ಎರಡು ಅಮಾಯಕ (?) ಹೆಣ ಹಾಕಿದ ಮೇಲೆ ಥಂಡಾ ಆದ ಯು ಟಿ ಖಾದರ್ । ಮುಸ್ಲಿಮರ ಸಾವಿಗೆ ಖಾದರ್ ಜವಾಬ್ದಾರಿ !

0 142

ಶಾಂತಿ ಮೂಡುವುದು ಹಿಂಸೆಯ ನಂತರ ಎಂಬ ಮಾತಿದೆ. ದಕ್ಷಿಣ ಕನ್ನಡದ ಮಟ್ಟಿಗೆ ಮತ್ತೊಮ್ಮೆ ಅದು ಪ್ರೂವ್ ಆಗುವಂತಿದೆ.

ಅವತ್ತು ಯು ಟಿ ಖಾದರ್ ನ ಒಂದು ಹೇಳಿಕೆ, ಇವತ್ತು ಎಂದು ಎರಡು ಅಮಾಯಕ (?) ಜೀವಗಳನ್ನು ಬಲಿ ತೆಗೆದುಕೊಂಡಿದೆ. 23 ವಯಸ್ಸಿನ ನೌಶೀಕ್ ಕುದ್ರೋಳಿ, ಮತ್ತೊಬ್ಬ 49 ವಯಸ್ಸಿನ ಜಲೀಲ್ ಎಂಬ ಮುಸ್ಲಿಂ ಯುವಕರು ಪೋಲೀಸರ ಗುಂಡಿಗೆ ಬಲಿಯಾಗಿದ್ದಾರೆ.

ಪೋಲೀಸರ ಮೇಲೆ ದೌರ್ಜನ್ಯ ಮಾಡಲು ಹೋಗಿ ಮತ್ತು ಒಂದು ಹಂತದಲ್ಲಿ ಪೊಲೀಸು ಠಾಣೆಯನ್ನೇ ವಶಪಡಿಸಿಕೊಳ್ಳಲು ಪ್ರಯತ್ನ ನಡೆಸಿದ ಕಾರಣಕ್ಕ, ಪರಿಸ್ಥಿತಿ ಮತ್ತೆ ನಿಯಂತ್ರಿಸಲಾರದೆ ಗುಂಡು ಹಾರಿಸಿದ್ದಾರೆ. ನೆಲ್ಲಿಕಾಯಿ ರಸ್ತೆಯಲ್ಲಿ ಎರಡು ಜೀವಗಳು ಚದುರಿದ ನೆಲ್ಲಿಕಾಯಿಯಂತೆ ಮಕಾಡೆ ಮಲಗಿವೆ.

” ದೇಶವು ಹೊತ್ತು ಉರಿಯುತ್ತಿದೆ. ಆದರೆ ಕರ್ನಾಟಕವು ಶಾಂತಿಯ ದ್ವೀಪವಾಗಿದೆ. ಕರ್ನಾಟಕದಲ್ಲಿ ಈ ಕಾನೂನನ್ನು ಕಾರ್ಯಗತಗೊಳಿಸಲು ಅವರು ಸೂಚನೆಗಳನ್ನು ನೀಡಿದ್ದಾರೆ ಎಂದು ನಾನು ಸಾಮಾಜಿಕ ಮಾಧ್ಯಮದಲ್ಲಿ ಓದಿದ್ದೇನೆ. ನೀವು ಅದನ್ನು ಇಲ್ಲಿ (ಸಿಎಎ) ಕಾರ್ಯಗತಗೊಳಿಸಿದರೆ ಕರ್ನಾಟಕ ಹೊತ್ತಿ ಉರಿಯಲಿದೆ, ಸ್ಪೋಟಗೊಳ್ಳಲಿದೆ ಎಂದು ನಾನು ಪ್ರತಿಜ್ಞೆ ಮಾಡುತ್ತೇನೆ.” – ಯು ಟಿ ಖಾದರ್.

ಹೀಗೆ ಹಿಂಸೆಯ ಪ್ರಚೋದನೆ ನೀಡಿದ ಯು ಟಿ ಖಾದರ್ ಹಿಂಸೆಗೆ ನೇರ ಕಾರಣ. ಮುಸ್ಲಿಮರ ಸಾವಿನಿಂದ ರಾಜಕೀಯ ಮಾಡಲು ಹೊರಟಿದ್ದಾರೆ ಯು ಟಿ ಖಾದರ್.

