ಇರಾನ್- ಅಮೇರಿಕಾ ಸಂಘರ್ಷ ತೀವ್ರ । ಗಲ್ಫ್ ನಲ್ಲಿರುವ ನಮ್ಮವರು ಏನು ಮಾಡಬೇಕು ?

ನಿನ್ನೆ ರಾತ್ರಿ ಇರಾಕ್ ನ ಅಮೆರಿಕಾದ ಸೇನಾ ನೆಲೆಗಳ ಮೇಲೆ ನಡೆದ ಅಮೆರಿಕಾದ ಒಂದು ಕಾಲದ ಮಿತ್ರ ಇರಾನ್ ನ ಕ್ಷಿಪಣಿ ದಾಳಿಗಳಿಗೆ ಅಮೆರಿಕಾದ 80 ಜನ ಸೈನಿಕರು ಹತರಾಗಿದ್ದಾರೆ.

ಇರಾನ್ ನ ಮೇಜರ್ ಜನರಲ್ ಸುಲೇಮನಿಯ ಹತ್ಯೆಗೆ ಒಂದು ತಕ್ಷಣದ ರಿವೇಂಜ್ ತೆಗೆದುಕೊಂಡಿದೆ ಇರಾನ್. ಅಲ್ಲದೆ ಇರಾನ್ ನಲ್ಲಿ ರೆಡ್ ಫ್ಲಾಗ್ ಅನ್ನು ಮೇಲೇರಿಸುವ ಮೂಲಕ ತುರ್ತುಪರಿಸ್ಥಿತಿಯನ್ನು ಘೋಷಿಸಿದೆ. ಪ್ರತೀಕಾರ ತೀರಿಸಿಯೇ ಸಿದ್ದ ಎಂದು ಇರಾನ್ ಶಪಥ ಮಾಡಿದೆ. ಯುದ್ಧ ಕಟ್ಟುವ ಎಲ್ಲ ಲಕ್ಷಣಗಳೂ ಇವೆ. ಪ್ರಪಂಚದ ಭೂಪಟದ ತುಂಬಾ ದ್ವೇಷ ಅಸಹನೆಗಳ ಕಾರ್ಮೋಡ.

ಯುದ್ಧ ಅಂದ ಕೂಡಲೇ ಅದು ಕೇವಲ ಅಮೇರಿಕ ಮತ್ತು ಇರಾನ್ ದೇಶಗಳ ಮಧ್ಯೆ ಮಾತ್ರ ನಡೆಯುವ ಸಂಭವವಿಲ್ಲ. ಈಗಾಗಲೇ ಇರಾನ್ ಅನ್ನು ಇರಾಕ್ ಬೆಂಬಲಿಸಿದೆ. ಅಮೇರಿಕವು ತನ್ನ ಸೇನಾ ನೆಲೆಯನ್ನು ಬಿಟ್ಟು ಹೋಗುವಂತೆ ಇರಾಕ್ ತಾಕೀತು ಮಾಡಿದೆ. ಅಲ್ಲದೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರ೦ಪ್ ತಲೆಗೆ 575 ಕೋಟಿ ರೂಪಾಯಿ ಘೋಷಿಸಿದೆ.

ಅತ್ತ ಅಮೆರಿಕಾದ ಸಾರ್ವಕಾಲಿಕ ದೋಸ್ತ್ ಇಂಗ್ಲೆಂಡ್ ಅಮೆರಿಕಾಕ್ಕೆ ಬೆಂಬಲ ಘೋಷಿಸಿದೆ. ಇದೆ ರೀತಿ ಮುಂದುವರೆದರೆ ಮತ್ತಷ್ಟು ದೇಶಗಳು ಎರಡೂ ಕಡೆ ಸೇರಿಕೊಂಡು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವ ಸನ್ನಿವೇಶ ಇಂದು ಭೂಪಟದಲ್ಲಿ ಎದ್ದು ಕಾಣುತ್ತಿದೆ.

