ಆಂಧ್ರಪ್ರದೇಶದಲ್ಲಿ Rape ಗೆ ಇನ್ನು ಕೇವಲ 21 ದಿನದೊಳಗೆ ಗಲ್ಲು ಶಿಕ್ಷೆ !
ಫಾಸ್ಟ್ ಟ್ರ್ಯಾಕ್ ನ್ಯಾಯದಾನ ಸಿಸ್ಟಮ್ ಗೆ ಆಂಧ್ರಪ್ರದೇಶ ಸರಕಾರ ಸಜ್ಜಾಗಿದೆ. ಇನ್ನು ಮುಂದೆ ರೇಪ್ ನಡೆದು 7 ದಿನಗೊಳಗೆ ಇನ್ವೆಸ್ಟಿಗೇಷನ್ ನಡೆಯಬೇಕು ಮತ್ತು ಮತ್ತೆ 7 ದಿನ, ಅಂದರೆ ಒಟ್ಟು14 ದಿನದೊಳಗೆ ಟ್ರೈಲ್ ಕೂಡ ಮುಗಿಸಿಬಿಡಬೇಕು. ಒಟ್ಟು 21 ದಿನದೊಳಗೆ ಗಲ್ಲುಶಿಕ್ಷೆ ವಿಧಿಸಬೇಕು.
ಮಸೂದೆಗೆ .ಪಿ. ದಿಶಾ ಮಸೂದೆ, 2019 (ಎ.ಪಿ. ಕ್ರಿಮಿನಲ್ ಕಾನೂನು (ತಿದ್ದುಪಡಿ) ಮಸೂದೆ, 2019) ಎಂದು ಹೆಸರಿಸಲಾಗಿದೆ.
ಇದಕ್ಕಾಗೇ ಆಂಧ್ರಪ್ರದೇಶ ಸರಕಾರವು ಸ್ಪೆಷಲ್ ಕೋರ್ಟನ್ನು ಸ್ಥಾಪಿಸಲು ಅನುಮತಿ ಇತ್ತಿದೆ. ಸಾಮೂಹಿಕ ಅತ್ಯಾಚಾರ, ಆಸಿಡ್ ದಾಳಿ, ಹಿಂಬಾಲಿಸುವುದು, ಲೈಂಗಿಕ ಕಿರುಕುಳ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯಡಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳನ್ನು ನಿಭಾಯಿಸಲು ಆಂಧ್ರ ಮುನ್ನಡಿಯಿಟ್ಟಿದೆ.
ಯಾವ ಸಂಧರ್ಭಗಳಲ್ಲಿ, ಸ್ಪಷ್ಟ ಸಾಕ್ಷಿ ಲಭ್ಯವಿರುತ್ತದೋ, ಅಂತಹ ಸಂಧರ್ಭದಲ್ಲಿ 21 ದಿನದಲ್ಲಿ ನ್ಯಾಯ ನೀಡುವ ಉದ್ದೇಶ ಇದರದ್ದು.
ಜಸ್ಟಿಸ್ ಡಿಲೇಡ್ ಈಸ್ ಜಸ್ಟಿಸ್ ಡಿನೈಡ್, ಅಂದರೆ ನ್ಯಾಯದಾನ ನಿಧಾನವಾದರೆ, ನ್ಯಾಯ ಸಿಗದಂತೆಯೇ ಎಂಬುದು ಹಳೆಯ ನಾಣ್ನುಡಿ. ಆದರೆ ಮರಣದಂಡನೆಗೆ ಅರ್ಹ ಕೇಸುಗಳಲ್ಲಿ ಅನವಶ್ಯಕ ಅರ್ಜೆನ್ಸಿ ನಿರಪರಾಧಿಗೆ ಶಿಕ್ಷೆಯಾಗುವ ಪ್ರಮಾದವೂ ಇದೆ.
ವಾಪಸ್ಸು ಸರಿಮಾಡಿಕೊಳ್ಳಲು, ಆಪಾದಿತ ಬದುಕಿರುವುದಿಲ್ಲವಲ್ಲ ?!