಹಾನಗರ ಪಾಲಿಕೆಯಲ್ಲಿಯೂ ನಮ್ಮ ಅಧಿಕಾರವಿರಲಿಲ್ಲ.
ಇನ್ನು, ನನ್ನದು ಏನೇನೂ ವಿಶೇಷವಾದ ಕಾರ್ಯತಂತ್ರವಿರಲಿಲ್ಲ. ನಮ್ಮ ಪಕ್ಷದ ತಳಮಟ್ಟದ ಕಾರ್ಯಕರ್ತರೇ ಬಿಜೆಪಿಯ ಬ್ರಹ್ಮಾಸ್ತ್ರ. ಇದು ಕೇವಲ ನಮ್ಮ ಕಾರ್ಯಕರ್ತರ ಪ್ರಯತ್ನ. ಈ ಗೆಲುವು ಅವರದು. ನಾವು ಕೇವಲ ನಿಮಿತ್ತ. ನಾವು ಎದುರಿಗೆ ಕಾಣಿಸುತ್ತೇವೆ. ಆಳದಲ್ಲಿ ನಿರಂತರವಾಗಿ ಕೆಲಸ ಮಾಡುವವರು ನಮ್ಮ ಕಾರ್ಯಕರ್ತರು.

ಹೊಸಕನ್ನಡ : ಇಷ್ಟುಅಚೀವ್ ಆದ ಮೇಲೆ, ನಿಮಗೆ ಮತ್ತೊಂದು ಅವಧಿಗೆ ಮುಂದುವರಿಯುವ ಬಯಕೆ ಇರಲಿಲ್ಲವೇ ?
ಸಂಜೀವ ಮಠ೦ದೂರು : ನಾನೀಗ ಪುತ್ತೂರಿನ ಶಾಸಕ. ನನ್ನ ಕ್ಷೇತ್ರದ ಬಗ್ಗೆ ಇನ್ನಷ್ಟು ಸಮಯ ಕಳೆಯುವುದು ಇವತ್ತಿನ ಅಗತ್ಯ. ಅಲ್ಲದೆ ಬಿಜೆಪಿಯಲ್ಲಿ ಹಲವು ಸಮರ್ಥ ನಾಯಕರುಗಳಿದ್ದಾರೆ. ಅದೇ ಕಾರಣಕ್ಕೆ, ಯುವಕರಾದ ಶ್ರೀ ಸುದರ್ಶನ ಮೂಡಬಿದರೆಯವರು ಇವತ್ತು ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿರುವುದು.

ಹೊಸಕನ್ನಡ : ನಿಮ್ಮ ವಯಸ್ಸು ಮತ್ತೊಂದು ಅವಧಿಗೆ ಅಡ್ಡಿಆಯಿತೇ ?
ಸಂಜೀವ ಮಠ೦ದೂರು : ಇಲ್ಲ, ವಯಸ್ಸಿನ ಮಿತಿ ಅದಕ್ಕೆಕಾರಣವಲ್ಲ. ಹೊಸಬರಿಗೆ ಅವಕಾಶ ಯಾವತ್ತೂ ಸಿಗಬೇಕು. ಅದೇ ಬಿಜೆಪಿಯ ಸ್ಪೆಷಾಲಿಟಿ.

Leave A Reply

Your email address will not be published.