ಬೌನ್ಸರ್ ಬೈಕಿನಲ್ಲಿ ಬಂದು ತಲೆಗೆ ಸರಳಿನಿಂದ ಬೌನ್ಸ್ ಮಾಡಿ ಸರದೋಚುವ ಕಳ್ಳರು । ಹೊಸ ಟ್ರೆಂಡ್ ಶುರು !
ಟೆಕ್ನಾಲಜಿ ಬೇಸಿಸ್ ನ ಮೂಲಕ ಬೈಕ್/ಸ್ಕೂಟರ್ ಬುಕ್ ಮಾಡಿ ಓಡಿಸುವ ಬೌನ್ಸರ್ ಗಾಡಿಗಳು ಈಗ ಸರಗಳ್ಳರ ಪಾಲಿಗೆ ಈಜಿ ಎಸ್ಕೇಪ್ ಅಸ್ತ್ರವಾಗಿವೆ.
ಬೌನ್ಸರ್ ಗಾಡಿ ಬುಕ್ ಮಾಡು. ಹೆಲ್ಮೆಟ್ ಹಾಕ್ಕೋ. ಕಡಿಮೆ ಜನಸಂಚಾರವಿರುವ ಏರಿಯಾಗೆ ಹೋಗಿ, ಮಹಿಳೆಯರು ಓಡಾಡುತ್ತಿದ್ದರೆ, ಅತ್ತಿತ್ತ ನೋಡಿ ತಲೆಯಮೇಲೆ, ಭುಜದಮೇಲೆ ಹೊಡೆದು ಸರ ಕಿತ್ತುಕೊಂಡು ವೇಗವಾಗಿ ಬೌನ್ಸರ್ ಗಾಡೀಲಿ ಸ್ವಲ್ಪ ದೂರ ಹೋಗಿ ಆ ನಂತರ ಬಸ್ ಹತ್ಕೊಂಡು ಹೋದರೆ ಸಾಕು. ಒಳ್ಳೆ ಕಮಾಯಿ. ಒಂದು ಸರ ಕಮ್ಮಿಅಂದ್ರೂ 25000 ರೂಪಾಯಿ ಬೆಲೆಬಾಳುತ್ತದೆ. ಲಕ್ಷಕ್ಕಿಂತ ಬೆಲೆಬಾಳುವ ಸರಗಳೂ ಆವಾಗಾವಾಗ ಸಿಗುತ್ತದೆ. ಸ್ಕೂಟರ್ ಕೂಡ ನಮ್ಮದಲ್ಲದ ಕಾರಣ ಸಿಕ್ಕಿ ಬೀಳುವ ಸನ್ನಿವೇಶ ಕೂಡಾ ಇಲ್ಲ. ಇದು ಈಗ ಬೆಂಗಳೂರಿನಲ್ಲಿ ನಡೆಯುತ್ತಿರುವ ನಯಾ ಟ್ರೆಂಡ್.
ನಿನ್ನೆ ಮತ್ತೆ ಬೆಂಗಳೂರಿನ ಕೆ. ಆರ್. ಪುರಂ ನಲ್ಲಿ ಮಂಗಳೂರು ಮೂಲದ ಮಹಿಳೆಗೆ ಹೊಡೆದು ಸರ ದೋಚಿ ಪರಾರಿಯಾಗಿದ್ದರು.
ಅದು ಹೇಗೆ ಬೌನ್ಸ್ ಬೈಕ್ ಅನ್ನು ಅಪರಾಧಿಗಳು ಪಡೆಯುತ್ತಿದ್ದಾರೆ? ಬೌನ್ಸ್ ಬೈಕ್ ತೆಗೆದುಕೊಳ್ಳಲು ಒನ್ ಟೈಮ್ ಡ್ರೈವಿಂಗ್ ಲೈಸೆನ್ಸ್ ಮತ್ತಿತರ ಡಾಕ್ಯುಮೆಂಟ್ ಕೊಡಬೇಕು. ಬಹುಶ: ಸುಳ್ಳು ಕಾಗದಪತ್ರ ನೀಡಿ ತಮ್ಮ ಕೆಲಸ ಮಾಡಿಕೊಳ್ತಿರಬೇಕು.
ಜನ ಎಚ್ಹೊತ್ಕೋಬೇಕು ಜಾಗ್ರತೆಯಾಗಿರ್ಬೇಕು ; ಪೊಲೀಸ್ ಇಲಾಖೆ ಈ ಕೂಡಲೇ ಬೌನ್ಸ್ ಬ್ಯಾಕ್ ಆಗ್ಲೇಬೇಕು.