ಸರ್ವೇ ಜನಾಃ ಸುಖಿನೋ ಭವಂತು । ಸರ್ವೆ ಷಣ್ಮುಖ ಯುವಕ ಮಂಡಲದಿಂದ ಜಲಧಾತರಿಗೆ ಗೌರವ

0 15

ಸವಣೂರು : “ನೀರಿಂಗಿಸೋಣ ಬನ್ನಿ” ಎನ್ನುವ ಕಾರ್ಯಕ್ರಮದ ಮೂಲಕ ಸರ್ವೆ ಗ್ರಾಮದಲ್ಲಿ ಅಂತರ್ಜಲ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ  ಪದಾಧಿಕಾರಿಗಳು  ಸರ್ವೆ ಗ್ರಾಮದ ಶ್ರೀ ಸುಬ್ರಾಯ ದೇವಸ್ಥಾನದ ಬಳಿ ಯುವಕ ಮಂಡಲದ ಕಾರ್ಯಕಾರಿ ಸಮಿತಿ ಸದಸ್ಯರಾದ ವಿನಯ್ ಕುಮಾರ್ ರೈ ಸರ್ವೆ ಅವರು  ತಮ್ಮ ಜಮೀನಿನಲ್ಲಿ ನಿರ್ಮಿಸಲಾಗಿರುವ ಕಿಂಡಿ ಆಣೆಕಟ್ಟೆಗೆ  ಹಲಗೆಗಳನ್ನು ಅಳವಡಿಸುವಾಗ  ಭೇಟಿ ನೀಡಿ  ಅವರನ್ನು ಶಾಲು  ಹಾಕಿ ಗೌರವಿಸಿದರು. 

ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾದ ಸುಬ್ರಮಣ್ಯ ಕರಂಬಾರು ವಿನಯ್ ಕುಮಾರ್ ಅವರನ್ನು ಗೌರವಿಸಿ ಮಾತನಾಡಿ ವಿನಯ್ ಕುಮಾರ್ ರೈ ಅವರು ಪ್ರತಿ ವರ್ಷ ಕಿಂಡಿ ಅಣೆಕಟ್ಟೆಗೆ ಹಲಗೆಗಳನ್ನು ಅಳವಡಿಸಿ ಅಂತರ್ಜಲ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಾದರಿ ವ್ಯಕ್ತಿ, ಅಂತವರನ್ನು ಗುರುತಿಸುವ ಕೆಲಸ ಗ್ರಾಮದ ಜನರು  ಮಾಡಿದಾಗ ಗ್ರಾಮದಲ್ಲಿ  ಉತ್ತಮ ಕಾರ್ಯಗಳಿಗೆ ಪ್ರೇರಣೆ ನೀಡಿದಂತಾಗುತ್ತದೆ  ಎಂದರು. 

ರತ್ನಾವತಿ ರೈ ಸರ್ವೆ, ಯುವಕ ಮಂಡಲದ ಅಧ್ಯಕ್ಷರಾದ ಕಮಲೇಶ್ ಸರ್ವೆದೋಳಗುತ್ತು, ಕೋಶಾಧಿಕಾರಿ ನಾಗೇಶ್ ಪಟ್ಟೆಮಜಲು, ಆದಿಮೊಗೇರ್ಕಳ ಗರಡಿ ಕಲ್ಪಣೆಯ ಅಧ್ಯಕ್ಷರಾದ ಕರಿಯ ಕೆ ಎಸ್, ಪುರಂದರ ನಾಯ್ಕ್, ಬಾಲಕೃಷ್ಣ, ಗೋಪಾಲ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.

Leave A Reply