ಮ್ಯಾನೇಜ್ ಮೆಂಟ್ ಸ್ಟೋರಿ | ಹಿರಿಯರಿದ್ದಾರೆ ದಾರಿ ಕೊಡಿ
ಅದು ಮಧ್ಯಾಹ್ನದ ಲಂಚ್ ಬ್ರೇಕಿನ ಸಮಯ. ಸೇಲ್ಸ್ ರೆಪ್, ಆಫೀಸಿನ ಕ್ಲಾರ್ಕು ಮತ್ತು ಆಫೀಸಿನ ಮ್ಯಾನೇಜರು- ಮೂವಾರೂ ಒಂದು ಫರ್ಲಾ೦ಗು ದೂರದ ಮೆಸ್ಸ್ ಗೆ ಊಟಕ್ಕೆಹೋಗಿದ್ದರು.
ಅವರ ಅದೃಷ್ಟ. ಒಂದು ಮಾತ್ರಿಕ ದೀಪ ಅವರ ಮುಂದೆ ದಿಢೀರ್ ಆಗಿ ಹಚ್ಚ ಹಗಲಲ್ಲೇ ಅವರ ಮುಂದೆ ಪ್ರತ್ಯಕ್ಷ. ಒಂದು ಕ್ಷಣ ಏನು ಮಾಡಬೇಕೆಂದು ಅವರಿಗೆ ತಬ್ಬಿಬ್ಬು. ಹಿಂದೆ ಕಥೆಗಳಲ್ಲಿ ಓದಿದ್ದು ಅವರಿಗೆ ನೆನಪಿಗೆ ಬಂದು, ಆ ದೀಪವನ್ನು ಉಜ್ಜಿದರು. ಮೊದಲು ಭುಸ್ಸೆಂದು ಹೊಗೆ ಉಗುಳಿತು. ನಂತರ ಒಂದು ಧೂಮಮೂರ್ತಿ ಆ ಹೊಗೆಯಿಂದಲೇ ಮಾತಾಡಿತು.
” ನನ್ನಲ್ಲಿ ನೀವು ಮೂರು ವರವನ್ನು ಕೇಳಿಕೊಳ್ಳಿ. ಒಬ್ಬೊಬ್ಬರಿಗೆ ಒಂದೊಂದು ವರ ನೀಡುತ್ತೇನೆ.”
ಸೇಲ್ಸ್ ರೆಪ್ ಗೆ ಇನ್ನಿಲ್ಲದ ಆತುರ. ಎಷ್ಟಾದರೂ ಮಾರ್ಕೆಟಿಂಗ್ ಮಾಡುವ ವ್ಯಕ್ತಿಯಲ್ಲವೇ? “ನಾನು ಮೊದಲು, ನಾನು ಮೊದಲು” ಎಂದು ಕಿರುಚುತ್ತಾ,” ನಾನು ಖಂಡಾಂತರಗಳನ್ನು ಗಾಳಿಯಲ್ಲಿ ತೇಲುತ್ತಾ ದೇಶವಿದೇಶ ಸುತ್ತುವಂತಾಗಲಿ” ಎಂದು ಕೇಳಿಕೊಂಡ.
“ತಥಾಸ್ತು” ಅಂದಿತು ಮಾಂತ್ರಿಕ ದೀಪ.
ಈಗ ನಾನು ಎಂದು ಕೂಗಿದ ಕ್ಲರ್ಕು. ” ನನಗೆ ಖರ್ಚುಮಾಡದಷ್ಟು ಸಂಪತ್ತು ಮತ್ತು ಸುರಸುಂದರಾಂಗಿಣಿಯರೊಂದಿಗೆ ಸಮುದ್ರಯಾನ ಮಾಡುವಂತಾಗಲಿ. ಅದಕ್ಕೂ”ತಥಾಸ್ತು” ಅಂದಿತು ಮಾಂತ್ರಿಕ ದೀಪ.
