ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯ ಕುಶಲೋಪರಿ । ಆಸ್ಪತ್ರೆಯಲ್ಲಿ ಮತ್ತೆ ಹಳೆಯ ದಿನಕ್ಕೆ ಮರಳಿದ ಗುರು ಶಿಷ್ಯರು

Share the Article

ರಮೇಶ್ ಜಾರಕಿಹೊಳಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಸೇರಿದ ಸಿದ್ದರಾಮಯ್ಯರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ತಮ್ಮ ಮಾತು ಮೀರಿ ಕಾಂಗ್ರೆಸ್ಸ್ ಬಿಟ್ಟು ಬಿಜೆಪಿ ಸೇರಿದ ರಮೇಶ್ ಜಾರಕಿಹೊಳಿಯವರನ್ನು ಸರಿಯಾಗಿಯೇ ಕಿಚಾಯಿಸಿದ್ದಾರೆ.

” ಏನಯ್ಯ ರಮೇಶಾ, ಆಗ ಬಾ ಅಂದಾಗ ಬಂದಿಲ್ಲ, ಈಗ ಬಂದ್ಯಾ? ”

ಅದಕ್ಕೆ ರಮೇಶ್ ಜಾರಕಿಹೊಳಿಯವರು ” ನಿಮ್ಮ ಆರೋಗ್ಯ ಮುಖ್ಯ ಸಾರ್. ನೀವು ನಮ್ಮ ಗುರುಗಳು.” ಅಂದಿದ್ದಾರೆ.

” ಏನು ಮಿನಿಸ್ಟರ್ ಆಗ್ತೀಯ ?” ಸಿದ್ದು ಕೇಳಿದ್ದಾರೆ.

” ನಿಮ್ಮ ಆಶೀರ್ವಾದ ಇರ್ಲಿ ಸಾರ್ ” ಅಂದಿದ್ದಾರೆ.

” ನಂದೇನಪ್ಪಾ, ನಿಮ್ಮ ಯಡಿಯೂರಪ್ಪನವರ ಆಶೀರ್ವಾದ ಇರ್ಬೇಕು ” ಇದು ಸಿದ್ದು ಮತ್ತು ರಮೇಶ್ ಜಾರಕಿ ಯವರ ನಡುವಿನ ಸಂಭಾಷಣೆಯ ತುಣುಕು.

ರಾಜಕೀಯ ವೈರತ್ವ ಬೇರೆ ಮಾನವೀಯ ಸಂಭಂದ ಬೇರೆ ಎಂದು ಮಾಜಿ ಗುರುಶಿಷ್ಯರು ತೋರಿಸಿಕೊಟ್ಟಿದ್ದಾರೆ.

Leave A Reply

Your email address will not be published.