ಚೈನಾ ಮತ್ತು ಕೆಲವು ಮುಸ್ಲಿಂ ರಾಷ್ಟ್ರಗಳು ಇರಾನ್ ನ ಬೆನ್ನಿಗೆ ನಿಂತರೆ ಅಚ್ಚರಿಯಿಲ್ಲ. ನಮ್ಮ ದಕ್ಷಿಣಕನ್ನಡದ ಮಂದಿ ಅನ್ನಅರಸಿಕೊಂಡು ದೂರದ ಗಲ್ಫ್ ರಾಷ್ಟ್ರಗಳಿಗೆ ಹೋಗುವುದು ಇಂದು ನಿನ್ನೆಯದಲ್ಲ. ಇವತ್ತಿಗೂ ಲಕ್ಷಾಂತರ ಸಂಸಾರಗಳು ಗಲ್ಫ್ ಗೆ ತೆರಳಿವೆ. ತೈಲ ಮತ್ತು ತೈಲಾಧಾರಿತ ವ್ಯವಸ್ಥೆಯಿಂದ ಬದುಕು ಕಟ್ಟಿಕೊಳ್ಳಲು, ಮನೆ ಮಂದಿಯನ್ನು, ಇಲ್ಲಿ ನಡೆಯುವ ಹಬ್ಬ ಹರಿದಿನಗಳನ್ನೂ ಬಿಟ್ಟು ಹೊರಗಡೆ ದುಡಿಯುತ್ತಿರುವವರ ಕುಟುಂಬದಲ್ಲಿ ನಡುಕ ಪ್ರಾರಂಭವಾಗಿದೆ.

ಅಮೆರಿಕಾಕ್ಕೂ ಇರಾನಿಗೂ 7150 ಕಿಲೋಮೀಟರಿಗೂ ಅಧಿಕ ದೂರವಿದೆ. ಆದರೆ ಗಲ್ಫ್ ರಾಷ್ಟ್ರಗಳೆಲ್ಲ ಹತ್ತಿರ ಹತ್ತಿರ ಒಂದರ ಪಕ್ಕ ಒಂದು ಹರಡಿಕೊಂಡಂತಿವೆ. ಅವು ಸುಮಾರು 1500 ಕಿಲೋಮೀಟರು ಗಳ ರೇಡಿಯಸ್ ನ ಒಳಗೆ ಇರುವಂತಹುಗಳು.

ಗಲ್ಫ್ ರಾಷ್ರಗಳಲ್ಲೇ ಕುವೈತ್ ಸೌದಿ ಮುಂತಾದ ರಾಷ್ಟ್ರಗಳು ಅಮೆರಿಕಾದ ಮಿತೃತ್ವವುಳ್ಳ ರಾಷ್ಟ್ರಗಳು. ಆದ್ದರಿಂದ ಅಷ್ಟು ದೂರದ ಅಮೇರಿಕಾವನ್ನು ರೀಚ್ ಆಗುವುದು ಇರಾನ್ ಗೆ ಅಷ್ಟು ಸುಲಭವಲ್ಲ. ಹಾಗಾಗಿ ಪಕ್ಕದ ಅಮೆರಿಕಾದ ಮಿತ್ರ ರಾಷ್ಟ್ರಗಳು ಇರಾನ್ ನ ತಕ್ಷಣದ ಟಾರ್ಗೆಟ್ ಆದರೂ ಅಚ್ಚರಿಯಿಲ್ಲ. ಹಿಂದೆ ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯ ಮೇಲೆ ಅಣುಬಾಂಬು ಬೀಳಲಿಲ್ಲ: ಬಿದ್ದದ್ದು ಮಿತ್ರರಾಷ್ಟ್ರ ಜಪಾನಿನ ಮೇಲೆ ! ನಮ್ಮ ಭಾರತದಲ್ಲಿರುವ, ಈಗ ಗಲ್ಫ್ ನಲ್ಲಿರುವ ಜನರು ತಮ್ಮ ಸುರಕ್ಷತೆಯನ್ನು ನೋಡಿಕೊಳ್ಳಬೇಕು.

