ಏನಾಗಲಿದೆ ಶಬರಿಮಲೆ ? : ಮಹಿಳೆಯರಿಗೆ ಪ್ರವೇಶ ನಿಷೇಧದ ಕುರಿತ ವಿಚಾರಣೆ ಇಂದು

ಶಬರಿಮಲೆ: ದಕ್ಷಿಣ ಭಾರತದ ಪುರಾಣ ಪ್ರಸಿದ್ದ ಕ್ಷೇತ್ರ ಶಬರಿಮಲೆಗೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತಾಗಿ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನ ಒಂಬತ್ತು ಸದಸ್ಯರ ಪೀಠದ ಮುಂದೆ ಬರಲಿದೆ.

ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಮರು ಪರಿಶೀಲಿಸುವಂತೆ ಸುಮಾರು 60 ಅರ್ಜಿಗಳು ಸಲ್ಲಿಕೆಯಾಗಿವೆ.

2019 ರ ನವೆಂಬರ್ 14ರಂದು ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಆಗಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಐದು ಸದಸ್ಯರ ಪೀಠ, ಇದನ್ನು ಒಂಬತ್ತು ಸದಸ್ಯರ ಪೀಠಕ್ಕೆ ವರ್ಗಾಯಿಸಿತ್ತು.

ಸದ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೋಬ್ಡೆ ನೇತೃತ್ವದ 9 ಮಂದಿ ಸದಸ್ಯರ ಪೀಠ ಮರು ಪರಿಶೀಲನಾ ಅರ್ಜಿ ವಿಚಾರಣೆ ನಡೆಸಲಿದೆ.

ನ್ಯಾ. ಆರ್​ ಭಾನುಮತಿ, ನ್ಯಾ. ಅಶೋಕ್​ ಭೂಷಣ್​, ನ್ಯಾ. ನಾಗೇಶ್ವರ್​ ರಾವ್​, ನ್ಯಾ. ಎಂ.ಎಂ. ಶಾಂತಗೌಡರ್​, ನ್ಯಾ. ಎಸ್​.ಎ ನಜೀರ್​, ನ್ಯಾ. ಆರ್​. ಸುಭಾಶ್​ ರೆಡ್ಡಿ, ನ್ಯಾ. ಬಿ.ಆರ್​. ಗವೈ ಮತ್ತು ನ್ಯಾ. ಸೂರ್ಯ ಕಾಂತ್​ ರನ್ನು ಒಳಗೊಂಡ ಪೀಠ ಈ ಅರ್ಜಿ ವಿಚಾರಣೆ ನಡೆಸಲಾಗಿದೆ.

Leave A Reply