ಈಗ ಮ್ಯಾನೇಜರಿನ ಸರದಿ. ಆತ ಕೇಳಿದ :
” ಈ ಕ್ಲಾರ್ಕು ಮತ್ತು ಸೇಲ್ಸ್ ರೆಪ್, ಈ ಕೂಡಲೇ ಕೆಲಸಕ್ಕೆ ಹಾಜರಾಗಲಿ !! ”
ಇದು ಬಾಸಿನ ಅಹಂನ ಕಾರಣದಿಂದ ಮಾತ್ರ ಆಗಿರಲಾರದು. ಸಹಜವಾಗಿ ಮನೆಯಲ್ಲಿ ಅಪ್ಪ-ಅಮ್ಮ-ಅಜ್ಜ ಮುಂತಾದ ಹಿರಿಯರು, ಆಫೀಸಿನಲ್ಲಿ ನಿಮ್ಮ ಬಾಸು, ಹಿರಿಯ ಸಹೋದ್ಯೋಗಿಗಳು ನಮಗಿಂತ ವಯಸ್ಸಿನಲ್ಲಿ, ಕೆಲಸದ ಅನುಭವದಲ್ಲಿ, ಜೀವನಾನುಭವದ ಹಿರಿಯರಾಗಿರುತ್ತಾರೆ. ಅವರನ್ನು ಮೊದಲು ಮಾತಾಡಲು ಬಿಡುವುದು ಒಳ್ಳೆಯದು. ಯಾವುದೇ ಘಟನೆಗೆ ಅವರನ್ನು ಮೊದಲು ರಿಯಾಕ್ಟ್ ಮಾಡಲು ಬಿಡಬೇಕು, ಅಥವಾ ಅವರನ್ನು ಪರ್ಮಿಷನ್ ಕೇಳಿ, ನಾವು ಲೀಡ್ ತಗೊಳ್ಳಬೇಕು.
” ನಾನು ಉತ್ತರಿಸಲಾ?”, ” ಶಲ್ ಐ ಟೇಕ್ ದಿ ಲೀಡ್? ”, ” ನೀವು ಪರ್ಮಿಷನ್ ಕೊಟ್ರೆ ಐ ಸ್ಪೀಕ್ ” ಮುಂತಾಗಿ ಅವರ ಪರ್ಮಿಷನ್ ಕೇಳಿ ಮುಂದುವರೆಯಿರಿ.
ಹಾಗೊಂದು ವೇಳೆ ಅವರನ್ನು ಓವರ್ ರೈಡ್ ಮಾಡಿ ನೀವು ಮುಂದುವರೆಯಬೇಕಾದ ಪಕ್ಷದಲ್ಲೂ ನೀವು ಈ ರೀತಿ ಮಾಡಬಹುದು.
”ಡಿಯರ್ ಸರ್, ನಿಮ್ಮ ಪರ್ಮಿಷನ್ ಇದೆ ಅಂದ್ಕೊಂಡು, ನಾನೀ ವಿಷ್ಯದ ಬಗ್ಗೆ ವಿವರಿಸಿ ಹೇಳಲು ಇಷ್ಟಪಡುತ್ತೇನೆ ಅಥವಾ ಈ ಪ್ರಶ್ನೆಗೆ ಉತ್ತರಿಸುತ್ತೇನೆ ” ಹೀಗೆ ಏನು ಬೇಕಾದರೂ ಹೇಳಬಹುದು, ನಿಮ್ಮವರ ಪರ್ಮಿಶನ್ ಗೆ ಕಾಯದೇನೆ !
ಇಂತಹ ನಡವಳಿಕೆ ಸಹಜ ಮತ್ತು ಹಿರಿಯರ ಮುಂದೆ ಯಾವಾಗಲೂ ಸಹ್ಯ. ನಮ್ಮನ್ನು ಅಪಾರ್ಥಮಾಡಿಕೊಳ್ಳುವ ಸಂಭವ ಅವಾಗ ಇರಲ್ಲ. ಬೇರೆಯವರನ್ನೇ ಮುಂದೆ ಬಿಟ್ಟು ನಾವು ಹಿಂದೆ ಸರಿದರೆ, ನಮ್ಮನ್ನು ‘ ಸಬ್ಮಿಸ್ ಮಿಸ್ಸಿವ್ ‘ ( ಕೀಳರಿಮೆಯವರು) ಅನ್ನಬಹುದು, ನಾವು ಎಲ್ಲರನ್ನು ಬಾಡಿಗೆ ತಳ್ಳಿ ಮುನ್ನುಗ್ಗಿದರೆ, ‘ಅಗ್ಗ್ರೆಸ್ಸಿವ್ ‘ ( ಆಕ್ರಮಣಶೀಲರು) ಅಂತ ಕರಿಯಬಹುದು.
ನಾನು ಮೇಲೆ ಹೇಳಿದಂತೆ ಮಾಡಿದರೆ, ನಮ್ಮನ್ನು ಈ ಜಗತ್ತು ‘ ಅಸರ್ಟಿವ್ ಬಿಹೇವಿಯರ್ ‘ ಉಳ್ಳ ವ್ಯಕ್ತಿ ಅಂದು ಕರೆಯುತ್ತದೆ. ಅದೇ ತಾನೇ ನಮಗೆ ಬೇಕಾದದ್ದು !
ಸುದರ್ಶನ್ ಬಿ. ಪ್ರವೀಣ್, ಬೆಳಾಲು ( ಮ್ಯಾನೇಜ್ ಮೆಂಟ್ ಸಂಬಂಧಿತ ವಿಷಯದ ವಿಸ್ತೃತ ರೂಪ )