ನಿರ್ಭಯಾ ಕೊಂದ ನಾಲ್ವರು ಹತ್ಯಾ-ಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗುವ ದಿನ ಸನ್ನಿಹಿತ । ಹಿಂಸೆಯನ್ನು ಇಷ್ಟರಮಟ್ಟಿಗೆ ವಿನೋದಿಸುವ ಅಗತ್ಯ ಇದೆಯಾ?
ನಿರ್ಭಯಾ ಕೊಂದ ನಾಲ್ವರು ಹತ್ಯಾ-ಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗುವ ದಿನ ಸನ್ನಿಹಿತವಾಗಿದೆ ಅನ್ನಿಸುತ್ತಿದೆ. ನಿರ್ಭಯಾ ಪೋಷಕರು ಇದೇ ಡಿಸೆ೦ಬರ್ 16 ಕ್ಕೇ ಆರೋಪಿಗಳಿಗೆ ಗಲ್ಲು ಶಿಕ್ಷೆನೀಡುವಂತೆ ಕೋರ್ಟನ್ನು ಒತ್ತಾಯಿಸಿದ್ದಾರೆ. ಯಾಕೆಂದರೆ, ಅದೇ ದಿನ, 2012 ರಂದು ಚಲಿಸುವ ಬಸ್ ನಲ್ಲಿ ನಿರ್ಭಯಾಳನ್ನುರೇಪ್ ಮಾಡಿ ಬಸ್ಸಿನಿಂದ ಹೊರಕ್ಕೆ ಬಿಸಾಕಿ ಹೋಗಿದ್ದರು. ಆದರೆ ಓವ್ರ ಆರೋಪಿ, ಮತ್ತೆ ಸುಪ್ರೀಂ ಕೋರ್ಟು ಮೆಟ್ಟಲು ಹತ್ತಿದ ಪರಿಣಾಮ, ಅದರ ವಿಚಾರಣೆ ಡಿಸೆ೦ಬರ್ 17 ಕ್ಕೆ ಮುಂದೂಡಿದೆ. ಹಾಗಾಗಿ ಮತ್ತೊಂದಷ್ಟು ದಿನ ಜೀವಚ್ಛವಗಳು ಉಸಿರಾಡಲಿದ್ದಾರೆ.
ದೆಹಲಿಯಲ್ಲಿ ಮಹಿಳೆಯರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಟಿವಿ ಮಾಧ್ಯಮಗಳು, ಗಲ್ಲು ಹಾಕುವ ಡೆಮೋ ತೋರಿಸುತ್ತಿವೆ. ಯಾವ ಸುದ್ದಿಮಾಧ್ಯಮದಲ್ಲಿ ಕೂಡಾ ಅದೇ ಸುದ್ದಿ.
ನಿಮಗೆಲ್ಲ ಏನೆನಿಸುತ್ತಿದೆಯೋ ಗೊತ್ತಿಲ್ಲ. ನನಗೆ ಇದೆಲ್ಲ ನೋಡಿ ಮೈಯೆಲ್ಲಾ ಮುಳ್ಳೆಬ್ಬುವಂತೆ ಹಿಂಸೆ ಆಗುತ್ತಿದೆ.
ಯಾಕೆ, ಹಿಂಸೆಯನ್ನು ಇಷ್ಟರಮಟ್ಟಿಗೆ ವೈಭವೀಕರಿಸುವ, ವಿನೋದಿಸುವ ಅಗತ್ಯ ಇದೆಯಾ? ಸಾವನ್ನು ಇಷ್ಟು ಉತ್ಕಟವಾಗಿ ಬಯಸುವುದು ತರವೇ ? ನಾವು ಯೋಚಿಸಬೇಕು.
ಹಂತಕರಿಗೆ ಗಲ್ಲು ಶಿಕ್ಷೆ ಕೊಟ್ಟ ಕೂಡಲೇ, ಅತ್ಯಾಚಾರಗಳು ನಿಲ್ಲುತ್ತದೆಯಾ ? ಭಾರತ ಮಾತ್ರವಲ್ಲ, ಪ್ರಪಂಚದಾದ್ಯಂತ ರೇಪ್ ಗಳು ದಿನನಿತ್ಯ ನಡೆಯುತ್ತಿವೆ. ಮುಂದುವರಿದ ದೇಶಗಳಲ್ಲೂ ಇದು ವಿಪರೀತಿ ವ್ಯಾಧಿಯಂತೆ ಹರಡಿದೆ.
ಕೇವಲ ಗಲ್ಲು ಶಿಕ್ಷೆ ವಿಧಿಸುವುದರಿಂದ ಇದು ನಿಲ್ಲುವುದಿಲ್ಲ. ಕಡಿಮೆ ಕೂಡಾ ಆಗುವುದಿಲ್ಲ. ಗಲ್ಲು ಶಿಕ್ಷೆ ನೀಡುವುದರ ಮೂಲಕ ನಡೆದ ರೇಪ್ ಮತ್ತು ಕೊಲೆಗೆ ನಾವು ನಮ್ಮ ಹಿಂಸಾತ್ಮಕ ಪ್ರತಿಕ್ರಿಯೆಯನ್ನು ನೀಡಬಲ್ಲೆವೇ ವಿನಾ ರೇಪ್ ಅನ್ನು ಇದರಿಂದ ತಡೆಯುವ ಪ್ರಿವೆಂಟಿವ್ ಕೆಲಸ ಅಸಾಧ್ಯ.
ಹಾಗಾದರೆ ರೇಪ್ ಕಡಿಮೆಯಾಗಲು ಮಾಡಬೇಕಾದ್ದಾದರೂ ಏನು ? ರೇಪ್ ಯಾಕೆ ಮಾಡುತ್ತಾರೆ ? ರೇಪ್ ನ ಹಿಂದಿನ ಮನಸ್ಥಿತಿ ಯಾವುದು? ಎಲ್ಲದರ ಬಗೆಗಿನ ಕಂಪ್ಲೀಟ್ ಮಾಹಿತಿ ಇನ್ನು ಹತ್ತು ದಿನದಲ್ಲಿ ನಿಮಗೆ ಕೊಡಲಿದ್ದೇನೆ. ಬಹುಶ ಅದರೊಳಗೆ, ನಿರ್ಭಯಾ ಹತ್ಯಾಚಾರಿಗಳ ಶಿಕ್ಷೆ ಜಾರಿಯಾಗಿರುತ್ತದೆ !
Just wait 10 days !
ದಯವಿಟ್ಟು ಹೊಸಕನ್ನಡ.ಕಾಮ್ ಗೆ ಲಾಗಿನ್ ಆಗಿ ನೋಟಿಫಿಕೇಶನ್ ಕ್ಲಿಕ್ ಮಾಡಿರಿ.
ಸುದರ್ಶನ್ ಬಿ.ಪ್ರವೀಣ್, ಬೆಳಾಲು