ಆಯಾಸ ಪಟ್ಟು ಗೆದ್ದುಕೊಂಡದ್ದನ್ನು ನಿರಾಯಾಸವಾಗಿ ಕಳೆದುಕೊಳ್ಳುತ್ತಿರುವ ಬಿಜೆಪಿ
ಅನರ್ಹಗೊಂಡ ಶಾಸಕರುಗಳು ಗೆದ್ದು ಹೆಚ್ಚುಕಮ್ಮಿ ತಿಂಗಳುಗಳೆ ಕಳೆದುಹೋದವು. ಇನ್ನೂ ಕರ್ನಾಟಕದ ಮಂತ್ರಿಮಂಡಲ ವಿಸ್ತರಣೆ ಚಟುವಟಿಕೆಯು ಒಂದು ಖಚಿತ ರೂಪು ಪಡೆದುಕೊಳ್ಳುತ್ತಿಲ್ಲ. ಮಧ್ಯೆ ಒಂದಷ್ಟು ದಿನ ಸಿಎಎ ಗದ್ದಲ ಉಂಟಾಗಿ ಗೋಲಿಬಾರ್ ಆಗಿ ರಾಜ್ಯದಲ್ಲಿ ಮತ್ತೊಂದಷ್ಟು ವಿದ್ಯಮಾನಗಳು ನಡೆದು ಸಂಪುಟ ವಿಸ್ತರಣೆ ಮುಂದೂಡಲಾಯಿತು ಅಂದುಕೊಳ್ಳೋಣ. ಮತ್ತೆ ಎಲ್ಲಾ ತಣ್ಣಗಾದ ಮೇಲೆ ಇನ್ನೇನು ಪ್ರಾಬ್ಲಮ್ಮು?
ಸಂಪುಟ ವಿಸ್ತರಣೆಯ ಪೂರ್ತಿ ಅಧಿಕಾರವನ್ನು ಮುಖ್ಯಮಂತ್ರಿ ಬಿಎಸ್ವೈ ಅವರಿಗೆ ಕೊಟ್ಟಿದ್ದರೆ, ಅವರು ಮಂತ್ರಿಮಂಡಲ ವಿಸ್ತರಣೆ ಮಾಡಿ ಒಂದು ತಿಂಗಳೇ ಕಳೆದಿರುತ್ತಿತ್ತು!
ಇದೀಗ ಬಿಎಸ್ವೈ ಅವರ ದೆಹಲಿಯ ಭೇಟಿ ನೀಡಿ ರದ್ದಾಗಿದೆ.
ಬಿಜೆಪಿಯ ಕೇಂದ್ರ ನಾಯಕರುಗಳ ಮೇಲೆ ಅತೃಪ್ತ ಶಾಸಕರುಗಳು ಉರಿದು ಬೀಳುತ್ತಿದ್ದಾರೆ. ರಾಜ್ಯದ ಮೂಲ ಬಿಜೆಪಿ ನಾಯಕರುಗಳೂ ಮುನಿಸಿಕೊಂಡಿದ್ದಾರೆ. ಆದರೆ ಅವೆಲ್ಲಕ್ಕೂ ಅಷ್ಟು ಪ್ರಾಮುಖ್ಯತೆ ಇಲ್ಲ.
ಜನ ಸಾಮಾನ್ಯ ಈ ಸಂಪುಟ ವಿಸ್ತರಣೆಯ ನಾಟಕದ ಬಗ್ಗೆ ಏನಂತಾರೆ? ನಿಮಗೂ ಸಂಪುಟ ವಿಸ್ತರಣೆಯು ದಿನದಿಂದ ದಿನಕ್ಕೆ ಮುಂದೆ ಹೋಗುತ್ತಿದೆ ಅನ್ನಿಸುತ್ತಿಲ್ಲವೆ ?
ಅಧಿಕಾರದಲ್ಲಿರುವವರಿಗೆ ಕೆಪ್ಪ ಕಿವಿ, ಕುರುಡು ಕಣ್ಣು. ಸೆಂಟ್ರಲ್ ಬಿಜೆಪಿ ನಾಯಕರುಗಳ ಅಹಂಕಾರದ ಫಲವನ್ನು ಅವರೇ ಅನುಭವಿಸುತ್ತಾರೆ.
ಇದನ್ನು ನೀವು ಓದಲೇ ಬೇಕು : ಕೇಂದ್ರ ಬಿಜೆಪಿ ನಾಯಕರ ಅಹಂಕಾರಕ್ಕೆ ಮತದಾರನ ಮದ್ದು