ಬೆಳ್ತಂಗಡಿಯಲ್ಲಿ ಅರಣ್ಯ ಹಕ್ಕು ಸಮಿತಿ ಸಭೆ | ಕುಂದು ಕೊರತೆ ಆಲಿಸಿದ ಶಾಸಕರು | 7 ಫಲಾನುಭವಿಗಳಿಗೆ 88 ಲಕ್ಷ ರೂ. ಪರಿಹಾರ ವಿತರಣೆ
ಬೆಳ್ತಂಗಡಿ : ಪಾರಂಪರಿಕವಾಗಿ ಅರಣ್ಯದಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹಾಗೂ ಅವರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್ ಸಂಪರ್ಕಕ್ಕೆ ಪ್ರಥಮ ಆದ್ಯತೆಯನ್ನು ನೀಡಲಾಗುತ್ತಿದ್ದು ಕಾನೂನಿನ ಅಡೆತಡೆ ನಿವಾರಣೆಗಾಗಿ ಸಂಬಂದಪಟ್ಟ ಇಲಾಖಾ ಸಚಿವರೊಂದಿಗೆ ಸಮಾಲೋಚಿಸಿ ಇಲಾಖೆಗಳು ಪರಸ್ಪರ ಗೂಬೆಕೂರಿಸಿಕೊಂಡು ಅರಣ್ಯವಾಸಿಗಳಿಗೆ ಅನ್ಯಾಯವಾಗದಿರಲಿ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು. ಬೆಳ್ತಂಗಡಿ ತಾ.ಪಂ ಸಭಾಭವನದಲ್ಲಿ ಬುಧವಾರ ಅನುಸೂಚಿತ ಬುಡಕಟ್ಟುಗಳ ಹಾಗೂ ಇತರೆ ಅರಣ್ಯವಾಸಿಗಳ ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ ಅಧಿನಿಯಮ -2006 ಮತ್ತುನಿಯಮ – 2008ರಲ್ಲಿ ನಡೆಯುವ ಅರಣ್ಯ ಹಕ್ಕು …