ಪೌರತ್ವ ಮಸೂದೆ ಕೇಂದ್ರದಿಂದ ಮಂಡನೆಯಾಗಿ, ಈಗ ಅದರ ಬಗ್ಗೆ ಪ್ರತಿಭಟನೆ ತೀವ್ರ ರಾಜಕೀಯ ರೂಪ ಪಡೆದುಕೊಂಡಿದೆ. ಮೂಲತ: ಒಳ್ಳೆಯ ಹೆಸರಿರುವ ಯು ಟಿ ಖಾದರ್ ರ ವ್ಯಕ್ತಿತ್ವಕ್ಕೆ ಇದೊಂದು ಅಳಿಸಲಾರದ ಕಪ್ಪು ಮಸಿ ! .

” ಪೌರತ್ವ ಮಸೂದೆಯಿಂದ ಭಾರತದ ಮುಸ್ಲಿಮರಿಗೆ ಸಮಸ್ಯೆಯಿಲ್ಲ ” ಎಂದು ಸಾರಿ ಸಾರಿ ಬಿಜೆಪಿ ಮತ್ತು ಎಲ್ಲ ಭಾರತದ ಮಾಧ್ಯಮಗಳು ಒತ್ತಿ ಒತ್ತಿ ಹೇಳಿದೆ. ಆದರೂ ಮಂಗಳೂರಿನಲ್ಲಿ ಮತ್ತು ದೇಶದಲ್ಲಿ ಮುಸ್ಲಿಮರು ಮತ್ತು ಕಾಂಗ್ರೆಸ್ ಹಿಂಸಾತ್ಮಕ ಪ್ರತಿಭಟನೆಗಿಳಿದಿವೆ.

ನಿನ್ನೆ ಮಂಗಳೂರಿನಲ್ಲಿ ಮಾಧ್ಯಮಗಳು ಪ್ರತಿಭಟಿಸುವವರನ್ನು ಮಾತಾಡಿಸಿದರು. ಯಾಕೆ ನೀವೆಲ್ಲ ಪ್ರತಿಭಟಿಸಕ್ಕೆ ಬಂದಿದ್ದೀರಿ ಅಂದದಕ್ಕೆ ಒಬ್ಬಾತ ” ನಾವು ಮುಸ್ಲಿಂಸು ಇದ್ದೀವಲ್ಲ, ನಮ್ದುಕೆ ಇಂಡಿಯಾದಿಂದ ಕಳುಸ್ತಾರಂತೆ ಸಾಬು ” ಅಂತ ಒಬ್ಬಾತ ಹೇಳಿದ್ದ.

ಇನ್ನೊಬ್ಬಾತ ” ಅದು ಜಿಎಸ್ ಟಿ ಮಾಡಿದ್ದಾರೆ. ಅದಕ್ಕೆ ನಾವೆಲ್ಲಾ ಬಂದ್ವಿ ” ಅಂದಿದ್ದಾನೆ.

ಮತ್ತೊಬ್ಬಾತ ” ಎಲ್ರು ಬಂದಿದ್ದಾರೆ. ಉಸ್ಕೊ ಸಾಥ್ ದೇನೇ ಕೇಲಿಯೇ ಮೇ ಆಯಾ ರೇ ” ಅಂದಿದ್ದಾನೆ.

ಎಂತ ಅಮಾಯಕತೆ !

ರಾಜಕೀಯವಾಗಿ ಎನ್ಕ್ಯಾಶ್ ಮಾಡಲು ಹೊರಟ ಯು ಟಿ ಖಾದರ್ ಈಗ ಬಾವಿಗೆ ಬಿದ್ದ ಕೋಳಿ ಥರ ಆಗಿದ್ದಾರೆ. ಹಿಂದುತ್ವದ ಮತಗಳು ಮಂಗಳೂರಿನಲ್ಲಿ ಮತ್ತಷ್ಟು ಪೋಲರೈಸ್ ಆಗುತ್ತಿವೆ.

ಸತ್ತು ಹೋದ ಮುಸ್ಲಿಂ ಕುಟುಂಬಕ್ಕೆ ಖಾದರ್ ಮತ್ತೆ ಆ ಜೀವಗಳನ್ನು ವಾಪಸ್ ತಂದು ಕೊಡುತ್ತಾರ ?

Leave A Reply