ಯುದ್ಧಕಾಲೇ – ಇವೆಲ್ಲ ಬೇಡ !

  • ತಕ್ಷಣಕ್ಕೆ ಯಾರು ಕೂಡ ಗಲ್ಫ್ ರಾಷ್ಟ್ರಗಳಿಗೆ ತೆರಳುವುದು ಬೇಡ.
  • ಗಲ್ಫ್ ನಲ್ಲಿರುವ ತನ್ನ ಕುಟುಂಬಸ್ಥರನ್ನುಈ ಕೂಡಲೇ ವಾಪಾಸ್ ಕರೆಸಿಕೊಳ್ಳುವು ಸೂಕ್ತ
  • ಸಾಧ್ಯವಾದರೆ, ಪರಿಸ್ಥಿತಿ ನೋಡಿಕೊಂಡು ಭಾರತದತ್ತ ಮುಖ ಮಾಡುವುದು ಒಳ್ಳೆಯದು.
  • ಚಿನ್ನದ ಬೆಲೆ ಗಗನಕ್ಕೇರಿರುವ ಈಗ ಯಾವುದೇ ಚಿನ್ನದ ಹೂಡಿಕೆ ಬೇಡ. ಮದುವೆ ಮುಂತಾದ ಸಮಾರಂಭಗಳಿಗೆ ಈಗಲೇ ಮಿನಿಮಮ್ ಚಿನ್ನವನ್ನುಕೊಂಡಿಟ್ಟುಕೊಳ್ಳಿ.
  • ಶೇರು ಮಾರುಕಟ್ಟೆಯಲ್ಲಿ ಹೊಸ ಯಾವುದೇ ಹೂಡಿಕೆ ಬೇಡವೇ ಬೇಡ.
  • ಒಂದು ವೇಳೆ ನೀವು ಈಗಾಗಲೇ ಶೇರಿನಲ್ಲಿ ಹೂಡಿಕೆ ಮಾಡಿದ್ದರೆ, ಮತ್ತು ಆ ಹೂಡಿಕೆ ಒಂದೆರಡು ವರ್ಷದ ಮಟ್ಟಿಗೆ ಮಾಡಿದ್ದಾದರೆ ನೀವು ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಈಗಾಗಲೇ ಹೂಡಿಕೆಯಲ್ಲಿ ಲಾಭವಿದ್ದರೆ ಮಾರಿಬಿಟ್ಟು ಹೊರಗಡೆ ಬನ್ನಿ. ಕಾಸ್ಟ್ ಟು ಕಾಸ್ಟ್ ಕೂಡ ಎಕ್ಸಿಟ್ ಆಗುವುದು ಸೂಕ್ತ.
  • ಲಾಂಗ್ ಟರ್ಮ್ ಹೂಡಿಕೆಯವರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ( 6 -10 ವರ್ಷದ ಹೂಡಿಕೆ ). ಆದರೂ ‘ Buy ‘ ಯಲ್ಲಿಇಲ್ಲದೆ ಇರೋದು ಒಳ್ಳೆಯದಲ್ಲ. ಎಲ್ಲ ಮಾರಿ ಕ್ಯಾಶ್ ನಲ್ಲಿಟ್ಟು ಕಾಯುವುದು ಸೂಕ್ತ.
  • ಫ್ಯುಚರ್ ಅಂಡ್ ಆಪ್ಷನ್ ಟ್ರೇಡರುಗಳು ಜಾಗ್ರತರಾಗಿರಬೇಕು. ತಪ್ಪಿದರೆ, ಹಾಕಿಕೊಳ್ಳಲು ಚಡ್ಡಿ ಕೂಡ ಇಲ್ಲದಂತೆ ವಾಶ್ ಔಟ್ ಆಗುತ್ತಾರೆ.

Leave A Reply

Your email address will not be published.